Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.08.2022
Share:

By Village Missionary Movement

Thursday, 25-Aug-2022

ಧೈನಂದಿನ ಧ್ಯಾನ(Kannada) – 26.08.2022

 

ಚಾಡಿ ಹೇಳುವುದರಿಂದ ...

 

“ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು; ಚಾಡಿಕೋರನು ಇಲ್ಲದಿದ್ದರೆ ಜಗಳ ಶಮನವಾಗುವದು” - ಜ್ಞಾನೋಕ್ತಿ 26:20

 

ನಮ್ಮ ಮನೆಯಲ್ಲಿ, ನಮ್ಮ ಸಂಬಂಧಿಕರಲ್ಲಿ, ನಮ್ಮ ಕೆಲಸದ ಸ್ಥಳಗಳಲ್ಲಿ ರಾಜಕೀಯ ಜಗಳಗಳು, ಗೊಂದಲಗಳು, ಒಡಕುಗಳು ಮತ್ತು ಘರ್ಷಣೆಗಳು, ಅನೇಕ, ಅನೇಕ! ಇದೆಲ್ಲದಕ್ಕೂ ಒಂದು ಪ್ರಮುಖ ಕಾರಣವೆಂದರೆ - ಚಾಡಿ ಹೇಳುವುದು!

 

ಚಾಡಿ ಹೇಳುವುದನ್ನು ತಪ್ಪಿಸಿಕೊಳ್ಳಲು ತತ್ವಜ್ಞಾನಿ ಸಾಕ್ರಟೀಸ್ ಅವರು ಒಂದು ಆಲೋಚನೆ ನೀಡಿದರು. ಅವರ ಶಿಷ್ಯರೊಬ್ಬರು ಅವರ ಬಳಿ, "ನಿಮ್ಮ ಸ್ನೇಹಿತನೊಬ್ಬನ ಬಗ್ಗೆ ನಾನು ಒಂದು ಸುದ್ದಿ ಕೇಳಿದೆ" ಎಂದು ಹೇಳಿದರು. ಸಾಕ್ರಟೀಸ್ ಅವನ ಬಳಿ, "ನೀವು ಅದನ್ನು ನನಗೆ ಹೇಳುವ ಮೊದಲು ಮೂರು ಬಾರಿ ಯೋಚಿಸಿದ್ದೀರಾ?" ಎಂದರು. ಆಶ್ಚರ್ಯದಿಂದ ಅವರತ್ತ ನೋಡಿದ ವಿದ್ಯಾರ್ಥಿಗೆ, “ಏನು ನೋಡುತ್ತಿದ್ದೀಯಾ, 1) ನೀನು ನನಗೆ ಹೇಳಲು ಹೊರಟಿರುವುದು 100% ನಿಜವೇನಾ? 2) ನೀನು ಹೇಳಲು ಹೊರಟಿರುವುದು ಒಳ್ಳೆಯದೇನಾ? 3) ಈ ಸಂದೇಶವು ಯಾರಿಗಾದರೂ ಉಪಯುಕ್ತವಾಗಿದೆಯೇ? ಈ ಮೂರಕ್ಕೂ ಅವನ ಉತ್ತರ "ಇಲ್ಲ". ಸಾಕ್ರೆಟೀಸ್, "ಒಳ್ಳೆಯದಲ್ಲದ ಮತ್ತು ಯಾರಿಗೂ ಪ್ರಯೋಜನವಿಲ್ಲದ ಇಂತಹ ಸುದ್ದಿಗಳನ್ನು ನನಗೆ ಏಕೆ ಹೇಳಬೇಕು?" ಎಂದರು. ವಿದ್ಯಾರ್ಥಿ ಶಾಂತವಾಗಿ ಯೋಚಿಸಿದನು.

 

ಚಾಡಿ ಹೇಳುವ ಕಾರ್ಯವು ಬಹಿರಂಗವಾಗಿ ಒಂದು ದೊಡ್ಡ ಪಾಪವಾಗಿ ಕಾಣದಿದ್ದರೂ, ಸಮಾಜದ ಮೇಲೆ ಅದರ ಪರಿಣಾಮಗಳು ತುಂಬಾ ಕೆಟ್ಟದಾಗಿದೆ. ಆದುದರಿಂದ, ಕರ್ತನು ಮೋಶೆಗೆ ಹೀಗೆ ಆಜ್ಞಾಪಿಸಿದರು, "ಪರಿಚಯವುಳ್ಳವರಲ್ಲಿ ಒಬ್ಬರ ಮೇಲೊಬ್ಬರು ಚಾಡಿಹೇಳಬಾರದು. ಮತ್ತೊಬ್ಬನಿಗೆ ಮರಣ ಶಿಕ್ಷೆಯಾಗಲೇಬೇಕೆಂದು ಛಲ ಹಿಡಿಯಬಾರದು. ನಾನು ಯೆಹೋವನು" (ಯಾಜಕಕಾಂಡ 19:16). ಇದರ ಬಗ್ಗೆ ಸೊಲೊಮೋನನು ಹೇಳುತ್ತಾರೆ, ಚಾಡಿ ಹೇಳುವವನು ಪ್ರಾಣ ಸ್ನೇಹಿತನನ್ನೂ ಸಹ ಬೇರ್ಪಡಿಸುತ್ತಾನೆ ಎಂದು. ಹುಡುಗಾಟದಂತಿರುವ ಅವರ ಮಾತುಗಳು ಒಳಗೊಳಗೆ ಹಗೆಯನ್ನುಂಟುಮಾಡುತ್ತವೆ ಎಂದು ಹೇಳುತ್ತಾರೆ. ಅಲ್ಲದೆ, ಸೊಲೊಮೋನ್ ಜ್ಞಾನಿಯು ಹೇಳುತ್ತಾರೆ, ಹೇಗೆ ಬೆಂಕಿಯು ಮರವಿಲ್ಲದೆ ಸುಡುವುದಿಲ್ಲವೋ ಹಾಗೆಯೇ ಚಾಡಿ ಹೇಳುವವರಿಲ್ಲದಿದ್ದರೆ ಜಗಳ ಶಮನವಾಗುತ್ತದೆ ಎಂದು. ಪೌಲನು ಕೊರಿಂಥದವರಿಗೆ ಬರೆದ ಪತ್ರಿಕೆಯಲ್ಲಿ, ಅನೇಕ ಪಾಪಗಳ ಬಗ್ಗೆ ಹೇಳುವಾಗ, ಚಾಡಿಹೇಳುವದು ಕಿವಿಯೂದುವದು ಇವುಗಳು ನಿಮ್ಮೊಳಗೆ ಕಾಣಬರುವದೋ ಏನೋ ಎಂದು ನನಗೆ ಭಯ ಉಂಟು (2 ಕೊರಿಂ. 12: 20, 21) ಎನ್ನುತ್ತಾರೆ.

 

ಪ್ರಿಯರೇ! ಚಾಡಿ ಹೇಳುವ ಪಾಪ ನಿಮ್ಮೊಳಗಿದೆಯೋ ಎಂದು ನೋಡಿ. ನಾವು ಇತರರ ಬಗ್ಗೆ ಏನನ್ನಾದರೂ ಹೇಳುವಾಗ ದೇವರು ಅದನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂಬ ಭಯ ನಮಗಿರಲಿ. ಸಾಕ್ರಟೀಸ್ ಅವರ ಸಲಹೆಯೂ ನಮಗೆ ಸಹಾಯ ಮಾಡಲಿ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

"ಪ್ರಾರ್ಥನಾ ಗುಂಪುಗಳ ಕೈಪಿಡಿ" ಪತ್ರಿಕೆಯ ಮೂಲಕ ಪ್ರಾರ್ಥನಾ ಗುಂಪುಗಳನ್ನು ನಡೆಸಲು ಬೇಕಾದ ಸಲಹೆ ಮತ್ತು ಪ್ರಾರ್ಥನಾ ಅಂಶಗಳು ಅನೇಕರಿಗೆ ಉಪಯುಕ್ತವಾಗಿರಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al