Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.08.2022 (Youth Special)
Share:

By Village Missionary Movement

Monday, 29-Aug-2022

ಧೈನಂದಿನ ಧ್ಯಾನ(Kannada) – 29.08.2022 (Youth Special)

 

ವಾಕ್ಯ ಸಿಗದ ಕ್ಷಾಮ

 

"...ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ." - ಆಮೋಸ 8:11

 

ಅನೇಕ ರಾಷ್ಟ್ರಗಳಲ್ಲಿ ಆಹಾರದ ಕೊರತೆ ಮತ್ತು ನೀರಿನ ಕೊರತೆ ಉಂಟಾಗಿದೆ ಎಂದು ನಮಗೆ ತಿಳಿದಿದೆ. ಆದರೆ ಆಮೋಸ ಪ್ರವಾದಿಯ ಮೂಲಕ ವಾಕ್ಯ ಸಿಗದ ಕ್ಷಾಮವು ದೇಶದಲ್ಲಿ ಬರಲಿದೆ ಎಂದು ಎಚ್ಚರಿಸುತ್ತಿದ್ದಾರೆ.

 

ಆಹಾರದ ಕೊರತೆಯಾದರೆ ಅದು ನಮ್ಮ ದೇಹದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಆದರೆ ವಾಕ್ಯವು ಕೇಳಲು ಲಭ್ಯವಾಗದಿದ್ದಾಗ ಅಂತರಂಗ ಮನುಷ್ಯನು ದುರ್ಬಲನಾಗುವುದಲ್ಲದೆ ಕೊನೆಗೆ ನಿತ್ಯತ್ವವನ್ನೂ ಕಳೆದುಕೊಳ್ಳುತ್ತಾನೆ.

 

ಆದುದರಿಂದಲೇ ಕರ್ತನಾದ ಯೇಸು ತನ್ನ ಪ್ರಸಂಗದಲ್ಲಿ, "ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ, ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಹೇಳಿದರು (ಮತ್ತಾ. 4:4). “ನಿಮ್ಮ ಮಾತುಗಳನ್ನು ಪಡೆದ ತಕ್ಷಣ ನಾನು ಅವುಗಳನ್ನು ತೆಗೆದುಕೊಂಡೆ. ನಿಮ್ಮ ಮಾತುಗಳು ನನಗೆ ಸಂತೋಷ ಮತ್ತು ನನ್ನ ಹೃದಯಕ್ಕೆ ಹರ್ಷಾನಂದವೂ ಆಗಿತ್ತು" ಎಂದು ಯೆರೆಮಿಯ ಪ್ರವಾದಿ ದೇವರ ವಾಕ್ಯವನ್ನು ಆಹಾರದಂತೆ ಸೇವಿಸಿದೆನು ಎಂದು ಹೇಳಿದರು. ಬಹುಶಃ ಮಳೆ ಕೊರತೆಯಿಂದಲೋ ಅಥವಾ ಯುದ್ಧಗಳಿಂದಲೋ ಆಹಾರದ ಕೊರತೆ ಉಂಟಾಗಬಹುದು. ಆದರೆ ವಾಕ್ಯ ಕೇಳಲು ಅವಕಾಶ ದೊರೆಯದ ಕ್ಷಾಮ ಬಹಳ ಅಪಾಯಕಾರಿ.

 

ಕಳೆದ ವರ್ಷಗಳಲ್ಲಿ ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಆಲಯಗಳು ತೆರೆಯದ ಕಾರಣ ವಾಕ್ಯದ ಬರಗಾಲ ಬಂದುಬಿಟ್ಟಿತೋ? ಎಂದು ಕೂಡ ನಾವು ಯೋಚಿಸಿರಬಹುದು. ಸಾಮಾಜಿಕ ಮಾಧ್ಯಮಗಳ ಮೂಲಕ ದೇವರ ವಾಕ್ಯವನ್ನು ಕೇಳಲು ಕರ್ತನು ನಮಗೆ ಸಹಾಯ ಮಾಡಿದರಲ್ಲಾ? ಆದರೆ, ಹೀಗೂ ಸಹ ವಾಕ್ಯಗಳನ್ನು ಕೇಳಲಾಗದ ಭಯಾನಕ ದಿನಗಳು ಬರಲಿವೆ.

 

ಪ್ರೀತಿಯ ಯುವಜನರೇ, ನಾವು ದೇವರ ವಾಕ್ಯವನ್ನು ಆಲಿಸುವುದನ್ನು ಮತ್ತು ಅದನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ಅಭ್ಯಾಸ ಮಾಡಿದರೆ, ನಾವು ಯಾವುದೇ ಕ್ಷಾಮವನ್ನಾದರೂ ಎದುರಿಸಬಹುದು. ಕರ್ತನ ವಾಕ್ಯವನ್ನು ಧ್ಯಾನಿಸಲು ಬಿಡದೇ ಅದರ ಆಶೀರ್ವಾದವನ್ನು ಪಡೆದುಕೊಳ್ಳಲು ಬಿಡದೇ ಪ್ರಾರ್ಥನೆ ಎಂಬ ನಮಗೂ ಮತ್ತು ದೇವರಿಗೂ ಇರುವ ಸಂಬಂಧದಲ್ಲಿ ನಮ್ಮನ್ನು ಬದುಕಲು ಬಿಡದೇ ನಮ್ಮನ್ನು ಮತ್ತು ನಮ್ಮ ಸುತ್ತಮುತ್ತಲಿನವರನ್ನೂ ತೊಂದರೆಗಳಿಗೊಳಪಡಿಸುವ ದುಷ್ಟರಿಂದ ನಮ್ಮನ್ನು ಕಾಪಾಡಿಕೊಳ್ಳಲು ನಾವು ಕರ್ತನ ವಾಕ್ಯಗಳಿಂದ ನಮ್ಮ ಹೃದಯವನ್ನು ತುಂಬಿಸಿಕೊಳ್ಳೋಣವಾ? ನಮ್ಮ ಮಕ್ಕಳ ಹೃದಯವನ್ನು ವಾಕ್ಯದಿಂದ ತುಂಬಿಸಿ ಅವರ ಆತ್ಮಗಳನ್ನು ಸಮೃದ್ಧಗೊಳಿಸೋಣವಾ?

ಕ್ರಿಸ್ತನಲ್ಲಿ ಶಿಷ್ಯರನ್ನು ರೂಪಿಸೋಣ! ನಮ್ಮ ರಾಷ್ಟ್ರವನ್ನು ಸಾಮಾಜಿಕ ಭ್ರಷ್ಟಾಚಾರದಿಂದ ರಕ್ಷಿಸೋಣ - ಹಲ್ಲೇಲೂಯ!

- Bro.ಪಾಲ್ ಜೆಬಸ್ಟಿನ್ ರಾಜ್

 

ಪ್ರಾರ್ಥನಾ ಅಂಶ:

ಗೆತ್ಸೆಮನೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯ ಅಗತ್ಯತೆಗಳು ಪೂರೈಸಲ್ಪಡುವಂತೆ, ಸುಗಮವಾಗಿ ಶೀಘ್ರವಾಗಿ ಅದರ ಕಾರ್ಯಗಳು ಮುಕ್ತಾಯಗೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş