Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.09.2022
Share:

By Village Missionary Movement

Wednesday, 07-Sep-2022

ಧೈನಂದಿನ ಧ್ಯಾನ(Kannada) – 08.09.2022

 

ನೀನು ಸಹ ಕರುಣಿಸಬಾರದಾಗಿತ್ತೇ?

 

"ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೇಸೇವಕನನ್ನು ಕರುಣಿಸಬಾರದಾಗಿತ್ತೇ..." - ಮತ್ತಾಯ 18:33

 

ಜಾನ್ 25 ವರ್ಷ ವಯಸ್ಸಿನವನಾಗಿದ್ದನು ಮತ್ತು ಜಾನ್ ಒಳ್ಳೆಯ ಕೆಲಸವನ್ನು ಹುಡುಕುತ್ತಿದ್ದನು. ಒಂದು ದಿನ ಆತನಿಗೆ ತನ್ನ ಸಂಬಂಧಿಕರೊಬ್ಬರ ಸಹಾಯದಿಂದ ರೂ.60,000/- ಸಂಬಳ ನೀಡುವ ಕೆಲಸಕ್ಕೆ ಚೆನ್ನೈನ ಕಂಪನಿಯಿಂದ ಕರೆ ಬಂದಿತು. ಜಾನ್ ಬಹಳ ಉತ್ಸಾಹದಿಂದ ಟಿಪ್ ಟಾಪ್ ಆಗಿ ರೆಡಿಯಾಗಿ ಸಂದರ್ಶನಕ್ಕೆ ಹೋದನು. ಚೆನ್ನೈನಲ್ಲಿ ಇಳಿದು ಸ್ವಲ್ಪ ದೂರ ನಡೆದುಕೊಂಡು ಹೋಗಬೇಕು. ಹೋಗುವ ದಾರಿಯಲ್ಲಿ ಒಬ್ಬ ಮುದುಕ ನಿಟ್ಟುಸಿರು ಬಿಡುತ್ತಾ ವೇಗವಾಗಿ ನಡೆದುಕೊಂಡು ಬರುತ್ತಿದ್ದರು. ಇದ್ದಕ್ಕಿದ್ದಂತೆ ಎಡವಿ ಕೆಳಗೆ ಬಿದ್ದರು. ಆದರೆ ಜಾನ್ ಅವರಿಗೆ ಸಹಾಯ ಮಾಡದೆ ಕಂಡು ಕಾಣದಂತೆ ಹೊರಟು ಹೋದನು. ಕಂಪನಿಗೆ ಹೋಗಿ ಇಂಟರ್ ವ್ಯೂ ನಡೆಸುತ್ತಿದ್ದಾಗ ಒಂದು ಆಶ್ಚರ್ಯ, ಅಲ್ಲಿ ಇಂಟರ್ವ್ಯೂ ನಡೆಸುವವರೊಂದಿಗೆ ಆ ಮುದುಕನೂ ಸಹ ಕುಳಿತಿದ್ದರು. ಜಾನ್ ಗೆ ಎಲ್ಲವೂ ಅರ್ಥವಾಯಿತು. ಈ ಕೆಲಸವೂ ಸಿಗಲಿಲ್ಲ.

 

ಸತ್ಯವೇದದಲ್ಲಿ ಮತ್ತಾ. 18:22-34 ರಲ್ಲಿ ಕರ್ತನಾದ ಯೇಸು ಕ್ರಿಸ್ತನು ಒಂದು ಸಾಮ್ಯವನ್ನು ಹೇಳಿದ್ದನ್ನು ಓದುತ್ತೇವೆ. ಒಬ್ಬ ಸಾಲಗಾರನನ್ನು ರಾಜನ ಬಳಿಗೆ ಕರೆತರಲಾಗುತ್ತದೆ. ರಾಜನು ಸಾಲವನ್ನು ಮರುಪಾವತಿಸುವಂತೆ ಕೇಳಿದಾಗ, ಇವನನ್ನು ಕರುಣಿಸಿ ಕ್ಷಮಿಸಿ ಬಿಡುಗಡೆ ಮಾಡುತ್ತಾರೆ. ಈ ಮನುಷ್ಯ ಸಂತೋಷದಿಂದ ಮನೆಗೆ ಹೋಗುತ್ತಾನೆ. ಹೋಗುವ ದಾರಿಯಲ್ಲಿ ತನ್ನಿಂದ ಸಾಲ ಪಡೆದ ವ್ಯಕ್ತಿಯನ್ನು ನೋಡಿ "ನನ್ನ ಸಾಲವನ್ನು ಈಗಲೇ ತೀರಿಸಬೇಕು" ಎಂದು ಅಂಗಿ ಹಿಡಿದುಕೊಂಡು ಕಠಿಣವಾಗಿ ವರ್ತಿಸುತ್ತಾನೆ. ಅವನು ತುಂಬಾ ಬಡವನಾಗಿದ್ದದರಿಂದ ಕರುಣಿಸಿ ಕಾಲಾವಕಾಶ ಕೊಡಿ ಎಂದು ಕೇಳುತ್ತಾನೆ. ಈ ಮನುಷ್ಯನೋ ಅವನನ್ನು ಕರುಣಿಸದೆ ಶಿಕ್ಷಿಸುತ್ತಾನೆ. ಇದನ್ನು ತಿಳಿದ ರಾಜನು ಅವನನ್ನು ಕರೆದು ಮನ್ನಾ ಮಾಡಿದ ಸಾಲವನ್ನು ಮರುಪಾವತಿಸುವಂತೆ ಹೇಳಿ ಪೀಡಿಸುವವರ ಕೈಗೆ ಅವನನ್ನು ಒಪ್ಪಿಸಿದರು.

 

ಇದನ್ನು ಓದುತ್ತಿರುವ ಪ್ರೀತಿಯ ಸಹೋದರ ಸಹೋದರಿಯರೇ, ಮೇಲೆ ಹೇಳಲ್ಪಟ್ಟ ಎರಡೂ ಸಂದರ್ಭಗಳಲ್ಲಿನ ಮುಖ್ಯ ಸಾರಾಂಶ ಇತರರಿಗೆ ಸಹಾಯ ಮಾಡಬೇಕು ಎಂಬುದೇ. ಅದರಂತೆ, ದೇವರು ನಮ್ಮನ್ನು ಕರುಣಿಸಿದ ಪ್ರಕಾರವೇ ನಾವು ಸಹ ಇತರರಿಗೆ ಕರುಣೆಯನ್ನು ತೋರಿಸಬೇಕು ಮತ್ತು ದೇವರು ನಮ್ಮ ಪಾಪಗಳನ್ನು ಕ್ಷಮಿಸಿದಂತೆಯೇ ನಾವು ಸಹ ಕ್ಷಮಿಸಬೇಕೆಂದು ಬಯಸುತ್ತಿದ್ದಾರೆ. ಆದರೆ ಅನೇಕ ಬಾರಿ ನಾವು ಗಾಢವಾದ ಆಲೋಚನೆಯುಳ್ಳವರಾಗಿ ಕೋಪ, ಅಸೂಯೆ, ದ್ವೇಷ, ಹಗೆ ಇತ್ಯಾದಿಗಳನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಂಡು, ಮತ್ತೊಬ್ಬರನ್ನು ಕ್ಷಮಿಸದೇ, ನಾವು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತೇವೆ, ಆದರೆ ಇದನ್ನು ದೇವರ ಮುಂದೆ ಪಾಪವೆಂದು ಪರಿಗಣಿಸಲಾಗುತ್ತದೆ. ಕರ್ತನಾದ ಯೇಸುಕ್ರಿಸ್ತನು ಹೇಳುವಾಗ ಏಳು ಎಪ್ಪತ್ತು ಬಾರಿ ಕ್ಷಮಿಸಬೇಕು ಎಂದು ಹೇಳುತ್ತಾರೆ. ನಾವು ಇತರರನ್ನು ಕ್ಷಮಿಸಿದಂತೆಯೇ ನಮ್ಮ ಪಾಪಗಳೂ ಕ್ಷಮಿಸಲ್ಪಡುತ್ತವೆ ಎಂದು ಸತ್ಯವೇದವು ಹೇಳುತ್ತಿದೆ. ಆದ್ದರಿಂದ ನಮ್ಮ ಪಾಪಗಳು ಕ್ಷಮಿಸಲ್ಪಡಬೇಕಾದರೆ ನಾವು ಸಹ ಇತರರ ತಪ್ಪುಗಳನ್ನು ಕ್ಷಮಿಸೋಣ! ಪರಲೋಕ ರಾಜ್ಯವನ್ನು ಸ್ವತಂತ್ರಿಸಿಕೊಳ್ಳೋಣ.!!

- M. ಹೆಪ್ಸಿಬಾ

 

ಪ್ರಾರ್ಥನಾ ಅಂಶ:

ಏಕ ದೃಷ್ಟಿಯೊಂದಿಗೆ ಸೇವೆ ಮಾಡುತ್ತಿರುವ ಸುವಾರ್ತಾಬೋಧಕರನ್ನು ದೇವರು ನಮ್ಮೊಂದಿಗೆ ಸೇರಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet