Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.08.2022
Share:

By Village Missionary Movement

Wednesday, 31-Aug-2022

ಧೈನಂದಿನ ಧ್ಯಾನ(Kannada) – 31.08.2022

 

ಸುಳ್ಳು ಸಾಕ್ಷಿ

 

"ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿ ಹೇಳಬಾರದು." - ವಿಮೋಚನಕಾಂಡ 20:16

 

ನಾನು ಚಿಕ್ಕ ಮಗುವಾಗಿದ್ದಾಗ, "ಮೋಕ್ಷ ಪ್ರಯಾಣ" ಎಂಬ ಕಥೆಯನ್ನು ಚರ್ಚ್ ನಲ್ಲಿ ಚಲನಚಿತ್ರವಾಗಿ ತೋರಿಸಲಾಯಿತು. ಅದರ ಕಥಾನಾಯಕ ಕ್ರಿಸ್ಟಿಯಾನೋ ಅವರ ಸ್ನೇಹಿತ ನಂಬಿಗಸ್ಥನಾಗಿದ್ದು ಮಾಯಾಪುರಿಯನ್ನು (ಪ್ರಪಂಚವನ್ನು) ತಲುಪಿದರು. ಅಲ್ಲಿ ನೋಡಿದ ಪ್ರದರ್ಶನದಲ್ಲಿ ಲೋಕಪ್ರಕಾರವಾದ ಹೊಗಳಿಕೆ, ಹೆಮ್ಮೆಯಂಥವುಗಳನ್ನು ಮಾರಲು ಪ್ರಯತ್ನಿಸಿದರು. "ನಾವು ಸತ್ಯವನ್ನೇ ಕೊಳ್ಳುತ್ತೇವೆ" ಎಂದು ಹೇಳಿದ ಕೂಡಲೇ ಭಿನ್ನಾಭಿಪ್ರಾಯ ಉಂಟಾಗಿ ಏಕಾಏಕಿ ಗೊಂದಲವಾಯಿತು. ಆದ್ದರಿಂದ ನಾಯಕ ಅವರನ್ನು ನ್ಯಾಯಾಧೀಶರ ಬಳಿಗೆ ಕಳುಹಿಸಿದನು. ಅಸೂಯೆ ಮತ್ತು ಖ್ಯಾತಿಯನ್ನು ಹುಡುಕುವವರು "ಇವರು ಪ್ರದರ್ಶನದ ಮಾರಾಟವನ್ನು ತಡೆದರು" ಎಂದು ತಪ್ಪಾಗಿ ಸಾಕ್ಷ್ಯ ನೀಡಿದರು. ಮತ್ತೆ ದೊಡ್ಡ ಕೂಗು. ಆದ್ದರಿಂದ ಅವರು ನಿಜವಾದ ವ್ಯಕ್ತಿಗೆ ಮರಣದಂಡನೆ ವಿಧಿಸಿದರು ಮತ್ತು ಅವನನ್ನು ಕಂಬಕ್ಕೆ ಕಟ್ಟಿ ಬೆಂಕಿ ಹಚ್ಚಿದರು. ಹೀಗೆ ಸತ್ಯವನ್ನು ಈ ಲೋಕದಲ್ಲಿ ಸುಟ್ಟುಬಿಟ್ಟರು.

 

ಹೌದು, ಪ್ರಿಯರೇ! ನಾವು ಸಹ ಒಬ್ಬರ ಬಗ್ಗೆ ಸುಳ್ಳು ವಿಷಯಗಳನ್ನು ಹೇಳಿ, ಅವರ ಒಳ್ಳೆಯ ಹೆಸರನ್ನು ಮತ್ತು ಖ್ಯಾತಿಯನ್ನು ಕದ್ದು ಅವರ ಕುರಿತಾದ ಸತ್ಯವನ್ನು ಕೊಂದು ಬಿಡುತ್ತೇವೆ. ಸಮಾಜದಲ್ಲಿ ಒಬ್ಬರ ಹೆಸರು ಕೆಡಿಸಲು ಸುಳ್ಳು ಸಾಕ್ಷಿ ಹೇಳುವುದು ಎಷ್ಟು ಕೆಟ್ಟದು. ಅಸೂಯೆ ಅಥವಾ ಮೂಢನಂಬಿಕೆಯಿಂದ ಯಾರೊಬ್ಬರ ಬಗ್ಗೆ ಸುಳ್ಳು ವದಂತಿಗಳನ್ನು ಹರಡಲು ನಾವು ನಮ್ಮ ಅಂಗಗಳಲ್ಲಿ ಒಂದಾದ ನಮ್ಮ ಚಿಕ್ಕ ನಾಲಿಗೆಯನ್ನು ಬಳಸುತ್ತೇವೆ. ಮೌನ ಅಥವಾ ದೈಹಿಕ ಕ್ರಿಯೆಗಳಿಂದ ಇತರರನ್ನು ಅವಮಾನಿಸಲು ನಾವು ಸಮ್ಮತಿಸುತ್ತೇವೆ. ಇದು ಎಂತಹ ದೊಡ್ಡ ಸಾಮಾಜಿಕ ಪಿಡುಗು. ಇದನ್ನು ಇತರರು ನೋಡದಿದ್ದರೂ ದೇವರು ನೋಡುತ್ತಿದ್ದಾರೆ.

 

ಆದ್ದರಿಂದ ದೇವರ ಮಕ್ಕಳೇ! "ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿ ಹೇಳಬಾರದು" ಎಂಬ ಆಜ್ಞೆಯ ಮೂಲಕ ಒಬ್ಬರ ಒಳ್ಳೆಯ ಹೆಸರಿನ ಮೇಲಿರುವ ಕಾಳಜಿಯನ್ನು ನೋಡುತ್ತೇವೆ. ನಾವೂ ಸಹ ಕರ್ತನಿಗೆ ಭಯಪಟ್ಟು ಬೆಂಕಿಯಂತಹ ಈ ನಾಲಿಗೆಯಿಂದ ಇತರರ ಜೀವನ ಚಕ್ರಕ್ಕೆ ಬೆಂಕಿ ಹಚ್ಚಿಬಿಡದಂತೆ, ಪರಿಶುದ್ಧಾತ್ಮನು ನಮ್ಮ ವಿಷ ತುಂಬಿದ ನಾಲಿಗೆಯನ್ನು ಮುಟ್ಟಲು ಸಮರ್ಪಿಸೋಣ. 1 ಪೇತ್ರ 2:22 "ಆತನು ಯಾವ ಪಾಪವನ್ನೂ ಮಾಡಲಿಲ್ಲ, ಯೇಸುಕ್ರಿಸ್ತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ" ಎಂದು ಹೇಳಲ್ಪಟ್ಟಿದೆ. ನಾವು ಸಹ ಮತ್ತೊಬ್ಬರು ಹೇಳುವುದನ್ನೂ, ಮಾಡುವುದನ್ನೂ ಒಳ್ಳೆಯ ಉದ್ದೇಶದಿಂದ ಅಂಗೀಕರಿಸೋಣ. ಆಮೆನ್.

- A. ಬ್ಯೂಲಾ

 

ಪ್ರಾರ್ಥನಾ ಅಂಶ:

ಕರೂರಿನಲ್ಲಿ ನಡೆಯಲಿರುವ "ಉಜ್ಜೀವನವನ್ನು ಬಯಸುವವರ ಶಿಬಿರ" ದಲ್ಲಿ ಉಜ್ಜೀವನವನ್ನು ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ, ಉಜ್ಜೀವನವನ್ನು ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet