Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.09.2022
Share:

By Village Missionary Movement

Tuesday, 06-Sep-2022

ಧೈನಂದಿನ ಧ್ಯಾನ(Kannada) – 07.09.2022

 

ಬೆಲೆಯುಳ್ಳ ವಸ್ತು

 

“...ನಿನ್ನ ಕಣ್ಣೀರನ್ನು ನೋಡಿದ್ದೇನೆ;..." - ಯೆಶಾಯ 38:5

 

ಒಂದು ದಿನ ದೇವದೂತನು ಪರಲೋಕದಿಂದ ಭೂಮಿಗೆ ಬಂದನು. "ನಾನು ಭೂಮಿಯ ಮೇಲಿನ ಬೆಲೆಯುಳ್ಳ ವಸ್ತುವನ್ನು ಪರಲೋಕಕ್ಕೆ ಕೊಂಡೊಯ್ಯುತ್ತೇನೆ" ಎಂದು ತೀರ್ಮಾನಿಸಿ ಪ್ರತಿ ಸ್ಥಳವನ್ನು ಸುತ್ತಿ ನೋಡಿದನು. ಸುಂದರವಾದ ಕಾಡುಗಳು, ಹೂವುಗಳು, ಪಕ್ಷಿಗಳು ಮತ್ತು ಕಣ್ಣಿಗೆ ಹಬ್ಬವನ್ನು ನೀಡುವ ಜಲಪಾತಗಳೊಂದಿಗೆ ದೃಶ್ಯಾವಳಿ ತುಂಬಾ ಸುಂದರವಾಗಿತ್ತು. ಆದರೆ ಇವೆಲ್ಲವೂ ಪರಲೋಕದಲ್ಲಿ ಇನ್ನೂ ಹೆಚ್ಚು ಸುಂದರವಾಗಿದೆ ಎಂದು ಭಾವಿಸಿ, ಅವುಗಳನ್ನು ಬಿಟ್ಟು ಚಿನ್ನವನ್ನು ನೋಡಿದನು, ಅದನ್ನು ಜನರು ಹೆಚ್ಚು ಗೌರವಿಸುತ್ತಾರೆ. ಆದರೆ ಪರಲೋಕದಲ್ಲಿರುವ ಮಣ್ಣೆಲ್ಲಾ ಚಿನ್ನವೇ ತಾನೇ ಎಂದುಕೊಂಡು ಹಾರಿ ಹೋಗುತ್ತಿದ್ದಾಗ ಮನೆಯೊಂದರಿಂದ ಅಳುವಿನ ಶಬ್ದ ಕೇಳಿಸಿತು. ಯಾರೋ ಅಳುತ್ತಾ "ಯೇಸಪ್ಪಾ ಪಾಪದಲ್ಲಿರುವ ಜನರನ್ನು ರಕ್ಷಿಸು" ಎಂದು ಪ್ರಾರ್ಥಿಸುತ್ತಿದ್ದಾಗ, ಅವರ ಕಣ್ಣುಗಳಿಂದ ನೀರು ಹರಿಯುವುದನ್ನು ಕಂಡನು, ಭೂಮಿಯಲ್ಲಿ ಇದಕ್ಕಿಂತ ಹೆಚ್ಚು ಬೆಲೆಬಾಳುವದು ಏನಿದೆ ಎಂದುಕೊಂಡು ಅವನು ತನ್ನ ಕೈಗಳಲ್ಲಿ ಕಣ್ಣೀರಿನ ಹನಿಯನ್ನು ತೆಗೆದುಕೊಂಡು ಯೇಸುಕ್ರಿಸ್ತನ ಬಳಿ ಹೋದನು.

 

ಈ ಜಗತ್ತು ಒಬ್ಬ ವ್ಯಕ್ತಿಯನ್ನು ಪ್ರಾಪಂಚಿಕ ವಸ್ತುಗಳಿಂದ ಮಾತ್ರವೇ ಗೌರವಿಸುತ್ತದೆ. ಆದರೆ ಕಣ್ಣೀರಿನ ಮೌಲ್ಯ ತಿಳಿದರೆ ಸಾಕು ಸಾಧಿಸಬಹುದು. ನೆಹೆಮಿಯ ತನ್ನ ಕಣ್ಣೀರಿನ ಪ್ರಾರ್ಥನೆಯ ಮೂಲಕ ಸಾಧಿಸಿದ್ದನ್ನು ನಾವು ಸತ್ಯವೇದದಲ್ಲಿ ನೋಡಬಹುದು. ನೆಹೆಮಿಯ ರಾಜ ಅರ್ತಷಸ್ತನಿಗೆ ಪಾನಗಾರನಾಗಿ ಸರ್ಕಾರಿ ಕೆಲಸದಲ್ಲಿದ್ದರು. ಆದರೆ ಯೆರೂಸಲೇವಿುನ ಪೌಳಿಗೋಡೆಯು ಕೆಡವಲ್ಪಟ್ಟಿರುತ್ತದೆ; ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ ಎಂಬ ಸುದ್ದಿಯನ್ನು, ಯೆರೂಸಲೇಮಿನಿಂದ ಬಂದ ಸಹೋದರರ ಮೂಲಕ ತಿಳಿದುಕೊಳ್ಳುತ್ತಾರೆ. ಆದ್ದರಿಂದ ದುಃಖದಿಂದ ಅತ್ತು, ಕೆಲವು ದಿನಗಳು ರಜೆ ತೆಗೆದುಕೊಂಡು, ಉಪವಾಸವಾಗಿದ್ದು, ಪ್ರಾರ್ಥಿಸಿ ಬಿಟ್ಟು ನಂತರ ರಾಜನ ಬಳಿಗೆ ಬಂದುಬಿಡುತ್ತಾರೆ. 

 

ಆದರೆ ಅವರ ಕಣ್ಣೀರಿನ Value ರಾಜನನ್ನು ವಿಚಾರಿಸುವಂತೆ ಮಾಡುತ್ತದೆ. ನೆಹೆಮಿಯನಿಗೆ ಪೌಳಿಗೋಡೆಯನ್ನು ಕಟ್ಟಲು ಏನೆಲ್ಲಾ ಅಗತ್ಯವೋ, ಅವನ್ನೆಲ್ಲಾ ಕೊಡುವಂತೆ ಮಾಡುತ್ತದೆ. 70 ವರ್ಷಗಳಿಂದ ಪಾಳು ಬಿದ್ದಿರುವ ಪೌಳಿಗೋಡೆಯನ್ನು 52 ದಿನಗಳೊಳಗೆ ನಿರ್ಮಾಣ ಮಾಡಲಾಗುತ್ತದೆ. ಇದು ನೆಹೆಮಿಯನ ಕಣ್ಣೀರಿನ ಪ್ರಾರ್ಥನೆಗೆ ಸಿಕ್ಕಿದ ವಿಜಯವಾಗಿದೆ.

 

ನಾವೂ ಸಹ ನಮ್ಮ ಅಗತ್ಯಗಳಿಗಾಗಿ ದೇವರಿಗೆ ಮೊರೆಯಿಡುತ್ತೇವೆ. "ಎಲ್ಲರೂ ರಕ್ಷಣೆ ಹೊಂದಬೇಕು ಎಂಬುದೇ ದೇವರ ಚಿತ್ತವಾಗಿದೆ". ಮುರಿದ ಹೃದಯದಿಂದ ಆ ದರ್ಶನಕ್ಕಾಗಿ ನಾವು ಅಳುತ್ತಾ ಪ್ರಾರ್ಥಿಸಿದಾಗ ಮಾತ್ರ ದೇವರು ನಮ್ಮ ಮೂಲಕ ಕ್ರಿಯೆ ಮಾಡಲು ಸಾಧ್ಯ. ಆತ್ಮಗಳನ್ನು ಪರಲೋಕಕ್ಕೆ ಕರೆದೊಯ್ಯಲು ನಮ್ಮ ಕಣ್ಣೀರನ್ನು ಅರ್ಪಿಸೋಣ. ಪರಲೋಕಕ್ಕೆ ಕೊಂಡೊಯ್ಯಬಹುದಾದ ಏಕೈಕ ನಿಧಿಯಾಗಿರುವ ಹೇರಳವಾದ ಆತ್ಮಗಳನ್ನು ಸಂಪಾದಿಸೋಣ! ಯಶಸ್ವಿಯಾದ ಜೀವನವನ್ನು ಜೀವಿಸೋಣ.

- A. ಬ್ಯೂಲ

 

ಪ್ರಾರ್ಥನಾ ಅಂಶ:

ಕಾರ್ಯಕ್ಷೇತ್ರಗಳಲ್ಲಿ ನಡೆಯುತ್ತಿರುವಂತಹ “ಉಜ್ಜೀವನವನ್ನು ಬಯಸುವವರ ಶಿಬಿರ” ದಲ್ಲಿ ಭಾಗವಹಿಸುವ ವ್ಯಕ್ತಿಗಳು ಕಾರ್ಯಮಾಡುವವರಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino