Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.09.2022
Share:

By Village Missionary Movement

Wednesday, 14-Sep-2022

ಧೈನಂದಿನ ಧ್ಯಾನ(Kannada) – 15.09.2022

 

ಯುದ್ಧದ ಆಯುಧ

 

 "...ಸೈತಾನನನ್ನು ಎದುರಿಸಿರಿ..." - ಯಾಕೋಬ 4:7

 

ಪ್ರತಿಯೊಂದು ದೇವರ ಮಕ್ಕಳಿಗೂ ಪ್ರತಿದಿನ ಆಧ್ಯಾತ್ಮಿಕ ಹೋರಾಟವಿದೆ. ಆದ್ದರಿಂದ ಯಾವೊಂದು ದೇವರ ಮಕ್ಕಳೂ ಅಜಾಗರೂಕತೆಯಿಂದ ದಿನವನ್ನು ಪ್ರಾರಂಭಿಸಬಾರದು.

 

ಹರ್ಬ್ ಕಾಯೆನ್ ಎಂಬ ಬರಹಗಾರ ಇದನ್ನು ಪತ್ರಿಕೆಯೊಂದರಲ್ಲಿ ಹೀಗೆ ಬರೆದಿದ್ದಾರೆ. ಆಫ್ರಿಕಾದಲ್ಲಿ ಅತ್ಯಂತ ವೇಗವಾಗಿ ಓಡುವ ಜಿಂಕೆಯಾದ ಗೆಜೆಲ್ ಪ್ರತಿದಿನ ಬೆಳಿಗ್ಗೆ ಎಚ್ಚರಗೊಳ್ಳುತ್ತದೆ. “ಅಂದು ಸಿಂಹವು ತನ್ನನ್ನು ಹಿಂಬಾಲಿಸುವುದಕ್ಕಿಂತ ವೇಗವಾಗಿ ಓಡದಿದ್ದರೆ ನಾವು ಕೊಲ್ಲಲ್ಪಡುತ್ತೇವೆ” ಎಂದು ಅದು ತಿಳಿದುಕೊಂಡಿದೆ. ಪ್ರತಿದಿನ ಬೆಳಿಗ್ಗೆ ಒಂದು ಸಿಂಹವೂ ಸಹ ಎಚ್ಚರಿಕೆಯಿಂದ ಎದ್ದೇಳುತ್ತದೆ. "ಅಂದಿನ ದಿನದಲ್ಲಿ ಬಹು ವೇಗವಾಗಿ ಓಡುವ ಗೆಜೆಲ್‌ ಜಿಂಕೆಗಿಂತ ವೇಗವಾಗಿ ಓಡದಿದ್ದರೆ, ಆ ದಿನ ಹಸಿವಿನಿಂದ ಬಳಲಬೇಕು" ಎಂದು ತಿಳಿದುಕೊಂಡಿದೆ. ಆದ್ದರಿಂದ, "ನೀನೊಂದು ಸಿಂಹವೋ ಅಥವಾ ಗೆಜೆಲ್ ಯಾರಾಗಿದ್ದರೂ ಸರಿ, ನೀನು ವೇಗವಾಗಿ ಓಡುತ್ತಲೇ ಇರಬೇಕು" ಎಂದು ಬರೆದಿದ್ದಾರೆ.

 

ಸ್ಪರ್ಜನ್ ಎಂಬ ದೇವರ ಸೇವಕರು ಈ ರೀತಿಯಾಗಿ ಬರೆದಿದ್ದಾರೆ "ನೀನು ದೇವರನ್ನು ಹುಡುಕದೇ ಇದ್ದರೆ, ಸೈತಾನನು ನಿನ್ನನ್ನು ಹುಡುಕುತ್ತಿರುತ್ತಾನೆ" ಎಂದು ಬರೆದಿದ್ದಾರೆ. "ನಮ್ಮ ಎದುರಾಳಿಯಾದ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಿಬಿಡಬೇಕೆಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ." ಆದ್ದರಿಂದ ಪ್ರತಿದಿನ ದೇವರ ಭದ್ರತೆಯ ರೆಕ್ಕೆಗಳ ಕೆಳಗೆ ಓಡಿ ಬಚ್ಚಿಟ್ಟುಕೊಳ್ಳಬೇಕು. ಯಾವಾಗ? ಮುಂಜಾನೆಯೇ! ನಾವು ಪ್ರತಿದಿನ ಮುಂಜಾನೆ ದೇವರನ್ನು ಹುಡುಕಬೇಕು ಮತ್ತು ಆತನನ್ನು ನಮ್ಮ ಆಶ್ರಯವಾಗಿ ಮಾಡಿಕೊಳ್ಳಬೇಕು. ಸೈತಾನನು ಪ್ರತಿದಿನ ತರುವ ಪಾಪದ ಶೋಧನೆಗಳಿಂದ ತಪ್ಪಿಸಿಕೊಳ್ಳಲು ಅದು ಮಾತ್ರವೇ ನಮ್ಮ ಏಕೈಕ ಆಯುಧವಾಗಿದೆ. ಸೈತಾನನನ್ನು ವಿರೋಧಿಸುವ ಶಕ್ತಿಯನ್ನು ಮುಂಜಾನೆಯೇ ಪಡೆದುಕೊಳ್ಳಬೇಕು.

 

ಪ್ರಿಯರೇ! ಪ್ರತಿದಿನ ಮುಂಜಾನೆಯೇ ಕರ್ತನನ್ನು ಹುಡುಕಿ ಬಲದ ಮೇಲೆ ಬಲ ಹೊಂದುತ್ತಾ ನಮ್ಮ ಓಟವನ್ನು ಮುಂದುವರಿಸೋಣ. ನಮ್ಮ ಸ್ವಂತ ಬುದ್ಧಿವಂತಿಕೆಯು ಈ ಪ್ರಪಂಚವನ್ನು ಮತ್ತು ಸೈತಾನನನ್ನು ವಿರೋಧಿಸಲು ನಮಗೆ ಸಹಾಯ ಮಾಡುವುದಿಲ್ಲ. ದೇವರ ಶಕ್ತಿಯು ಮಾತ್ರವೇ ಜಗತ್ತನ್ನು ಗೆಲ್ಲುವ ಏಕೈಕ ವಿಜಯವಾಗಿದೆ. ನೀವು ದೇವರ ಶಕ್ತಿಯೊಂದಿಗೆ ನಿಮ್ಮ ಪ್ರತಿ ದಿನವನ್ನು ಪ್ರಾರಂಭಿಸುವಾಗ ಖಂಡಿತವಾಗಿಯೂ ಯಶಸ್ವಿಯಾದ ಕ್ರೈಸ್ತ ಜೀವನವನ್ನು ಜೀವಿಸಲು ಸಾಧ್ಯ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ನಮ್ಮ ಪತ್ರಿಕೆಗಳನ್ನು ಮುದ್ರಿಸಲು ಮತ್ತು ಹೊರಬಿಡಲು ಬೇಕಾದ ಅಗತ್ಯಗಳನ್ನು ಕರ್ತನು ಪೂರೈಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al