By Village Missionary Movement
Friday, 26-Aug-2022ಧೈನಂದಿನ ಧ್ಯಾನ(Kannada) – 27.08.2022
ಸಾಂಸ್ಕೃತಿಕ ಭ್ರಷ್ಟಾಚಾರ
"...ಭಕ್ತಿಹೀನರಾಗಿ ಬದುಕುವವರ ಗತಿ ಇಂಥದೆಂದು ಸೂಚಿಸುವದಕ್ಕಾಗಿ;...." - 2 ಪೇತ್ರ 2:6
ನಮ್ಮ ಭಾರತೀಯ ಸಂಸ್ಕೃತಿಯು, ಸಂಸ್ಕೃತಿಗಳಲ್ಲಿ ಉದಾತ್ತ ಗುಣಗಳಿಂದ ಕೂಡಿದೆ. ಸ್ವಲ್ಪ ಸ್ವಲ್ಪವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯು ಪ್ರವೇಶಿಸಿ ನಮ್ಮ ದೇಶವೂ ತೊಂದರೆಗೊಳಗಾಗಲು ಪ್ರಾರಂಭಿಸಿದೆ. ಇದರ ಪರಿಣಾಮವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸಂವಹನ ಸ್ನೇಹ, ಪುರುಷರಿಗೆ ಪುರುಷ, ಮಹಿಳೆಗೆ ಮಹಿಳೆ ಮದುವೆ ಮಾಡಿಕೊಳ್ಳುವುದು, ಚಿಕ್ಕ ಮಕ್ಕಳಿಗೆ ಲೈಂಗಿಕ ಕಿರುಕುಳ, ಅಂತರ್ಜಾಲ ತಾಣಗಳಲ್ಲಿ ಜೀವ ಕಳೆದುಕೊಳ್ಳುವ ಯುವ ಪೀಳಿಗೆ, ಅವಿಧೇಯ ಮಕ್ಕಳು, ಅಧ್ಯಯನ ಮಾಡದೆ ಯಶಸ್ಸು ಪಡೆಯುವ ಮಾರ್ಗಗಳು, ಅಡ್ಡ ದಾರಿಯಲ್ಲಿ ಕೆಲಸ ಹುಡುಕುವುದು - ಹಣ ಸಂಪಾದನೆ, ರಸ್ತೆ ಅಪಘಾತಗಳನ್ನು ಕಂಡು ಹೆದರುವ ಕಾಲ ಹೋಗಿ, ಅದನ್ನು ವೀಡಿಯೋ ತೆಗೆಯುವ ಮಟ್ಟಿಗೆ ನಮ್ಮ ಸಮಾಜ ಅಧೋಗತಿಗಿಳಿದಿದೆ ಎಂಬುದನ್ನು ಕಂಡು ದುಃಖಿಸುವುದುಂಟಾ? ಇದು ಯಾವಾಗ ಉತ್ತಮಗೊಳ್ಳುತ್ತದೆ ಎಂದು ನಾವು ಯೋಚಿಸಿದ್ದುಂಟಾ? ಈ ಸಮಸ್ಯೆಗಳು ಸಮಾಜದೊಂದಿಗೆ ಮುಕ್ತಾಯಗೊಳ್ಳದೆ, ಸಮಾಜದಲ್ಲಿ ರಕ್ಷಣೆಯ ಪ್ರಮುಖ ಪಾತ್ರ ವಹಿಸಿ ಸಭೆಗಳೊಳಗೂ ಪ್ರವೇಶಿಸಿದೆ ಎಂಬುದು ತುಂಬಾ ದುಃಖವನ್ನುಂಟು ಮಾಡುತ್ತಿದೆ.
ಇದೆಲ್ಲವೂ ಸಾಮಾಜಿಕ ಸಮಸ್ಯೆ ಎನ್ನುವುದನ್ನು ಮೀರಿ, ಒಬ್ಬ ವ್ಯಕ್ತಿಯ ಅನೈತಿಕತೆಯ ಆರಂಭ ಎಂದೇ ಪರಿಗಣಿಸಬೇಕು. ಇಂತಹ ಭ್ರಷ್ಟ ಸಮಾಜಗಳ ಬಗ್ಗೆ ಮತ್ತು ಅವುಗಳು ದೇವರಿಂದ ಹೇಗೆ ನಾಶವಾದವು ಎಂಬುದನ್ನು ಕುರಿತೂ ನಾವು ಸತ್ಯವೇದದಲ್ಲಿ ಓದಬಹುದು. ಉದಾಹರಣೆಗೆ, ಆದಿಕಾಂಡ 11 ನೆಯ ಅಧ್ಯಾಯದಲ್ಲಿ, ಜನರ ಹೆಮ್ಮೆ ಎಂಬ ಸ್ಥಿತಿಯು ದೇವರು ಅವರ ಭಾಷೆಗಳನ್ನು ಪ್ರತ್ಯೇಕಿಸಲು ಕಾರಣವಾಯಿತು. ನೋಹನ ಕಾಲದಲ್ಲಿ ಜೀವಿಸಿದ ಜನರ ಪಾಪವು ದೇವರು ಅವರನ್ನು ಪ್ರವಾಹದಿಂದ ನಾಶಮಾಡುವಂತೆ ಮಾಡಿತು. ಲೋಟನ ಸಮಯದ ಸಾಮಾಜಿಕ ಭ್ರಷ್ಟಾಚಾರ (ಸಲಿಂಗಕಾಮ) ದೇವರು ಅವರನ್ನು ಬೆಂಕಿಯಿಂದ ನಾಶಮಾಡಲು ಕಾರಣವಾಯಿತು.
ಹೊಸ ಒಡಂಬಡಿಕೆಯಲ್ಲಿ ಯೇಸುಕ್ರಿಸ್ತನು ನಮಗಾಗಿ ಸತ್ತು ಪುನರುತ್ಥಾನನಾದ ಕಾರಣ ಇಂತಹ ವಿನಾಶಗಳು ಇಲ್ಲದಿದ್ದರೂ ಸಹ, 2 ಪೇತ್ರನು ಹೀಗೆ ಹೇಳುತ್ತಿದೆ, "ನಾವು ಇಂತಹ ಕಲ್ಮಶಗಳಿಂದ ತಪ್ಪಿಸಿಕೊಂಡ ನಂತರ ಮತ್ತೆ ಅವುಗಳಲ್ಲಿ ಸಿಕ್ಕಿಬಿದ್ದರೆ, ನಮ್ಮ ಮೊದಲಸ್ಥಿತಿಗಿಂತ ಕೊನೆಯ ಸ್ಥಿತಿಯು ಬಹು ಘೋರವಾಗಿ ರುತ್ತದೆ" ಎಂದು.
ಹೌದು ಪ್ರಿಯರೇ, ಮೊದಲು ತೋಮ ನಂತರ ಅನೇಕ ಮಿಷನರಿಗಳ ಅಮೂಲ್ಯ ತ್ಯಾಗದ ಮೂಲಕ ದೇವರ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ ಮತ್ತು ನಾವು ಕರ್ತನಾದ ಯೇಸುವನ್ನು ನಮ್ಮ ರಕ್ಷಕನನ್ನಾಗಿ ಸ್ವೀಕರಿಸಿದ್ದೇವೆ, ನಮ್ಮಲ್ಲಿ ನಡೆಯುತ್ತಿರುವ ಹಲವಾರು ದೊಡ್ಡ ಅವ್ಯವಸ್ಥೆಗಳ ಮಧ್ಯೆ ನಮ್ಮ ಸಮಾಜದ ಹಿನ್ನೆಲೆ ಏನು? 2 ಪೇತ್ರ 1:5-7 ವಚನಗಳು ಜಾಗರೂಕರಾಗಿದ್ದು ಈ ಭ್ರಷ್ಟಾಚಾರಗಳಿಂದ ದೂರ ಓಡಿಹೋಗುವಂತೆ ಹೇಳುತ್ತಿದೆ. ನಾವು ಬದಲಾದಂತೆ ನಮ್ಮ ಸುತ್ತಲಿನ ಸಮಾಜವೂ ಖಂಡಿತವಾಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ. ಆದುದರಿಂದ ದೈವ ಭಕ್ತಿಯ ಮೂಲಕ ಇವೆಲ್ಲವುಗಳಿಂದ ಓಡಿಹೋಗೋಣ. ನಮ್ಮ ಸಮಾಜವನ್ನು ಎಷ್ಟು ಸಾಧ್ಯವೋ ಅಷ್ಟು ಬದಲಾಯಿಸೋಣ!!
- Mrs. ಮಂಜುಳಾ
ಪ್ರಾರ್ಥನಾ ಅಂಶ:
ಪ್ರತಿ ತಿಂಗಳು ನಾವು ಹೊರಬಿಡುವ ಮಾಸಪತ್ರಿಕೆಗಳನ್ನು ಮುದ್ರಿಸಲು ಮತ್ತು ಅದನ್ನು ಕಳುಹಿಸಲು ಬೇಕಾದ ಎಲ್ಲಾ ಹಣದ ಅವಶ್ಯಕತೆಗಳನ್ನು ಕರ್ತನು ಪೂರೈಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482