Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.09.2022
Share:

By Village Missionary Movement

Monday, 05-Sep-2022

ಧೈನಂದಿನ ಧ್ಯಾನ(Kannada) – 06.09.2022

 

ನಿರೀಕ್ಷೆ

 

"...ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ;..." - ಮತ್ತಾ 5:44

 

ಕೆಲವು ದಿನಗಳಿಂದ ನಮ್ಮ ತಮಿಳುನಾಡಿನಲ್ಲಿ ಬಿದ್ದ ಮಳೆಗೆ ಭೂಮಿ ಮಾತ್ರವಲ್ಲ, ನಮ್ಮ ಮನವೂ ತಣ್ಣಗಾಯಿತು, ಯೋಚಿಸಿ ನೋಡಿ. ಭೂಮಿಯ ಮೇಲೆ ವಾಸಿಸುವ ನಮಗೆಲ್ಲರಿಗೂ ಮಳೆಯು ಅನೇಕ ಪ್ರಯೋಜನಗಳನ್ನು ತರುತ್ತದೆ. ಆದರೆ ಅದನ್ನು ಆನಂದಿಸುವ ನಾವು ಆ ಮಳೆಗೆ ಯಾವುದೇ ವಿನಿಮಯ ಮಾಡಿಕೊಳ್ಳುವುದಿಲ್ಲ. ಆದರೆ, ತಾರತಮ್ಯವಿಲ್ಲದೆ ಎಲ್ಲರಿಗೂ ಅನುಕೂಲವಾಗುತ್ತದೆ. ಮತ್ತಾಯ 5 ರಲ್ಲಿ, ಪರ್ವತ ಪ್ರಸಂಗದಲ್ಲಿ ನಮ್ಮ ಕರ್ತನಾದ ಯೇಸು ಕ್ರಿಸ್ತನು, “ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ; ನಿಮ್ಮನ್ನು ನಿಂದಿಸುವವರಿಗಾಗಿಯೂ ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ" ಎಂದು ಹೇಳುತ್ತಾರೆ. ಇದರರ್ಥ ನಾವು ಇತರರಿಗೆ ಸಹಾಯ ಮಾಡಬೇಕು. ನಾವು ಯಾವುದೇ ನಿರೀಕ್ಷೆಯಿಲ್ಲದೆ ಒಳ್ಳೆಯದನ್ನು ಮಾಡಿದರೆ ಅದಕ್ಕೆ ಪ್ರತಿಯಾಗಿ ಅವರು ನಮಗೆ ಒಳ್ಳೆಯದನ್ನು ಮಾಡುತ್ತಾರೆ ಅಥವಾ ಅವರಿಂದ ನಮಗೆ ಲಾಭವಾಗುತ್ತದೆ ಎಂದು ನೆನೆಸಿ, ಆ ರೀತಿಯಲ್ಲಿ ಸಹಾಯ ಮಾಡಬಾರದು ಎಂದು ಹೇಳುತ್ತಾರೆ.

 

ಹಾಗೆ ನಿರೀಕ್ಷಿಸಿ ಸಹಾಯ ಮಾಡುವುದಾದರೆ ನಾವು ಫರಿಸಾಯರಂತೆ ಇರುತ್ತೇವೆ ಎಂದೂ ಹೇಳಿದರು. ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವ ಮತ್ತು ಆತನ ಮಾರ್ಗದಲ್ಲಿ ನಡೆಯುವವರಾದ ನಾವು ಆತನನ್ನು ನಮ್ಮ ಪ್ರೀತಿಯಲ್ಲಿ ವ್ಯಕ್ತಪಡಿಸಬೇಕು ಮತ್ತು ನಮ್ಮ ವರ್ತನೆಯಲ್ಲಿ ವ್ಯತ್ಯಾಸಗಳಿರಬೇಕು. ಕರ್ತನಾದ ಯೇಸು ಕ್ರಿಸ್ತನು ನಮ್ಮ ರಕ್ಷಣೆಗಾಗಿ ತನ್ನ ಜೀವವನ್ನು ತ್ಯಾಗವಾಗಿ ಕೊಟ್ಟರು, ಯಾವುದೇ ನಿರೀಕ್ಷೆಯಿಲ್ಲದೆ ಮತ್ತು ಅವರಿಗೆ ಪ್ರತಿಯಾಗಿ ನಾವು ಏನನ್ನೂ ಮಾಡಲಾಗದ ಪರಿಸ್ಥಿತಿಯಲ್ಲಿ.

 

ಆದರೆ ಇಂದು ನಾವು ಸಾಮಾನ್ಯವಾಗಿ ನಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತೇವೆ ಮತ್ತು ನಮ್ಮನ್ನು ದ್ವೇಷಿಸುವವರನ್ನು ದ್ವೇಷಿಸುತ್ತೇವೆ. ಇದು ಪರಸ್ಪರ ಪ್ರೀತಿಯನ್ನು ನಿರೀಕ್ಷಿಸುತ್ತದೆ. ಆದರೆ ನಮ್ಮ ಪ್ರೀತಿ ಶುದ್ಧವಾಗಿರಬೇಕೆಂದು ದೇವರು ಬಯಸುತ್ತಿದ್ದಾರೆ. ಆದ್ದರಿಂದ ನೀವು ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಅಗತ್ಯವಿರುವವರಿಗೆ ಪ್ರಾಮಾಣಿಕವಾಗಿ ಸಹಾಯ ಮಾಡಿದಾಗ, ದೇವರ ನಾಮವು ಮಹಿಮೆಹೊಂದುವುದು ಮಾತ್ರವಲ್ಲ, ಅನೇಕ ಜನರು ಸಹ ದೇವರ ಪ್ರೀತಿಯನ್ನು ರುಚಿ ನೋಡಲು ಅನುಭವಿಸಲು ಅವಕಾಶವಾಗುತ್ತದೆ.

- Mrs. ಸ್ಟೆಫಿ ರಾಕ್ಸನ್.

 

ಪ್ರಾರ್ಥನಾ ಅಂಶ:

ಗ್ರಾಮ ಸೇವೆಗಳಿಗೆ ಹೋಗುವ ಸೇವಕರ ಪ್ರಯಾಣ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice