By Village Missionary Movement
Sunday, 18-Sep-2022ಧೈನಂದಿನ ಧ್ಯಾನ(Kannada) – 18.09.2022 (Kids Special)
ಇಲಿಮರಿಯ ಚೇಷ್ಟೆಗಳು
“ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ; ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ” - ಕೊಲೊಸ್ಸೆ 3:20,21
ಮನೆಯೊಂದರ ಪಕ್ಕದ ಗುಡಿಸಲಿನಲ್ಲಿ ಇಲಿಯೊಂದು ತನ್ನ ಮರಿಗಳೊಂದಿಗೆ ವಾಸವಾಗಿತ್ತು. ಮನೆಯೊಳಗೆ ಇಲಿಗಳು ಬರಲು ಪ್ರಾರಂಭಿಸಿದರೆ ಅವುಗಳ ಕಾಟ ಸಹಿಸೋಕೆ ಆಗೋದಿಲ್ಲ ಅಲ್ವಾ? ಟೊಮ್ಯಾಟೊ, ಆಲೂಗಡ್ಡೆ ಮತ್ತು ಅಕ್ಕಿ ಚೀಲಗಳನ್ನು ಇವು ಬಿಡೋದಿಲ್ಲ. ಅಷ್ಟೇ ಯಾಕೆ? ಬಟ್ಟೆಗಳನ್ನು ಸಹ ಕಚ್ಚಿ ನಾಶಮಾಡುತ್ತೆ. ಏನು ಪುಟಾಣಿಗಳೇ ನಿಮ್ಮ ಮನೆಯಲ್ಲೂ ಇಲಿಗಳ ಕಾಟವನ್ನು ಸಹಿಸೋಕೆ ಆಗ್ತಿಲ್ವಾ? ಸರಿ ಸರಿ... ಈ ಪುಟ್ಟ ಇಲಿಯಿಂದ ನಾವೇನು ಕಲಿಯಲಿದ್ದೇವೆ ಎಂಬ ಕಥೆಯನ್ನು ಕೇಳೋಣ್ವಾ.
ತಾಯಿ ಇಲಿ ತನ್ನ ಮೂರು ಮರಿಗಳಿಗೂ ಆಹಾರ ನೀಡಿ ಆರೈಕೆ ಮಾಡುತ್ತಿತ್ತು. ಈ ಮನೆಯ ಬಾಗಿಲಿನಿಂದ ಒಳಗೆ ಪ್ರವೇಶಿಸಬಾರದು. ಮೀಸೆಯವನು ನಿಮ್ಮನ್ನು ಹಿಡಿದು ಕೊಂದು ಬಿಡುತ್ತಾನೆ” ಎಂದು ತನ್ನ ಮರಿಗಳಿಗೆ ಸಲಹೆ ನೀಡಿತು. ಸರಿ ಅಮ್ಮ ಎಂದು ಮೂರು ಮರಿಗಳೂ ಕೋರಸ್ನಲ್ಲಿ ಹೇಳಿದವು. ತಾಯಿ ಇಲಿ ಹೊರಗೆ ಹೋದ ಕೂಡಲೇ ಚೇಷ್ಟೆಯ ಪುಟ್ಟ ಇಲಿ ಗುಡಿಸಲಿನಿಂದ ಹೊರಬಂದು ಇಣುಕಿ ನೋಡಿತು. “ಆಹಾ... ಸುಂದರವಾದ ಬೆಳಕು.. ಈ ಮನೆ ಎಷ್ಟು ಸುಂದರ ಮತ್ತು ಭವ್ಯವಾಗಿ ಕಾಣುತ್ತಿದೆ. ಈ ಮನೆಯೊಳಗೆ ಹೋದರೆ ಎಷ್ಟು ಚೆನ್ನಾಗಿರುತ್ತೆ” ಅಂದುಕೊಂಡು ವೇಗವಾಗಿ ಓಡತೊಡಗಿತು. ಮನೆಯಲ್ಲಿ ಯಾರೂ ಇರಲಿಲ್ಲ. "ಸೋಫಾಸೆಟ್ ಜಮ್.. ಜಮ್ ಅಂಥಾ ಸೂಪರ್ ಆಗಿದೆ!" ಲೈಟ್, ಬೀರು, ಮಂಚ, ಇದನ್ನೆಲ್ಲ ನೋಡಿ ಬೆರಗಾಗಿತ್ತು. “ಅಮ್ಮ ಬೇರೆ ಮೀಸೆಯವನು ಇರುತ್ತಾನೆ ಅಂತ ಹೇಳಿದ್ರು! ಸರಿ, ಮನೆಗೆ ಹೋಗ್ಬಿಡೋಣ" ಎಂದು ಯೋಚಿಸಿದ ಇಲಿ ಮರಿಗೆ ... ಕರ್ಮೀನು ವಾಸನೆ ಮೂಗು ಹಿಂಡುತ್ತಿತ್ತು ಹಾಗೇ ಸ್ವಲ್ಪ ಅಡುಗೆ ಮನೆಯನ್ನು ಇಣುಕಿ ನೋಡಿತು. "ಛೇ, ನನಗಾಗಿಯೇ ಊಟ ತಯಾರಿಸಿ ಇಟ್ಟಿದ್ದಾರೆ! ಇವತ್ತು ನಮಗೆ ಹಬ್ಬಾನೆ” - ಅಂಥಾ ಅಂದ್ಕೊಂಡು ಚೆನ್ನಾಗಿ ಹೊಟ್ಟೆ ತುಂಬಾ ಊಟ ಮಾಡಿತು. ಇದ್ದಕ್ಕಿದ್ದಂತೆ ತನಗೆ "ಡಮಾಲ್" ಎಂಬ ಶಬ್ದ ಕೇಳಿಸಿತು. ಮನೆಯವರು ಬಾಗಿಲು ತೆರೆದು ಒಳಗೆ ಬಂದರು. “ಅಪ್ಪಾ ಸ್ವಾಮಿ ಎಷ್ಟು ದೊಡ್ಡ ಮೀಸೆ. ನಾನು ಇವರ ಮೀಸೆಯಷ್ಟೂ ಇಲ್ವೇ! ಹೇಗೆ ತಪ್ಪಿಸಿಕೊಳ್ಳೋದು? ” ಎಂಬ ಭಯದಲ್ಲಿ ಓಡಿತು. ಕಿಟಕಿ-ಬಾಗಿಲುಗಳನ್ನೆಲ್ಲ ಮುಚ್ಚಿ ನಡೆದು ಬರುತ್ತಿದ್ದ ಮೀಸೆಯವನನ್ನು ಕಂಡರೇನೆ, "ಇವತ್ತು ನಮ್ಮ ಕಥೆ ಮುಗಿಯಿತು" ಎಂದುಕೊಂಡು, ತಪ್ಪಿಸಿಕೊಳ್ಳಲು ದಾರಿಯೇ ಇಲ್ವೇ? ಎಂದು ಅಂಗಲಾಚುತ್ತಿದ್ದ ಪುಟ್ಟ ಇಲಿಯ ಕಣ್ಣುಗಳಿಗೆ ತ್ಯಾಜ್ಯ ನೀರು ಹೋಗುವ ಪೈಪ್‌ನಲ್ಲಿರುವ ಸಣ್ಣ ಗ್ಯಾಪ್ ಕಾಣಿಸಿತು. ದೊಪ್ಪನೆ ಅದರಲ್ಲಿ ಜಿಗಿದು "ಅಪ್ಪಾ ದೇವರೇ, ನಾನು ಇನ್ನು ಮುಂದೆ ಅಮ್ಮನ ಮಾತನ್ನು ಕೇಳಿ ಒಳ್ಳೆಯ ಇಲಿಮರಿಯಾಗಿ ಇರುತ್ತೇನೆ" ಎಂದು ನಿಟ್ಟುಸಿರು ಬಿಟ್ಟಿತು.
ಪ್ರೀತಿಯ ಪುಟಾಣಿಗಳೇ, "ಅಮ್ಮನ ಮಾತನ್ನು ಕೇಳದೇ ಹೋದದ್ದರಿಂದ ಆಪತ್ತು ಬಂತು?" ಎಂಬ ಕಥೆಯನ್ನು ನೀವು ಕೇಳುದ್ರಿ ಅಲ್ವಾ? ನಿಮ್ಮ ಪ್ರಯೋಜನಕ್ಕಾಗಿ ನಿಮ್ಮ ಪೋಷಕರು ಹೇಳುವ ಮಾತನ್ನು ಮೀರಬಾರದು. ನಿಮ್ಮ ವಿಧೇಯತೆಯೇ ಆಶೀರ್ವಾದದ ಮಾರ್ಗವಾಗಿರುತ್ತದೆ. ಏನು ಪುಟಾಣಿಗಳೇ! ಓಕೆ ತಾನೇ!
- Mrs. ಅನ್ಬುಜ್ಯೋತಿ ಸ್ಟಾಲಿನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482