Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.09.2022
Share:

By Village Missionary Movement

Thursday, 15-Sep-2022

ಧೈನಂದಿನ ಧ್ಯಾನ(Kannada) – 16.09.2022

 

ಧಾರಾಳವಾಗಿ

 

"…ಶಕ್ತ್ಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು..." - 2 ಕೊರಿಂಥ. 8:3

 

ಧಾರಾಳವಾಗಿ ಎಂಬುದಕ್ಕೆ ಇಪ್ಪತ್ತನೇ ಶತಮಾನದ ಒಂದು ಉತ್ತಮವಾದ ಕಾರ್ಯ ಇಲ್ಲಿದೆ ನೋಡಿ! ಸ್ಟ್ಯಾನ್‌ಫೋರ್ಡ್ ಕೆಲ್ಲಿ ಎಂಬವರು ಹೈತ್ತಿ ಎಂಬ ದೇಶಕ್ಕೆ ಮಿಷಿನರಿಯಾಗಿ ಹೋದರು. ಅವರು ಸೇವೆ ಮಾಡುತ್ತಿದ್ದ ಆ ಚಿಕ್ಕ ಸಭೆಯಲ್ಲಿ ಕಾಣಿಕೆಯನ್ನು ತೆಗೆದುಕೊಳ್ಳುತ್ತಿದ್ದಾಗ ಕಾಣಿಕೆಯ ಮಧ್ಯದಲ್ಲಿ 300 ರೂ.ಗೆ ಸಮಾನವಾದ ಕರೆನ್ಸಿ ನೋಟು ಸಿಕ್ಕಿತು. ಅದು ಆ ಬಡ ದೇಶದಲ್ಲಿ ಒಂದು ತಿಂಗಳ ಸಂಬಳಕ್ಕೆ ಸಮ. ಒಂದು ಶ್ರೀಮಂತ ದೇಶದಲ್ಲಿ ಒಂದು ಲಕ್ಷ ರೂಪಾಯಿಗಳ ಚೆಕ್ ಅನ್ನು ಕಾಣಿಕೆಯಲ್ಲಿ ನೋಡಿದಾಗ, ಆ ದೇಶದ ಸೇವಕರು ಎಷ್ಟು ಸಂತೋಷಪಡುತ್ತಾರೋ ಆ ರೀತಿಯಾಗಿ ಕೆಲ್ಲಿ ಆಶ್ಚರ್ಯವಾಗಿ ನಿಂತರು.

 

ಈ ಅಸಾಮಾನ್ಯ ಕಾಣಿಕೆಯನ್ನು ಒಬ್ಬ ರೈತ ನೀಡಿದ್ದಾನೆ ಎಂಬುದನ್ನು ಕಂಡುಕೊಂಡರು. ಕೆಲ್ಲಿ ಆ ರೈತನನ್ನು ನೇರವಾಗಿ ವಿಚಾರಿಸಿದಾಗ, ಅವರು ಉತ್ತರಿಸಲು ಹಿಂಜರಿದರು. ಸತತವಾಗಿ ಆತನನ್ನು ಬಲವಂತ ಮಾಡಿದಾಗ ಆ ರೈತ ತನ್ನ ಪ್ರಾಣದಂತಿದ್ದ ಕುದುರೆಯನ್ನು ಮಾರಿ ಆ ಹಣವನ್ನು ಕೊಟ್ಟೆ ಎಂದು ಹೇಳಿದ್ದನ್ನು ಕೇಳಿ ಕೆಲ್ಲಿಗೆ ಆಶ್ಚರ್ಯವಾಯಿತು. "ಯಾಕೆ ನೀವೇ ಚರ್ಚ್‌ಗೆ ಬಂದು ಆ ಕಾಣಿಕೆಯನ್ನು ಕೊಟ್ಟಿರಬಹುದಲ್ಲಾ?" ಎಂದು ಕೆಲ್ಲಿ ಕೇಳಿದರು. "ಧರಿಸಲು ಒಂದೂ ಮೇಲಂಗಿಯೂ ಸಹ ಇಲ್ಲದಿರುವುದೇ ಕಾರಣ" ಎಂದು ರೈತ ಉತ್ತರಿಸಿದರು.

 

ಇಂದು ನಾವು ಕಾಣಿಕೆಯನ್ನು ನೀಡುವ ವಿಧಾನ ಹೇಗಿದೆ? ನಾವು ಯಾರಿಗೂ ತಿಳಿಯದಂತೆ ಉದಾರವಾಗಿ ಕೊಡುತ್ತೇವೆಯೇ? ಅಥವಾ ನಾವು ಇತರರಿಗೆ ಗೊತ್ತಾಗಬೇಕೆಂದು ನೀಡುತ್ತೇವೆಯೇ? ಎಷ್ಟೋ ಸಲ ನಾವು ದೇವರಿಗೆ ಕಾಣಿಕೆ ಕೊಡುವಾಗ ಮನುಷ್ಯರು ಹೊಗಳಬೇಕು ಎಂಬ ಕಲ್ಪನೆಯಿಂದ ಕೊಡುತ್ತೇವೆ! ನಾನು ಕೊಟ್ಟದ್ದು ನಾಲ್ಕು ಜನಕ್ಕೆ ಗೊತ್ತಾಗಬೇಕು ಎಂಬ ಮನಸ್ಥಿತಿ ನಮ್ಮದು. ಆದರೆ ಕರ್ತನಾದ ಯೇಸು ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿದಾಗ, ಅವರು ಬಡ ವಿಧವೆಯ ಕಾಣಿಕೆಯ ಬಗ್ಗೆ ಮಾತನಾಡಿದರು. ಅವಳು ತನ್ನ ಜೀವನೋಪಾಯಕ್ಕೆ ಅಗತ್ಯವಾಗಿದ್ದ ಎರಡು ನಾಣ್ಯಗಳನ್ನೂ ಕಾಣಿಕೆಯಾಗಿ ಕೊಟ್ಟು ಬಿಟ್ಟಳು. ಅದೇ ರೀತಿಯಲ್ಲಿ, ಮಕೆದೋನ್ಯ ಜನರ ಬಗ್ಗೆ ಮಾತನಾಡುವಾಗ, ಅವರು ಧಾರಾಳವಾಗಿ ಕೊಟ್ಟಿದ್ದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಪೌಲನು ಹೇಳುತ್ತಾರೆ. ಬಡ ವಿಧವೆಯಂತೆ ದೇವರಿಂದಲೇ ಮೆಚ್ಚುಗೆ ಪಡೆಯುವಷ್ಟು ಮಟ್ಟಿಗೆ ನಮಗಿರುವದನ್ನೇ ದೇವರಿಗೆ ಕೊಡೋಣವಾ?

 

ಸತ್ಯವೇದವು ಹೇಳುತ್ತಿದೆ "ನಿನ್ನ ಬಲಗೈ ಮಾಡುವುದು ನಿನ್ನ ಎಡಗೈಗೂ ಸಹ ತಿಳಿಯದಿರಲಿ" ಎಂದು. ಆದ್ದರಿಂದ, ನಾವು ಸಹ ಮೇಲೆ ನೋಡಿದ ವ್ಯಕ್ತಿಗಳಂತೆ ಧಾರಾಳವಾಗಿ ಕೊಡೋಣ. ದೇವರಿಂದ ಒಳ್ಳೆಯ ಸಾಕ್ಷಿಯನ್ನು ಪಡೆಯೋಣ. ಆಮೆನ್!

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಗಳಲ್ಲಿ ಕೆಲಸ ಮಾಡುತ್ತಿರುವ ಸೇವಕರನ್ನು ದೇವರು ವಿಶೇಷವಾದ ಆತ್ಮದಿಂದ ತುಂಬಿಸಿ ಮುನ್ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al