Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.09.2022
Share:

By Village Missionary Movement

Tuesday, 13-Sep-2022

ಧೈನಂದಿನ ಧ್ಯಾನ(Kannada) – 14.09.2022

 

ದೇವರೇ ವಾಕ್ಯವೇ ಹರ್ಷಾನಂದ

 

“ಸಂತೋಷಪಡುವ ಹೃದ ಯವು ಕಾಂತಿಯುಳ್ಳ ಮುಖಭಾವ ತೋರುವದು; ಹೃದಯ ವೇದನೆಯಿಂದ ಆತ್ಮವು ಕುಂದಿಹೋಗುತ್ತದೆ" - ಜ್ಞಾನೋಕ್ತಿ 15:13

 

ಸತ್ಯವೇದವನ್ನು ಪ್ರೀತಿಸುತ್ತಾ, ಓದುತ್ತಾ, ಪ್ರತಿದಿನ ಧ್ಯಾನಿಸುವ ದೇವರ ಮಾತುಗಳನ್ನು ಪಾಲಿಸುವ ದೇವರ ಮಕ್ಕಳನ್ನು ದೇವರು ಪರಿಶುದ್ಧಗೊಳಿಸುತ್ತಾರೆ. ದೇವರು ತನ್ನ ಮುಖ ಪ್ರಕಾಶವನ್ನು ತನ್ನ ಮಕ್ಕಳಿಗೆ ಅನುಗ್ರಹಿಸಿ ಆಶೀರ್ವದಿಸುತ್ತಾರೆ ಮತ್ತು ಹರ್ಷಚಿತ್ತದಿಂದಲೂ, ಸಂತೋಷದಿಂದಲೂ ಬದುಕಲು ಆಶೀರ್ವದಿಸುತ್ತಾರೆ. ನಮ್ಮ ಹೃದಯವು ಸಂಪೂರ್ಣವಾಗಿ ದೇವರ ವಾಕ್ಯಗಳಿಂದ ತುಂಬಿರುವಾಗ, ತನ್ನ ಸ್ವಾರೂಪ್ಯವನ್ನು ತನ್ನ ಮಕ್ಕಳಿಗೆ ಅನುಗ್ರಹಿಸಲು ಸರ್ವಶಕ್ತನಾಗಿದ್ದಾರೆ.

 

ಒಮ್ಮೆ ಅಮೆರಿಕಾದ ಅಧ್ಯಕ್ಷ ಥಾಮಸ್ ಜೆಫರ್ಸನ್ ತನ್ನ ಸ್ನೇಹಿತರೊಂದಿಗೆ ದೇಶವನ್ನು ಸುತ್ತಿ ನೋಡಲು ಹೋದರು. ರಾತ್ರಿ ಸುರಿದ ಭಾರಿ ಮಳೆಗೆ ಅರಣ್ಯ ಮಾರ್ಗವನ್ನು ದಾಟಲು ಇದ್ದ ಮರದ ಸೇತುವೆ ಕೊಚ್ಚಿ ಹೋಗಿತ್ತು. ಅವನು ಮತ್ತು ಅವನ ಕುದುರೆಗಳು ಕಾಡನ್ನು ದಾಟಲು ಪ್ರಯತ್ನಿಸುತ್ತಿದ್ದಾಗ, ಅಲ್ಲಿದ್ದ ವ್ಯಕ್ತಿ ಅಧ್ಯಕ್ಷರಿಗೆ, "ಅಯ್ಯನವರೇ, ನನ್ನ ಬಳಿ ಕುದುರೆ ಇಲ್ಲ, ದಯವಿಟ್ಟು ನನ್ನನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗುತ್ತೀರಾ?" ಎಂದು ಕೇಳಿದನು. ಯಾವುದೇ ಹಿಂಜರಿಕೆಯಿಲ್ಲದೆ, ಅವರು ಸಂತೋಷದಿಂದ ಆ ಮನುಷ್ಯನನ್ನು ತನ್ನ ಕುದುರೆಯ ಮೇಲೆ ಕೂರಿಸಿಕೊಂಡು ದಡಕ್ಕೆ ಕರೆತಂದರು. ನಾವೆಲ್ಲಾ ಇಷ್ಟೊಂದು ಜನ ಇರುವಾಗ ಅಧ್ಯಕ್ಷರ ಬಳಿ ಸಹಾಯ ಕೇಳಲು ನಿನಗೆ ಎಷ್ಟು ಧೈರ್ಯ?" ಎಂದು ಗೆಳೆಯರೆಲ್ಲಾ ಕೇಳಿದರು. ಆಗ ಅವನು "ಅವರು ಅಧ್ಯಕ್ಷರು ಎಂದು ನನಗೆ ತಿಳಿದಿರಲಿಲ್ಲ, ಆದರೆ ಅವರ ಪ್ರೀತಿ ಮತ್ತು ಅವರ ಸಹಾಯ ಮಾಡುವ ಮನೋಭಾವ ಅವರ ಪ್ರಕಾಶಮಾನವಾದ ಮುಖಭಾವವು ನನ್ನನ್ನು ಸಹಾಯ ಕೇಳಲು ಪ್ರೇರೇಪಿಸಿತು" ಎಂದು ಹೇಳಿದನು.

 

ಹೌದು ಪ್ರಿಯರೇ! ದೇವರನ್ನು ಪ್ರೀತಿಸುತ್ತಾ, ಆತನ ಮಾತಿನಂತೆ ಜೀವಿಸುವ ಪ್ರತಿಯೊಂದು ದೇವರ ಮಕ್ಕಳಿಗೂ ತನ್ನ ಗುಣಾತಿಶಯವಾದ ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಎಂಬ ಆತ್ಮದ ಫಲಗಳನ್ನು ದೇವರು ಬಹುಮಾನವಾಗಿ ಅನುಗ್ರಹಿಸುತ್ತಾರೆ. ನಿನ್ನ ಮಾತುಗಳನ್ನು ಮರೆಯುವುದಿಲ್ಲ. ನಿಮ್ಮ ವಾಕ್ಯವೇ ನನ್ನ ಸಂತೋಷವಾಗಿದೆ ಎಂದು ಅವರೊಂದಿಗೆ ಬೆರೆತು ನಮ್ಮ ಜೀವನದಲ್ಲಿ ಯೇಸುವನ್ನು ಇತರರಿಗೆ ತೋರಿಸೋಣ. ದೇವರು ಕೊಡುವ ಸಂತೋಷ ಮತ್ತು ಹರ್ಷ ಮುಖವು ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿ ಚೆನ್ನಾಗಿ ಬದುಕುವಂತೆ ಮಾಡುತ್ತದೆ. ಒಳ್ಳೆಯ ಮನಸ್ಸು ಸದ್ಗುಣ ಮತ್ತು ಒಳ್ಳೆಯ ಕಾರ್ಯಗಳನ್ನು ಪ್ರಕಟಿಸುತ್ತದೆ. ದೇವರು ನಮ್ಮನ್ನು ಪರಿಶುದ್ಧಗೊಳಿಸಲಿ ಮತ್ತು ಉಪಯೋಗಿಸಲಿ! ಸತ್ಯವೇದವನ್ನು ಪ್ರೀತಿಸುತ್ತಾ ಓದೋಣ. ಅದೇ ನಮ್ಮ ಉಸಿರಾಗಿರಲಿ! ಆಮೆನ್.

- Mrs. ಸರೋಜಾ ಮೋಹನ್ ದಾಸ್.

 

ಪ್ರಾರ್ಥನಾ ಅಂಶ:

ಪ್ರತಿ ರಾಜ್ಯದಲ್ಲಿ 3000 ಪ್ರಾರ್ಥನಾ ಗುಂಪಿನ ನಾಯಕರು ಮತ್ತು ಪ್ರಾರ್ಥನಾ ಗುಂಪುಗಳು ಉದ್ಭವಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino