By Village Missionary Movement
Wednesday, 24-Aug-2022ಧೈನಂದಿನ ಧ್ಯಾನ(Kannada) – 25.08.2022
ಇದಕ್ಕೆ ತ್ವರೆಪಡು
"ನಿನಗೆ ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳ್ಳೆ ಯದು ಮಾಡುವದನ್ನು ತಪ್ಪಿಸಬೇಡ" - ಜ್ಞಾನೋಕ್ತಿಗಳು 3:27
ಮುರಳಿ ಎಂಬ ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅನೇಕ ಜನರು ಗುಂಪುಗುಂಪಾಗಿ ನಿಂತಿರುವುದನ್ನು ಕಂಡರು. ಅವರೂ ಸಹ ಏನೆಂದು ನೋಡಲು ಕುತೂಹಲದಿಂದ ಗುಂಪಿನೊಳಗೆ ಹೋದರು. ಅಲ್ಲಿ ಒಬ್ಬರು ಅಪಘಾತದಲ್ಲಿ ಸಿಲುಕಿ ರಕ್ತದ ಮಡುವಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಮುರಳಿಯ ಹೃದಯ ತಲ್ಲಣಗೊಂಡಿತು. ಯಾಕೆ ಯಾರೂ ಸಹಾಯ ಮಾಡದೆ ತಮಾಷೆ ನೋಡುತ್ತಿದ್ದೀರ ಎಂದು ಕೇಳಿದರು. 108ಕ್ಕೆ ಕರೆ ಮಾಡಿದ್ದೇವೆ ಅವರು ಬರುತ್ತಾರೆ ಎಂದು ಕೆಲವರು ಹೇಳಿದರು. ಇನ್ನು ಕೆಲವರು ಇದರಲ್ಲೆಲ್ಲಾ ತಲೆಯಿಟ್ಟು ಯಾರು Court - case ಎಂದು ಅಲೆಯೋದು. ನಮಗೇಕೆ ಇದೆಲ್ಲಾ ಎಂದು ನಿರ್ಲಕ್ಷ್ಯವಾಗಿ ಹೇಳಿದರು. ಮುರಳಿ ಸಹಾಯ ಮಾಡಲು ಮುಂದಾದಾಗ, ನೆರೆದಿದ್ದವರು ಆತನೂ ಸಹಾಯ ಮಾಡದಂತೆ ಅಡ್ಡಿ ಮಾಡಿದರು. ಕೊನೆಗೆ ಆ ವ್ಯಕ್ತಿ ಸತ್ತೇ ಹೋದ.
ಲೂಕನು ಬರೆದ ಸುವಾರ್ತೆಯಲ್ಲಿ ಇದೇ ರೀತಿಯ ಸಾಮ್ಯವನ್ನು ಯೇಸುಕ್ರಿಸ್ತನು ಹೇಳಿದರು (ಲೂಕ 10:30-35).
ಒಬ್ಬಾನೊಬ್ಬ ಮನುಷ್ಯನು ಯೆರೂಸಲೇವಿುನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು. ಆಗ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ವಾರೆಯಾಗಿ ಹೋದನು.
ಅದೇ ರೀತಿಯಲ್ಲಿ ಒಬ್ಬ ಲೇವಿಯನೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು ವಾರೆಯಾಗಿ ಹೋದನು. ಆದರೆ ಒಬ್ಬ ಸಮಾರ್ಯದವನು ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದು ಅವನನ್ನು ಕಂಡು ಕನಿಕರಿಸಿ ಅವನ ಹತ್ತಿರಕ್ಕೆ ಹೋಗಿ ತನ್ನ ಸ್ವಂತ ವಾಹನದ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರಕೊಂಡು ಹೋಗಿ ಅವನನ್ನು ಆರೈಕೆಮಾಡಿದನು ಮತ್ತು ತನ್ನಲ್ಲಿದ್ದ ಹಣವನ್ನೂ ಸಹ ಖರ್ಚು ಮಾಡಿದನು. ಇವರಲ್ಲಿ ಈ ಬಹಿಷ್ಕೃತ ಸಮಾರ್ಯದವನೇ ಆ ಕಾಲದಲ್ಲಿ ಅವರಿಗಿಂತ ಶ್ರೇಷ್ಠನೆಂದು ಯೇಸು ಹೇಳುವುದನ್ನು ನಾವು ನೋಡುತ್ತೇವೆ. ಸತ್ಯವೇದವು ಅವನನ್ನು ಒಳ್ಳೆಯ ಸಮಾರ್ಯನೆಂದು ಕರೆಯುತ್ತಿದೆ.
ಇಂದು ನಮ್ಮ ಸಮಾಜದಲ್ಲೂ ಇಂತಹ ದೃಶ್ಯಗಳನ್ನು ಕಂಡರೆ ಪಕ್ಕಕ್ಕೆ ಸರಿಯುವ ಯಾಜಕರು, ಲೇವಿಯರಿದ್ದಾರೆ. ಮುರಳಿಯಂತೆ ಯಾರಾದರೂ ಸಹಾಯ ಮಾಡಲು ಮುಂದೆ ಬಂದರೂ ಅವರನ್ನೂ ತಡೆಯುವ ದುಸ್ಥಿತಿ ನಮ್ಮ ಸಮಾಜದಲ್ಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕ್ರಿಸ್ತನ ಪ್ರೀತಿಯನ್ನು ಪ್ರತಿಬಿಂಬಿಸಬೇಕಾದ ಕ್ರೈಸ್ತರೇ, ನಮಗೇಕೆ ಎಂದು ದೂರ ಸರಿಯುತ್ತಿರುವುದೇ ದುರಂತ! ಏನೆಂದು ಹೇಳೋದು! ನಾವು ಮಾಡಬಹುದಾದ ಉಪಕಾರವನ್ನು ಇತರರಿಗೆ ಮಾಡದಿರುವುದು ಪಾಪ ಎಂದು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತಿದೆ. ನಮ್ಮ ಸ್ವಾರ್ಥದ ಆಲೋಚನೆಗಳಿಂದಾಗಿ ಒಂದು ಜೀವ ಕಳೆದು ಹೋದರೆ ಅದಕ್ಕೆ ನಾವೇ ಹೊಣೆ. ಆದ್ದರಿಂದ ಈ ರೀತಿಯ ಸಾಮಾಜಿಕ ಪರಿಸ್ಥಿತಿಯನ್ನು ಬದಲಾಯಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸೋಣ. ಬದಲಾವಣೆಯನ್ನು ನಮ್ಮಿಂದಲೇ ಆರಂಭಿಸೋಣ.
- Mrs. ಸ್ಟೆಫಿ ರಾಕ್ಸನ್
ಪ್ರಾರ್ಥನಾ ಅಂಶ:
"ಕಣ್ಮಣಿಯೇ ಕೇಳ್" ಎಂದು ಯೌವನಸ್ಥ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕವಾಗಿ ಹೊರಬಿಡುತ್ತಿರುವ ಪತ್ರಿಕೆಯ ಮೂಲಕ ಯೌವನಸ್ಥ ಹೆಣ್ಣು ಮಕ್ಕಳು ತಮ್ಮ ಯೌವನವನ್ನು ಕಾಪಾಡಿಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482