Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.09.2022
Share:

By Village Missionary Movement

Friday, 16-Sep-2022

ಧೈನಂದಿನ ಧ್ಯಾನ(Kannada) – 17.09.2022

 

ಕಣ್ಣೀರಿನ ಬುದ್ಧಲಿ

 

"...ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು..." - ಪ್ರಕ. 7:17

 

ಪ್ರಾಚೀನ ಕಾಲದಲ್ಲಿ ಪೇರ್ಷಿಯಾ ದೇಶದಲ್ಲಿ ಒಂದು ಪದ್ಧತಿ ಇತ್ತು. ದುಃಖದ ಗುಂಪುಗಳು ಕೂಡುವ ಸ್ಥಳಗಳಲ್ಲಿ ಅಲ್ಲಿರುವ ಯಾಜಕರು ಅಳುತ್ತಿದ್ದವರ ಕಣ್ಣೀರನ್ನು ಹತ್ತಿಯ ಮೂಲಕ ಸಂಗ್ರಹಿಸಿ, ಅವುಗಳನ್ನು ಹಿಂಡಿ, ಸುರಕ್ಷಿತವಾಗಿ ಬುದ್ಧಲಿಗಳಲ್ಲಿ ಇಡುತ್ತಿದ್ದರು. ಔಷಧಿಗಳ ಬಳಕೆಯು ವಿಫಲವಾಗಿ ಸಾವಿನ ಅಂಚಿನಲ್ಲಿರುವ ಜನರಿಗೆ ಈ ಕಣ್ಣೀರನ್ನು ಉಪಯೋಗಿಸಿದರೆ ಅವರಿಗೆ ಮರುಜೀವ ಬರುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ತಮ್ಮ ಪ್ರೀತಿಪಾತ್ರರ ಮರಣದ ನಂತರ, ಅವರು ನೈವೇದ್ಯವಾಗಿ ಬಾಟಲಿಗಳಲ್ಲಿ ಕಣ್ಣೀರನ್ನು ಸುರಿಯುತ್ತಾರೆ ಮತ್ತು ಶವಗಳೊಂದಿಗೆ ಆ ಕಣ್ಣೀರಿನ ಬಾಟಲಿಗಳನ್ನು ಹೂಳುತ್ತಿದ್ದರು.

 

ಸತ್ಯವೇದದಲ್ಲಿ ಕಣ್ಣೀರಿನಿಂದ ಹುಡುಕುವ ಯಾರನ್ನೂ ದೇವರು ಎಂದಿಗೂ ಕೈಬಿಡಲೇ ಇಲ್ಲ. ಮಗುವಿನಂತೆ ಅಳುತ್ತಿದ್ದ ಹಾಗರಳು (ಆದಿ. 21:16), ತನ್ನ ಮಗನನ್ನು ಕಳೆದುಕೊಂಡು ದುಃಖಿಸುತ್ತಿದ್ದ ನಾಯಿನೆಂಬ ಊರಿನ ವಿಧವೆ (ಲೂಕ 7:12,13), ಅರಸನಾದ ಹಿಜ್ಕೀಯ. (ಯೆಶಾಯ 38:3), ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ಎದೆಯನ್ನು ಬಡುಕೊಳ್ಳುತ್ತಿದ್ದ ಸುಂಕದವನು (ಲೂಕ 18:13) ಇವರೆಲ್ಲರೂ ಕರ್ತನಿಂದ ಪಡೆದುಕೊಂಡದ್ದು ಅದ್ಬುತ,ಅದ್ಬುತ. ಇದಕ್ಕಾಗಿಯೇ ಅರಸನಾದ ದಾವೀದನು, "ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆ ಎಂದರು.

 

ಹೌದು ನನ್ನ ಪ್ರಿಯರೇ! ಜೀವನದ ಕಹಿ, ವೈಫಲ್ಯ, ಅನಾರೋಗ್ಯ, ಹೊರೆ, ನಿರಾಶೆ ಮತ್ತು ನಷ್ಟಗಳಿಂದ ನೀವು ಮುಳುಗಿದ್ದೀರಾ? ನಿಮ್ಮ ಕಣ್ಣೀರನ್ನು ಎಣಿಸುವ ದೇವರು ನಿಮ್ಮೊಂದಿಗಿದ್ದಾರೆ. ಸಾಂತ್ವನಕ್ಕಾಗಿ ದೇವರ ಕಡೆಗೆ ನೋಡಿರಿ, ಮನುಷ್ಯರನ್ನಲ್ಲ. ಆತನು ನಮ್ಮನ್ನು ಕೈ ಹಿಡಿದು ನಡೆಸುವಾತನು ಮತ್ತು ಮರಣದ ವರೆಗೂ ನಮ್ಮೊಂದಿಗಿರುವಾತನು. ಅವರು ನಿಮ್ಮ ದುಃಖವನ್ನು ಸಂತೋಷವಾಗಿ ಮಾರ್ಪಡಿಸುತ್ತಾರೆ.

 

1 ಸಮುವೇಲ ಮೊದಲನೆಯ ಅಧ್ಯಾಯದಲ್ಲಿ ನಾವು ಹನ್ನಳ ಬಗ್ಗೆ ಓದುತ್ತೇವೆ. ಅವಳಿಗೆ ಮಕ್ಕಳಿಲ್ಲದ ಕಾರಣ, ಅನೇಕರು ಅವಳನ್ನು ಹಿಂಸಿಸಿದರು. ಮಾನಸಿಕ ಸಂಕಟದ ಉತ್ತುಂಗದಲ್ಲಿ, ಅವಳು ದೇವರ ಆಲಯಕ್ಕೆ ಹೋಗಿ ಮೊಣಕಾಲೂರಿ ಅಳುತ್ತಾ ಪ್ರಾರ್ಥಿಸುತ್ತಾಳೆ. ಅವಳ ತುಟಿಗಳು ಮಾತ್ರ ಅಲ್ಲಾಡುತ್ತಿದ್ದವು ಆದರೆ ಅವಳ ಧ್ವನಿ ಕೇಳಲಿಲ್ಲ. ಯಾಜಕನಾದ ಏಲಿಯು, ಆಕೆ ಮದ್ಯಪಾನಮಾಡಿದ್ದಾಳೆಂದು ಭಾವಿಸುತ್ತಾರೆ. ಆದರೆ ಅವಳ ಕಣ್ಣೀರಿನ ಧ್ವನಿಯನ್ನು ಕೇಳಿದ್ದು ದೇವರು ಮಾತ್ರವೇ. ಅವರು ಅವಳ ಕಣ್ಣೀರನ್ನು ಸಂತೋಷವಾಗಿ ಪರಿವರ್ತಿಸಿ ಸಮುವೇಲನನ್ನು ಕೊಟ್ಟರು. ಹನ್ನಳು ಜನರನ್ನು ಹುಡುಕದೆ ದೇವರನ್ನು ನಂಬಿ ಓಡಿದಳು. ಅವಳು ಅದ್ಬುತವನ್ನು ಪಡೆದುಕೊಂಡಳು. ಹಾಗೆಯೇ ನಾವು ಸಹ ದೇವರ ಸನ್ನಿಧಿಯಲ್ಲಿ ಕಣ್ಣೀರು ಸುರಿಸೋಣ. ಕಣ್ಣೀರನ್ನು ಎಣಿಸುವವರು ನಮ್ಮ ಕರ್ತನೊಬ್ಬನೇ.

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ಇಂದು ತೇನಿಯಲ್ಲಿ ನಡೆಯುವ ಉಜ್ಜೀವನವನ್ನು ಬಯಸುವವರ ಶಿಬಿರಕ್ಕಾಗಿ, ನಾಳೆ ತಿರುಮಂಗಲಂ ನಲ್ಲಿ ನಡೆಯಲಿರುವ ಶಿಬಿರದಲ್ಲೂ ದೇವರು ತನ್ನ ಶಕ್ತಿಯನ್ನು ತೋರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino