Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.08.2022
Share:

By Village Missionary Movement

Tuesday, 23-Aug-2022

ಧೈನಂದಿನ ಧ್ಯಾನ(Kannada) – 23.08.2022

 

ನೀನು ಕೆಲಸ ಮಾಡದಿದ್ದರೆ…

 

"ತರುವಾಯ ಸುಮಾರು ಹನ್ನೊಂದ ನೆಯ ತಾಸಿನಲ್ಲಿ ಅವನು ಹೊರಗೆಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವದನ್ನು ಕಂಡು ಅವರಿಗೆ--ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವದೇಕೆ ಎಂದು ಕೇಳಿದನು" - ಮತ್ತಾಯ 20:6

 

ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿ, ಕಡಿಮೆ ಕೌಶಲ್ಯ ಬೇಕಾದ 15 ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಅರ್ಜಿ ಸಲ್ಲಿಸಿರುವ ಯುವಕರು ಸಂಖ್ಯೆ 10,000. ಇವರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿರುವ ಜಿತೇಂದ್ರ ಮೆಳಾರ್ಯ ಅವರೂ ಒಬ್ಬರು. ಹೆಚ್ಚಿನ ಅರ್ಜಿದಾರರು ಉನ್ನತ ಶಿಕ್ಷಣ ಪಡೆದವರು, ಸ್ನಾತಕೋತ್ತರ ಪದವೀಧರರು, ಎಂಜಿನಿಯರ್‌ಗಳು, ಎಂಬಿಎ ಪದವೀಧರರು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು. ಆ ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹಾಜರಾಗಿದ್ದ ಜಿತೇಂದ್ರ ಮೆಳಾರ್ಯ ಅವರು ಒಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಇಷ್ಟು ಓದಿದ್ದರೂ ಕೆಲವೊಮ್ಮೆ ಪರೀಕ್ಷೆಗೆ ಪುಸ್ತಕಗಳನ್ನು ಖರೀದಿಸಲು ನನ್ನ ಬಳಿ ಹಣವಿಲ್ಲ. ಹಾಗಾಗಿ ಇಲ್ಲಿ ಏನಾದರೂ ಕೆಲಸ ಸಿಗುತ್ತದೆ ಎಂದು ಬಂದಿದ್ದೇನೆ" ಎಂದರು.

 

ಜಿತೇಂದ್ರ ಅವರ ಮಾತುಗಳು ಭಾರತದ ಅತ್ಯಂತ ಕೆಟ್ಟ ನಿರುದ್ಯೋಗವನ್ನು ಬಹಿರಂಗಪಡಿಸುತ್ತಿದೆ. ಈಗಾಗಲೇ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಭಾರತದ ಆರ್ಥಿಕತೆಯು ಕರೋನಾ ಸಾಂಕ್ರಾಮಿಕ ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಂತಹ ಅನೇಕ ಸಮಸ್ಯೆಗಳು ಆರ್ಥಿಕ ಬಿಕ್ಕಟ್ಟು ಮತ್ತು ನಿರುದ್ಯೋಗವನ್ನು ಹೆಚ್ಚಿಸಿದೆ. ಇದನ್ನೆಲ್ಲ ಗಮನಿಸಿದಾಗ ಪ್ರತಿಯೊಬ್ಬರ ಸುಪ್ತಪ್ರಜ್ಞೆಯಲ್ಲೂ ಭವಿಷ್ಯದ ಬಗ್ಗೆ ಭಯದ ಭಾವ ಕಾಣುತ್ತಿದೆ.

 

ಪ್ರಿಯರೇ! ಈ ವಿಷಯಗಳಿಗೆ ನಾವು ಭಯಪಡುವ ಅಗತ್ಯವಿಲ್ಲ. ನಿನ್ನ ಮಾರ್ಗವನ್ನು ಕರ್ತನಿಗೆ ಒಪ್ಪಿಸು; ಆತನಲ್ಲಿ ಭರವಸ ವಿಡು; ಆತನು ಅದನ್ನು ನೆರವೇರಿಸುವನು ಎಂದು ನಾವು ಸತ್ಯವೇದದಲ್ಲಿ ಓದುತ್ತೇವೆ. ನಮ್ಮ ವಿದ್ಯಾಭ್ಯಾಸ, ಉದ್ಯೋಗಾವಕಾಶಗಳು ಮತ್ತು ಭವಿಷ್ಯದ ಬಗ್ಗೆ ಆಲೋಚನೆಯೂ ಬೇಡ ಚಿಂತೆಯೂ ಬೇಡ. ನಮ್ಮ ಕರ್ತನು ನಮ್ಮನ್ನು ವಿಚಾರಿಸುವವರು ನಮಗೆ ಸಹಾಯ ಮಾಡುವವರಾಗಿದ್ದಾರೆ.

 

ಕರ್ತನಾದ ಯೇಸು "ಸುಗ್ಗಿಯು ಸಮೃದ್ಧವಾಗಿದೆ, ಕೆಲಸಗಾರರು ಕಡಿಮೆ" ಎಂದು ತಮ್ಮ ಸೇವಾಕ್ಷೇತ್ರಕ್ಕೆ ಒಂದು ಕರೆಯುವಿಕೆಯನ್ನು ಕೊಟ್ಟರು. ಅಷ್ಟೇ ಅಲ್ಲದೆ ದ್ರಾಕ್ಷಿತೋಟದಲ್ಲಿ ಕೆಲಸ ಮಾಡಲು ಬರುವಂತೆ ಸುಮ್ಮನೆ ನಿಂತಿರುವವರನ್ನು ಬಲವಂತವಾಗಿ ಕರೆಯುವುದನ್ನೂ ನಾವು ಓದುತ್ತೇವೆ. ಈ ಸಂದೇಶವನ್ನು ಓದುತ್ತಿರುವ ನೀವು ದೇವರ ಸೇವೆಯನ್ನು ಮಾಡುವಂತೆ ಅವರು ಆಹ್ವಾನಿಸುತ್ತಿದ್ದಾರೆ. ದೇವರ ಕ್ಷೇತ್ರದಲ್ಲಿ ಕೆಲಸಗಾರರು (ಸೇವಕರು) ಬಹಳವಾಗಿ ಬೇಕಾಗಿದ್ದಾರೆ. ಯೇಸುವನ್ನು ತಿಳಿಯದೆ ನರಕಕ್ಕೆ ಹೋಗುತ್ತಿರುವ ಜನರನ್ನು ಭೇಟಿಯಾಗಲು ನೀವು ಬರುತ್ತೀರಾ?

- P. ಜೇಕಬ್ ಶಂಕರ್.

 

ಪ್ರಾರ್ಥನಾ ಅಂಶ:

ದೇವರು ನಮಗೆ ಕೊಟ್ಟಿರುವ ದರ್ಶನಗಳನ್ನು ನೆರವೇರಿಸಲು ಪ್ರತಿ ರಾಜ್ಯದಿಂದ 12 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al