Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.02.2021
Share:

By Village Missionary Movement

Wednesday, 10-Feb-2021

ಧೈನಂದಿನ ಧ್ಯಾನ(Kannada) – 10.02.2021

ಅವಕಾಶವನ್ನು ಉಪಯೋಗಿಸಿಕೊಳ್ಳೋಣ.

"ಅವನು ನಮ್ಮೊಂದಿಗೆ ಎಣಿಸಲ್ಪಟ್ಟು ಈ ಸೇವೆಯಲ್ಲಿ ಪಾಲು ಹೊಂದಿದ ವನಾಗಿದ್ದನು" - ಅಪೊಸ್ತಲ 1:17

ಒಂದು ದೇಶವನ್ನು ಆಳುತ್ತಿದ್ದ ಒಬ್ಬ ರಾಜನಿಗೆ ಒಂದು ಅಭ್ಯಾಸವಿತ್ತು. ಯಾವುದಾದರೂ ಒಂದು ದಿನ ದೇಶದೊಳಗೆ ಸಂಚರಿಸುತ್ತಾ ಬರುತ್ತಾರೆ. ಆಗ ಅಗತ್ಯಗಳಿಂದಿರುವ ವ್ಯಕ್ತಿಯ ಬಳಿ ಹೋಗಿ ನಿನಗೆ ಬೇಕಾಗಿರುವುದು ಏನು ಎಂದು ಕೇಳುತ್ತಾರೆ. ಆ ವ್ಯಕ್ತಿ ಕೇಳುವ ಕಾರ್ಯವು ಏನಾಗಿದ್ದರು ಅದನ್ನು ಕೊಡುವುದರಲ್ಲಿ ಸಂತೋಷಪಡುತ್ತಾರೆ. ಅದರಂತೆ ಒಂದು ದಿನ ಬಹಳ ಕೊಳಕು ಬಟ್ಟೆಗಳೊಂದಿಗೆ ಕಾಲುಗಳೆಲ್ಲಾ ಹುಣ್ಣುಗಳಿಂದಿದ್ದ ಒಬ್ಬನನ್ನು ಕಂಡರು. ಅವನ ಹತ್ತಿರ ಹೋಗಿ ರಥವನ್ನು ನಿಲ್ಲಿಸಿ ನಿನಗೆ ಏನು ಬೇಕು ಎಂದು ಕೇಳಿದರು. ಅವನು ಸ್ವಲ್ಪವೂ ಯೋಚಿಸದೆ, "ರಾಜ ನಾನು ಯಾವಾಗಲೂ ನಿಮ್ಮೊಂದಿಗೆ ಇರಬೇಕು" ಎಂದು ಹೇಳಿದನು. ರಾಜನು ಕೂಡ ಅವನನ್ನು ತನ್ನ ಅರಮನೆಗೆ ಕರೆದುಕೊಂಡು ಹೋಗಿ, ಅವನನ್ನು ಶುದ್ಧ ಮಾಡಿ, ಹುಣ್ಣುಗಳಿಗೆ ಔಷಧಿ ಹಾಕಿ, ಗಾಯಗಳನ್ನು ಕಟ್ಟಿ, ಅವನಿಗೆ ಸುಂದರವಾದ ಬೆಲೆಯಳ್ಳ ವಸ್ತ್ರಗಳನ್ನು ಧರಿಸುವಂತೆ ಆಜ್ಞಾಪಿಸಿದನು. ಅವನನ್ನು ಯಾವಾಗಲೂ ತನ್ನ ಅರಮನೆಯಲ್ಲಿಯೇ ಇರುವಂತೆ ಇರಿಸಿಕೊಂಡರು. ಸ್ವಲ್ಪವೂ ಊಹಿಸಲಾರದಂತಹ ರಾಜವೈಭವವು ಅವನಿಗೆ ಸಿಕ್ಕಿತು. ಇದನ್ನು ಕಂಡ ಉಳಿದ ಕೆಲಸಗಾರರು ನಮ್ಮ ಬಳಿ ರಾಜ ಕೇಳುವಾಗ ನಾವು ಕೂಡ ಇಂತಹ ಒಂದನ್ನು ಕೇಳಲಿಲ್ಲವೇ ಎಂದು ನೊಂದುಕೊಂಡರು.

ಇದರಂತೆಯೇ ಇಸ್ಕರಿಯೋತ ಯೂದನಿಗೆ ಯೇಸುವೊಂದಿಗೆ ಜೀವಿಸುವ ಜೀವನ ಸಿಕ್ಕಿತ್ತು. ಹೆಚ್ಚುಕಡಿಮೆ ಮೂರುವರೆ ವರ್ಷಗಳು ಅವರೊಂದಿಗಿದ್ದನು. ಯೇಸುಕ್ರಿಸ್ತನು ಮಾಡಿದ ಅದ್ಭುತಗಳನ್ನು ನೋಡಿದವನು, ನಿತ್ಯಜೀವದ ಬಗ್ಗೆ ತಿಳಿದವನು. ಆದರೆ ಪರಿತಾಪ, ಉನ್ನತದಲ್ಲಿ ಯೇಸುವೊಂದಿಗೆ ಜೀವಿಸುವ ಜೀವನವನ್ನು ಬಿಟ್ಟುಬಿಟ್ಟು ಬರೀ 30 ಬೆಳ್ಳಿ ನಾಣ್ಯಗಳಿಗಾಗಿ ಯೇಸುಕ್ರಿಸ್ತನನ್ನು ತೋರಿಸಿಕೊಟ್ಟನು. ಅಷ್ಟು ಮಾತ್ರವಲ್ಲದೆ ಅಪೊಸ್ತಲ.1:8 ರಲ್ಲಿ ಹೇಳಿರುವ ಪ್ರಕಾರ, "ಅನ್ಯಾಯದ ಕೂಲಿಯಿಂದ ಅವನು ಒಂದು ಸ್ಥಳವನ್ನು ಸಂಪಾದಿಸಿ ತಲೆಕೆಳಗಾಗಿ ಬಿದ್ದನು; ಅವನ ಹೊಟ್ಟೆ ಹೊಡೆದು ಕರುಳುಗಳೆಲ್ಲಾ ಚೆದರಿ ಹೋದವು" ಯೇಸುಕ್ರಿಸ್ತನೊಂದಿಗೆ ಜೀವಿಸುವ ಒಂದು ಅವಕಾಶ ಸಿಕ್ಕಿದರೂ ಅದನ್ನು ಕಳೆದುಕೊಂಡನು. ಆದರೆ ಯೇಸುವೊಂದಿಗೆ ಶಿಲುಬೆಯಲ್ಲಿ ಜಜ್ಜಲ್ಪಟ್ಟ ಕಳ್ಳನು ತನಗೆ ಸಿಕ್ಕಿದ ಅವಕಾಶವನ್ನು ಉಪಯೋಗಿಸಿ "ಯೇಸುವನ್ನು ನೋಡಿ: ದೇವರೇ ನೀವು ನಿಮ್ಮ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಪಿಸಿಕೊಳ್ಳಿ ಎಂದನು."

ಇದನ್ನು ಓದುತ್ತಿರುವ ನಾವು, ರಕ್ಷಣೆ ಹೊಂದಿ ಈ ಲೋಕದ ಮೇಲೆ ಆಸೆ ಇಟ್ಟುಕೊಂಡು, ಯಾವುದೋ ಒಂದು ಪಾಪದಲ್ಲಿ ಸಿಕ್ಕಿಕೊಂಡು, ಹಲವು ಬಾರಿ ದೇವರು ಎಚ್ಚರಿಸಿದರು ಯೇಸು ರಾಜನೊಂದಿಗೆ ಜೀವಿಸುವ ನಿತ್ಯಜೀವವನ್ನು ಹೊಂದಲು ಅರ್ಹತೆ ಕಳೆದುಕೊಂಡವರಾಗಿ ಜೀವಿಸುತ್ತಿದ್ದೇವಾ? ಯೋಚಿಸಿ ನೋಡೋಣ. ಬದುಕಿರುವವರೆಗು ಮಾತ್ರವೇ ಅವಕಾಶ, ಸತ್ತ ನಂತರ ಐಶ್ವರ್ಯವಂತನ ಹಾಗೆ ಎಷ್ಟು ಗೋಳಾಡಿದರೂ ಸಿಗುವುದಿಲ್ಲ. ಆದ್ದರಿಂದ ಮಾನಸಾಂತರ ಹೊಂದೋಣ, ದೇವರೊಂದಿಗೆ ಜೀವಿಸುವ ನಿತ್ಯವಾದ ಆ ರಾಜ ವೈಭವದ ಜೀವನಕ್ಕೆ ಸಿದ್ಧರಾಗೋಣ.
-    P.V. ವಿಲಿಯಮ್ಸ್

ಪ್ರಾರ್ಥನಾ ಅಂಶ:-
ನಂಬಿಕೆ ಟಿ.ವಿ.ಯಲ್ಲಿ ಪ್ರಸಾರವಾಗುವ ಟಿ.ವಿ. ಕಾರ್ಯಕ್ರಮಗಳ ಮೂಲಕ ಅನೇಕರು ದೇವರಿಗೆ ಹತ್ತಿರವಾಗುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş