By Village Missionary Movement
Wednesday, 24-Aug-2022ಧೈನಂದಿನ ಧ್ಯಾನ(Kannada) – 24.08.2022
ಭಿಕ್ಷುಕರು
"ಆದರೆ ನಿಮಗೆ ಇರುವವುಗಳಲ್ಲಿ ನೀವು ದಾನಾಕೊಡಿರಿ;..." - ಲೂಕ 11:41
ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ 45 ವರ್ಷದ ಬುದ್ಧಿಮಾಂದ್ಯ ಭಿಕ್ಷುಕ ಹೀಚ್ಚಾ ಬಸ್ಯಾ. ಈತ ಆ ಪ್ರಾಂತ್ಯದಲ್ಲಿ ಪ್ರಸಿದ್ಧ ಭಿಕ್ಷುಕ. ಇವರಿಗೆ ಯಾರಾದರೂ ಭಿಕ್ಷೆ ಕೊಟ್ಟರೆ ಅವರಿಂದ ಒಂದು ರೂಪಾಯಿ ಮಾತ್ರ ತೆಗೆದುಕೊಳ್ಳುತ್ತಾರೆ. ಉಳಿದ ಹಣವನ್ನು ಅವರಿಗೆ ಹಿಂತಿರುಗಿಸಿ ಕೊಟ್ಟು ಬಿಡುತ್ತಾರಂತೆ. ಬಲವಂತವಾಗಿ ಹೆಚ್ಚು ಹಣ ನೀಡಿದರೂ, ಅವರು ನಿರಾಕರಿಸುತ್ತಾರೆ. ಜನರು ಹಣ ಕೊಟ್ಟಾಗಲೆಲ್ಲ ನಗುನಗುತ್ತಾ ಅವರನ್ನು ಆಶೀರ್ವದಿಸುತ್ತಾರೆ. ಅವರು ಯಾರಿಗೂ ತೊಂದರೆ ಕೊಡುವುದಿಲ್ಲವಂತೆ. ಅವರು ಕೆಲ ತಿಂಗಳ ಹಿಂದೆ ಬಸ್ ಡಿಕ್ಕಿ ಹೊಡೆದು ಮೃತಪಟ್ಟರು. ಈ ಭಾಗದ ವಿವಿಧ ಸಂಘ-ಸಂಸ್ಥೆಗಳು, ಅಂಗಡಿಗಳವರು ಅನೇಕ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ಹಣ ಸಂಗ್ರಹಿಸಿ ಶವ ಸಂಸ್ಕಾರವನ್ನು ಆಯೋಜಿಸಿದ್ದರು. ಬಸ್ಯಾ ಅವರ ಶವಯಾತ್ರೆಯಲ್ಲಿ ಸುಮಾರು 4000 ಮಂದಿ ಪಾಲ್ಗೊಂಡಿದ್ದರು ಇದು ಆಶ್ಚರ್ಯವನ್ನುಂಟು ಮಾಡಿತು. ಅಷ್ಟೇ ಅಲ್ಲದೆ ಒಬ್ಬ ಭಿಕ್ಷೆ ಬೇಡುತ್ತಿದ್ದ ಬುದ್ಧಿಮಾಂದ್ಯ ಭಿಕ್ಷುಕನಿಗೆ ಸ್ಥಳೀಯ ಜನರು ತೋರಿದ ಕಾಳಜಿ ಅಚ್ಚರಿ ಮೂಡಿಸಿದೆ. ಸತ್ಯವೇದದಲ್ಲಿ, ಕರ್ತನಾದ ಯೇಸುವಿನ ಕಾಲದಲ್ಲಿ ವಾಸಿಸುತ್ತಿದ್ದ ಒಬ್ಬ ಕುರುಡನು ಹೆದ್ದಾರಿಯ ಬದಿಯಲ್ಲಿ ಕೂತುಕೊಂಡು ಭಿಕ್ಷೆಬೇಡುತ್ತಿದ್ದನು, (ಮಾರ್ಕ 10:46) ಅವನು ಕರ್ತನಾದ ಯೇಸು ಆ ಮಾರ್ಗವಾಗಿ ಬರುತ್ತಿರುವುದನ್ನು ಕೇಳಿ "ಯೇಸುವೇ, ದಾವೀದನಕುಮಾರನೇ, ನನ್ನನ್ನು ಕರುಣಿಸು" ಎಂದು ಕೂಗಲು ಪ್ರಾರಂಭಿಸಿದನು. ಅವನನ್ನು ಸುಮ್ಮನಿರುವಂತೆ ಅನೇಕರು ಅವನಿಗೆ ಖಂಡಿತವಾಗಿ ಹೇಳಿದರು. ಆದರೆ ಅವನು ಇನ್ನೂ ಹೆಚ್ಚಾಗಿ "ದಾವೀದನಕುಮಾರನೇ, ನನ್ನನ್ನು ಕರುಣಿಸು" ಎಂದು ಕೂಗಿದನು. ಕರ್ತನಾದ ಯೇಸು ಅವನನ್ನು ಭಿಕ್ಷುಕ ಎಂದು ತಳ್ಳಿಹಾಕಲಿಲ್ಲ ಅಥವಾ ನಿರ್ಲಕ್ಷಿಸಲಿಲ್ಲ. ಬದಲಾಗಿ, ಅವರು ಕಾಳಜಿಯಿಂದ ಅವನನ್ನು ವಿಚಾರಿಸಿದರು ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ ಎಂದು ಕೇಳಲು ಆ ಕುರುಡನು ಆತನಿಗೆ "ಕರ್ತನೇ, ನಾನು ನನ್ನ ದೃಷ್ಟಿಯನ್ನು ಹೊಂದುವಂತೆ ಮಾಡಬೇಕು" ಎಂದು ಹೇಳಿದ ಕೂಡಲೇ ಅವನು ದೃಷ್ಟಿ ಹೊಂದುವಂತೆ ಮಾಡುತ್ತಾರೆ. ಇದೇ ಕರ್ತನಾದ ಯೇಸುಕ್ರಿಸ್ತನ ಪ್ರೀತಿ.
ಇದನ್ನು ಓದುತ್ತಿರುವ ಪ್ರಿಯರೇ! ಭಿಕ್ಷುಕರನ್ನು ಕಡಿಮೆ ಅಂದಾಜು ಮಾಡಬೇಡಿ. ಅದೇ ಸಮಯದಲ್ಲಿ, ಭಿಕ್ಷುಕರನ್ನು ಕಾಯುವಂತೆ ಮಾಡಬೇಡಿ. “ಎಲ್ಲವೂ ಕಳೆದುಕೊಂಡ ಸ್ಥಿತಿಯಲ್ಲಿ ಒಬ್ಬ ಕೈ ಚಾಚುತ್ತಾನೆ, ಒಬ್ಬ ಎಲ್ಲಾ ಇದ್ದರೂ ಕೈ ಚಾಚಿ ಕೊಡಲು ನಿರಾಕರಿಸುತ್ತಾನೆ" ಇದರಲ್ಲಿ ಭಿಕ್ಷುಕ ಯಾರು? ಸ್ವಲ್ಪ ಯೋಚಿಸೋಣ.
ಅನೇಕ ಸಮಯಗಳಲ್ಲಿ ನಾವು ಅವರನ್ನು ನೋಡಿದಾಗ ವ್ಯಕ್ತಪಡಿಸುವ ಕೋಪದ ಮಾತುಗಳು ಸಮಾಜ, ಪೋಷಕರು ಮತ್ತು ಕುಟುಂಬ ಅವರ ಮೇಲೆ ಉಂಟುಮಾಡಿದ ನೋವನ್ನು ಇನ್ನೂ ಹೆಚ್ಚಿಸುತ್ತದೆ. ಅದು ಕರ್ತನಾದ ಯೇಸುವಿನ ಬೋಧನೆ. ಅವರು ಅಂತಹ ಬಹಿಷ್ಕೃತರನ್ನೇ ಹುಡುಕಿಕೊಂಡು ಹೋಗಿ ಸೇವೆ ಮಾಡಿದರು. ನಾವು ಸಹ ಅದನ್ನೇ ಅನುಸರಿಸಬೇಕೆಂದು ಅವರು ಬಯಸುತ್ತಿದ್ದಾರೆ. ಈ ರೀತಿಯ ಜನರೊಂದಿಗೆ ನಾವು ಎಷ್ಟು ಬಾರಿ ಚಿಂತನಶೀಲ ಸಂಭಾಷಣೆ ನಡೆಸಿದ್ದೇವೆ? ಯೋಚಿಸೋಣ. ನಮಗೆ ಸಾಧ್ಯವಾಗದಿದ್ದರೂ, ಕೆಲವು ಪ್ರೀತಿಯ ಮಾತುಗಳು ಅವರ ಗಾಯಗೊಂಡ ಹೃದಯಗಳಿಗೆ ಔಷಧವಾಗಿ ಮಾರ್ಪಡುತ್ತದೆ. ನಮ್ಮ ಹುಟ್ಟುಹಬ್ಬ ಮತ್ತು ಮದುವೆಯ ದಿನ ಇಂಥಾ ವಿಶೇಷ ದಿನಗಳಲ್ಲಿ ವ್ಯರ್ಥವಾಗಿ ಖರ್ಚು ಮಾಡುವ ಹಣವನ್ನು ನಾವು ಇವರಿಗೆ ಸಹಾಯ ಮಾಡಬಹುದು. ಇದೇ ಕರ್ತನು ಎದುರುನೋಡುವ ಪ್ರೀತಿ.
- Mrs. ಶಕ್ತಿ ಶಂಕರರಾಜ್
ಪ್ರಾರ್ಥನಾ ಅಂಶ:
"ಕತ್ತೆಗಳ ಕೈಪಿಡಿ" ಎಂದು ಸೇವಕರಿಗಾಗಿ ಪ್ರತ್ಯೇಕವಾಗಿ ಹೊರಬಿಡುವ ಪತ್ರಿಕೆಯ ಮೂಲಕ ಅಂತ್ಯಕಾಲದ ಸೇವಕರು ಉಜ್ಜೀವನ ಹೊಂದುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482