Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.02.2021
Share:

By Village Missionary Movement

Monday, 08-Feb-2021

ಧೈನಂದಿನ ಧ್ಯಾನ(Kannada) – 08.02.2021

ಸೇರಿ! ಪ್ರಾರ್ಥಿಸಿರಿ!

"...ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವ ವಿಷಯಕ್ಕಾದರೂ ಭೂಮಿಯ ಮೇಲೆ ಸಮ್ಮತಿಸಿದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದು." - ಮತ್ತಾಯ 18:19

ಇಬ್ಬರು ಮೂವರು ಸ್ತ್ರೀಯರು ಸೇರಿ ಅಕ್ಕಪಕ್ಕದ ಕಥೆಗಳನ್ನು ಮಾತಾಡಿದರೆ ಕೆಲವು ಮನೆಗಳಲ್ಲಿ ಅಸ್ತಿವಾರಗಳೇ ಆಡುತ್ತವೆ. ಅದೇ ಸ್ತ್ರೀಯರು ಸೇರಿ ಒಮ್ಮನಸ್ಸಿನಿಂದ ಪ್ರಾರ್ಥಿಸಿದರೆ ಪರಲೋಕವನ್ನೇ ಕದಲಿಸಬಹುದು. ಈ ನಿಜವನ್ನು ತಿಳಿದುಕೊಂಡರೆ ಆಶೀರ್ವಾದವೇ. ಈ ರೀತಿಯಾಗಿ ವ್ಯರ್ಥ ಕಥೆಗಳನ್ನು ಮಾತನಾಡಿ ಸಮಯವನ್ನು ಕಳೆದು ಬಂದ ಮೂವರು ಸ್ನೇಹಿತೆಯರು ಪ್ರಾರಂಭ ಹಂತದ ಕೊರೋನದ ಘೋರ ದಿನಗಳಲ್ಲಿ, ಪ್ರಾರ್ಥಿಸಲು ತೀರ್ಮಾನಿಸಿದರು. ಅಮೆರಿಕ, ಇಂಗ್ಲೆಂಡ್, ಇಟಲಿ ದೇಶಗಳಲ್ಲಿ ಕೊರೋನ ದುರ್ಬಲ ಸಂದೇಶಗಳನ್ನು ಕೇಳಿ ಅದನ್ನು ಒಬ್ಬರಿಗೊಬ್ಬರು ಹಂಚಿಕೊಂಡು, ಭಾರದೊಂದಿಗೆ ಪ್ರಾರ್ಥಿಸಿದರು. ಕೊನೆಯದಾಗಿ ಬೀದಿಗಳಲ್ಲಿ ಹೊರದೇಶಕ್ಕೆ ಹೋಗಿ ಬಂದ ಒಬ್ಬರಿಗೆ ಕೊರೋನ ಎಂದು ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು. ಎರಡೇ ವಾರಗಳಲ್ಲಿ ಅವರು ಸ್ವಸ್ಥರಾಗಿ ಮನೆಗೆ ಹಿಂತಿರುಗಿದರು. ಅದ್ಭುತ ವಿಧವಾಗಿ ಯಾರಿಗೂ ಹರಡಲಿಲ್ಲ ಎಂಬುದನ್ನು ಕಂಡ ಕೂಡಲೆ ಪ್ರಾರ್ಥನೆಯ ಮಹತ್ವವನ್ನು ಗ್ರಹಿಸಿದವರಾಗಿ, ಇಂದಿನವರೆಗೂ ಆ ಪ್ರಾರ್ಥನೆಯನ್ನು ನಡೆಸುತ್ತಿದ್ದಾರೆ. ಪೇತ್ರನು ಸುವಾರ್ತೆ ಪ್ರಕಟಿಸಿದ ನಿಮಿತ್ತವಾಗಿ ಅವರನ್ನು ಬೇಡಿಗಳಿಂದ ಕಟ್ಟಿ ಸೆರೆಯೊಳಗೆ ಹಾಕಲು ಆಜ್ಞಾಪಿಸಿದರು ಹೆರೋದಿನ ಅರಸನು. ಪಸ್ಕಾ ಹಬ್ಬ ಮುಗಿದ ಕೂಡಲೇ ಸೆರೆಹಿಡಿದಿದ್ದ ಪೇತ್ರನೋ ಕಳಂಕವಿಲ್ಲದೆ ನಿದ್ದೆ ಮಾಡುತ್ತಿದ್ದನು. ಇದನ್ನು ಕೇಳಿದ ಸಭೆ ಜನರು ಸೇರಿ ಒಮ್ಮನಸ್ಸಿನಿಂದ ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದರು. ಅದೇ ಸಮಯದಲ್ಲಿ ಸೆರೆಯಲ್ಲಿ ದೇವದೂತನು ಪೇತ್ರನನ್ನು ಎಬ್ಬಿಸುತ್ತಾನೆ. ಆಗ ಬೇಡಿಗಳು ಕಿತ್ತುಕೊಂಡು ಬಿದ್ದು ಹೋಗುತ್ತವೆ. ಪೇತ್ರನು ಎಲ್ಲಾ ಕಾವಲುಗಾರರನ್ನು ದಾಟಿ ಸಭೆಯವರು ಕೂಡಿ ಪ್ರಾರ್ಥಿಸುತ್ತಿದ್ದ ಮನೆಯ ಬಾಗಿಲಿಗೆ ದೇವದೂತನ ಮೂಲಕ ಕರೆದಕೊಂಡು ಬರಲ್ಪಟ್ಟನು. ಅವರು ಕೂಡಿ  ಪ್ರಾರ್ಥಿಸಲು ಪ್ರಾರಂಭಿಸಿದಾಗಲೇ ದೇವರು ಕಾರ್ಯ ಮಾಡಲು ಪ್ರಾರಂಭಿಸಿದರು, ಪೇತ್ರನು ಸತತವಾಗಿ ಸೇವೆ ಮಾಡಲು ಪ್ರಾರಂಭಿಸಿದರು.ಅವರಿಂದ ಅನೇಕರು ರಕ್ಷಣೆ ಹೊಂದಿ ಸಭೆಯಲ್ಲಿ ಸೇರಿಸಲ್ಪಟ್ಟರು.

ಪ್ರಿಯರೇ!  ಒಮ್ಮನಸ್ಸಿನಿಂದ ಗುಂಪಾಗಿ ಪ್ರಾರ್ಥಿಸುವ ಪ್ರಾರ್ಥನೆಗೆ ಬಹಳ ಬಲವುಂಟು. ಸೇರಿ ಪ್ರಾರ್ಥಿಸುವುದಕ್ಕೆ ಇದು ತಕ್ಕ ಸಮಯ. ಆದ್ದರಿಂದ ದಿನಗಳನ್ನು ವ್ಯರ್ಥಮಾಡದೆ ನಿಮ್ಮೊಂದಿಗೆ ಯಾವುದೋ ಒಂದು ಕಾರ್ಯದಲ್ಲಿ ಐಕ್ಯವಾಗುವ ವ್ಯಕ್ತಿಯನ್ನು ಯೇಸುವಿನ ನಾಮದ ನಿಮಿತ್ತವಾಗಿ ಒಂದಾಗಿ ಸೇರಿಸಿಕೊಂಡು ವಾರದಲ್ಲಿ ಒಂದು ದಿನ ಪ್ರಾರ್ಥಿಸಲು ಪ್ರಾರಂಭಿಸಿರಿ. ದೇವರು ಕೊಡುವ ಉತ್ತರವನ್ನು ಕಂಡು ಆಶ್ಚರ್ಯ ಪಡುತ್ತೀರ. ನಿಮ್ಮ ಪ್ರಾರ್ಥನೆ ಅನೇಕರ ಕಟ್ಟುಗಳನ್ನು ಕಿತ್ತುಹಾಕಿ, ಬಂಧಿಸಲ್ಪಟ್ಟ ಕಬ್ಬಿಣದ ಕದಗಳನ್ನು ತೆರೆಯುತ್ತದೆ. ಇಂದು ಅನೇಕ ಸೇವಕರು, ಮಿಷನರಿಗಳು ಕೂಡ ಪೇತ್ರನ ಹಾಗೆ ಹಲವು ವಿಧವಾದ ಕಾನೂನುಗಳಿಂದ, ಆಡಳಿತದಿಂದ, ಕುಟುಂಬದ ಭಾರಗಳಿಂದ ಕಟ್ಟಲ್ಪಟ್ಟಿರುವ ಸ್ಥಿತಿಯಲ್ಲಿ ಮಲಗಿ ಕೊಂಡಿದ್ದಾರೆ. ಅವರ ಕಟ್ಟುಗಳು ಬಿಚ್ಚಲ್ಪಟ್ಟು, ಎಚ್ಚರವಾಗಿ ಸೇವೆ ಮಾಡಲು ನಿಮ್ಮ ಪ್ರಾರ್ಥನೆಗಳು ಅಗತ್ಯ. ನಿಮ್ಮ ಪ್ರಾರ್ಥನೆಗಳಿಗಾಗಿ ದೇವರು ಕಾದಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳು ಸಾಧಿಸಲಾಗದ್ದನ್ನು ನಮ್ಮ ಮೊಣಕಾಲುಗಳು ಸಾಧಿಸುತ್ತದೆ. ಆದರೆ ಕಡಿಮೆ ಎಂದರೂ ವಾರದಲ್ಲಿ ಒಂದು ದಿನ ಒಂದು ಗಂಟೆ ಇಬ್ಬರು ವ್ಯಕ್ತಿಗಳು ಸೇರಿ ಪ್ರಾರ್ಥಿಸಲು ತೀರ್ಮಾನಿಸಿರಿ. ಅದು ಅಭ್ಯಾಸವಾಗಲಿ. ನಂತರ ಪ್ರಾರ್ಥನೆಯೇ ನಿಮ್ಮ ಜೀವನವಾಗಿ ಮಾರ್ಪಡುತ್ತದೆ. ಆಮೆನ್.
-    Mrs. ಅನ್ಬು ಜ್ಯೋತಿ ಸ್ಟಾಲಿನ್.

ಪ್ರಾರ್ಥನಾ ಅಂಶ:-
ಬೈಬಲ್ ಕಾಲೇಜಿನಲ್ಲಿ ಸೇರಿರುವ ಮಕ್ಕಳ ಆತ್ಮೀಕ ಬೆಳವಣಿಗೆಗಾಗಿ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel