Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.02.2021
Share:

By Village Missionary Movement

Tuesday, 09-Feb-2021

ಧೈನಂದಿನ ಧ್ಯಾನ(Kannada) – 09.02.2021

ಮಾನಸಾಂತರ ರಕ್ಷಣೆ

"...ಕರ್ತನಾದ ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆ ಹೊಂದು ವರು..." - ಅಪೊಸ್ತಲ 16:31

ಒಂದು ಸಭೆಯ ಬೋಧಕರು ತನ್ನ ಸಭೆಯ ದಶಮಾಂಶಗಳನ್ನು ಕಾಣಿಕೆಗಳನ್ನು ತೆಗೆದುಕೊಂಡು, ಮಿಷನ್ ಕಚೇರಿಗೆ ಹೋಗುತ್ತಿದ್ದರು. ಹೋಗುವ ದಾರಿಯಲ್ಲಿ 4 ಜನ ಕಳ್ಳರು ಅವರ ಬಳಿ ಇದ್ದ ಹಣವನ್ನು ಕಿತ್ತುಕೊಂಡರು. ಇದು ದೇವರ ಸೇವೆಯ ಹಣ ಎಂದು ಎಷ್ಟು ಕೇಳಿಕೊಂಡರೂ ಅವರನ್ನು ತಳ್ಳಿ ಬಿಟ್ಟು ಹೊರಟು ಹೋದರು. ಬೋಧಕರು ಇದನ್ನು ಕಚೇರಿಗೆ ತಿಳಿಸಿ ಪ್ರಾರ್ಥಿಸಲು ಹೇಳಿದರು.6 ದಿನಗಳ ನಂತರ ಬೋಧಕರ ಬಳಿ ಅವರು ಬಂದು, "ಅಯ್ಯಾ ನಮ್ಮನ್ನು ಕ್ಷಮಿಸಿ, ಈ ಹಣವನ್ನು ನಾವು ಮದ್ಯಪಾನ ಮಾಡಲು, ತಪ್ಪಾದ ಕಾರ್ಯಕ್ಕೆ ಉಪಯೋಗಿಸಲು ಪ್ರಯತ್ನಿಸಿದಾಗ ನಮ್ಮ ಕೈಗಳು ಕೆಲಸ ಮಾಡಲಾಗದೆ ಬಿದ್ದುಹೋದವು. ಆಗಲೇ ನಾವು ಮಾಡಿದ ತಪ್ಪು ನಮಗೆ ಅರ್ಥವಾಯಿತು. ನಾವು ಇನ್ನು ಕಳ್ಳತನ ಮಾಡದೆ ಇರಬೇಕೆಂದರೆ ಏನು ಮಾಡಬೇಕು" ಎಂದು ಮಾನಸಾಂತರಗೊಂಡ ಹೃದಯದೊಂದಿಗೆ ಕೇಳಿದರು. ಬೋಧಕರು ಯೇಸುಕ್ರಿಸ್ತನ ತ್ಯಾಗ ಪೂರ್ಣವಾದ ಪ್ರೀತಿಯನ್ನು ಆತನ ಕ್ಷಮಿಸುವ ಗುಣವನ್ನು ಹೇಳಿ ಕ್ರಿಸ್ತನಲ್ಲಿ ಅವರನ್ನು ಮುನ್ನಡೆಸಿದರು. ಕೆಲವು ದಿನಗಳಲ್ಲೇ ಅವರ ಕುಟುಂಬಗಳು ಕೂಡ ಬದಲಾಗಿ ಅವರು ಮಾಡುತ್ತಿದ್ದ ಕಳ್ಳತನವನ್ನು ಬಿಟ್ಟುಬಿಟ್ಟರು.

ಬೈಬಲ್ ನಲ್ಲಿ ಕೂಡ ಪೌಲ, ಸೀಲರು ಸೆರೆಯಲ್ಲಿ ಬಂಧಿಸಲ್ಪಟ್ಟಾಗ ಮಧ್ಯರಾತ್ರಿಯಲ್ಲಿ ದೇವರನ್ನು ಹಾಡುಗಳ ಮುಖಾಂತರ ಸ್ತುತಿಸಲು ಪ್ರಾರಂಭಿಸಿದರು. ಕೂಡಲೇ ಸೆರೆಮನೆಯ ಅಸ್ತಿವಾರಗಳು ಅಲುಗಾಡಲು ಪ್ರಾರಂಭಿಸಿತು. ಆ ಸೆರೆಮನೆಯ ಅಧಿಕಾರಿ ಅವರು ತಪ್ಪಿಸಿಕೊಂಡರೋ ಏನೋ ಎಂದು ತನ್ನ ಪ್ರಾಣವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದನು. ಕೂಡಲೇ ಅದನ್ನು ನೋಡಿದ ಪೌಲನು ಆತನನ್ನು ತಡೆದು ನಿಲ್ಲಿಸಿ ನಾವು ಇಲ್ಲೇ ಇದ್ದೇವೆ ಎಂದರು. ನಂತರ ಸೆರೆಮನೆಯ ಅಧಿಕಾರಿ ಪೌಲನ ಬಳಿ ಬಂದು ನಾವು ರಕ್ಷಣೆ ಹೊಂದುವುದಕ್ಕೆ ಏನು ಮಾಡಬೇಕು ಎಂದು ಕೇಳಿದರು. ಆಗ ಆತನು ಮಾತ್ರವಲ್ಲ ಆತನ ಕುಟುಂಬವೆಲ್ಲ ಕೂಡ ರಕ್ಷಣೆ ಹೊಂದಿ ದೀಕ್ಷಾಸ್ನಾನ ತೆಗೆದುಕೊಂಡರು.

ಪ್ರಿಯರೇ! ರಕ್ಷಣೆ ಯೆಹೋವನದು. ಪ್ರತಿ ಮನುಷ್ಯನನ್ನು ಮಾರ್ಪಡಿಸಲು ಆತನು ಸಾಮರ್ಥ್ಯವುಳ್ಳಾತನು. ಎಷ್ಟು ಕಠಿಣವಾದ ಮನಸ್ಸುಳ್ಳವರನ್ನೂ ಕೂಡ ಮಾರ್ಪಡಿಸಲು ಆತನಿಗೆ ಸುಲಭವಾದ ಕಾರ್ಯವೇ. ಹೀಗೆ ರಕ್ಷಣೆ ಹೊಂದಿದ ಒಬ್ಬರ ಮೂಲಕ ಪೂರ್ತಿ ಕುಟುಂಬವು ದೇವರ ಬಳಿ ಬರಲು ಸಾಧ್ಯ ಎಂಬುದಕ್ಕೆ ಈ ಎರಡು ನಿಜ ಸಂಘಟನೆಗಳೇ ಉದಾಹರಣೆ. ಒಂದು ವೇಳೆ ನೀವು ಈ ವಿಧವಾಗಿ ಆಲೋಚಿಸಬಹುದು ನಾನು ಯೇಸುಕ್ರಿಸ್ತನನ್ನು ಅಂಗೀಕರಿಸಿ ಆತನ ಪ್ರೀತಿಯನ್ನು ರುಚಿ ನೋಡಿದ್ದೇನೆ ಆದರೆ ನನ್ನ ಕುಟುಂಬವು ಇನ್ನೂ ಬರಲಿಲ್ಲವೇ, ಬರುವ ಪರಿಸ್ಥಿತಿಗಳು ಕೂಡ ಕಾಣಿಸುತ್ತಿಲ್ಲವೇ ಎಂದು ಕೊರಗುತ್ತಿರಬಹುದು. ದೇವರಿಗೆ ಅಸಾಧ್ಯವಾದದ್ದು ಯಾವುದು ಇಲ್ಲ ಎಲ್ಲರೂ ರಕ್ಷಣೆ ಹೊಂದಬೇಕು ಎಂಬುದೇ ಆತನ ಚಿತ್ತವಾಗಿದೆ. ಖಂಡಿತವಾಗಿ ನಿಮ್ಮ ಕುಟುಂಬದಲ್ಲಿ ಆ ಚಿತ್ತವು ನೆರವೇರುತ್ತದೆ.
-    Mrs. ಸರೋಜಾ ಮೋಹನ್ ದಾಸ್

ಪ್ರಾರ್ಥನಾ ಅಂಶ:-
ಬೈಬಲ್ ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳು ಕುಳಿತುಕೊಳ್ಳಲು ಆಸನಗಳು ತೆಗೆದುಕೊಳ್ಳಲು, ಬೇಕಾದ ಹಣದ ಅವಶ್ಯಕತೆಗಳನ್ನು ಕರ್ತನು ಪೂರೈಸುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş