By Village Missionary Movement
Monday, 15-Aug-2022ಧೈನಂದಿನ ಧ್ಯಾನ(Kannada) – 15.08.2022 (Youth Special)
ಸುರಕ್ಷಿತವಾದ ಬಿಡುಗಡೆ
"...ನಿನ್ನ ಸ್ನೇಹಿತನ ಕೈಗೆ ಸಿಕ್ಕಿದಾಗ ತಪ್ಪಿಸಿಕೊಳ್ಳಲು ಇದನ್ನು ಮಾಡು" - ಜ್ಞಾನೋಕ್ತಿ 6:3
ವೇಣಿಯ ತಂದೆ ಒಂದು ಹೊಸ ಮನೆಯನ್ನು ಕಟ್ಟಿದರು. 11ನೇ ತರಗತಿ ಓದುತ್ತಿರುವ ವೇಣಿ ಕೂಡ ಆಗಾಗ ತಂದೆಯೊಂದಿಗೆ ಮನೆ ಕಟ್ಟುವುದನ್ನು ನೋಡಲು ಹೋಗುತ್ತಿದ್ದಳು. ಆ ಸಮಯದಲ್ಲಿ, ಅವಳು ತುಂಬಾ ಸಾಮಾಜಿಕವಾಗಿ ಬೆರೆಯುವ ಎದುರು ಮನೆಯ ರಾಣಿಯನ್ನು ಆಶ್ಚರ್ಯವಾಗಿ ನೋಡುತ್ತಲೇ ಇದ್ದಳು. ಹೊಸ ಮನೆಗೆ ಹೋದ ಕೂಡಲೇ ಇಬ್ಬರೂ ಸ್ನೇಹಿತರಾಗಿಬಿಟ್ಟರು. ವೇಣಿಯ ಅಭ್ಯಾಸ ಬದಲಾಯಿತು. ಅವಳು ಯಾವಾಗಲೂ ರಾಣಿಯನ್ನು ಹುಡುಕುತ್ತಾ ಹೋಗೋದು, ರಾಣಿಯೊಂದಿಗೆ ಅಂಗಡಿಗೆ ಹೋಗಿ ಐಸ್ ಕ್ರೀಮ್ ತಿನ್ನೋದು ಈ ರೀತಿ ಇದ್ದಳು. ಒಂದು ದಿನ ವೇಣಿ ಶಾಲೆಯಲ್ಲಿ ಸ್ಪರ್ಧೆಗೆ ಆಯ್ಕೆಯಾಗಿ, ಹತ್ತಿರದ ಇನ್ನೊಂದು ಶಾಲೆಗೆ ಹೋಗಬೇಕಾಯಿತು. ವೇಣಿಯ ತಂದೆ ಆ ಶಾಲೆಗೆ ಕರೆದುಕೊಂಡು ಹೋಗಿ ಬಿಡುತ್ತೇನೆ ಎಂದು ಹೇಳಿದರು. ಆದರೆ ವೇಣಿ ಅಳುತ್ತಾ ಹಠಮಾಡಿ ರಾಣಿಯ ಜೊತೆ ಹೋದಳು. ಹೋಗುವಾಗ ದಾರಿ ಮಧ್ಯೆ ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದರು.
ಸತ್ಯವೇದದಲ್ಲಿಯೂ ಸಹ ದೀನಳು ದೇಶದ ಹುಡುಗಿಯರನ್ನು ನೋಡಲು ಹೊರಟಳು. ಆಗ ಶೆಕೆಮ್ ಎಂಬ ಯುವಕನು ಅವಳನ್ನು ಅಪವಿತ್ರಗೊಳಿಸಿದನು. ಅದರ ನಿಮಿತ್ತ ನಡೆದದ್ದೇನು? ಅವಳ ಸಹೋದರರು ಶೆಕೆಮ್ ಮತ್ತು ಅವನ ಕುಟುಂಬವನ್ನು ಮಾತ್ರವಲ್ಲದೆ ಇಡೀ ಗ್ರಾಮವನ್ನೇ ನಾಶಪಡಿಸಿದರು. ಒಂದು ಹೆಣ್ಣುಮಗಳ ಸಣ್ಣ ತಪ್ಪಿನಿಂದ ಇಡೀ ಗ್ರಾಮವೇ ನಾಶವಾಯಿತು. ಇಂದಿಗೂ ಇಂತಹ ಘಟನೆಗಳು ನಡೆಯುವುದನ್ನು ನೋಡಬಹುದು. ಒಂಟಿಯಾಗಿ ಅಥವಾ ಸ್ನೇಹಿತರೊಂದಿಗೆ ಹೋಗುವ ಯೌವನಸ್ಥ ಹೆಣ್ಣು ಮಕ್ಕಳು ತಪ್ಪು ಕೆಲಸಗಳಲ್ಲಿ ಸಿಲುಕುವುದನ್ನು ನಾವು ನೋಡುತ್ತೇವೆ. ಎಷ್ಟೋ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಪೋಷಕರ ಸಲಹೆಯನ್ನು ನಿರ್ಲಕ್ಷಿಸಿ, ಅವರ ರಕ್ಷಣೆಯನ್ನು ನಿರಾಕರಿಸುವ ಮಕ್ಕಳೇ ಇದರಲ್ಲಿ ಹೆಚ್ಚಾಗಿ ಬಾಧಿಸಲ್ಪಡುತ್ತಿದ್ದಾರೆ. ಇದು ಕೇವಲ ಹೆಣ್ಣು ಮಕ್ಕಳ ತಪ್ಪು ಮಾತ್ರವಲ್ಲ; ಜೊತೆ ಸ್ನೇಹಿತೆಯರನ್ನು ಹೇಗೆ ನಡೆಸಿಕೊಳ್ಳಬೇಕೆಂದು ನಾವು ಗಂಡು ಮಕ್ಕಳಿಗೂ ಬೋಧಿಸಬೇಕು. ಅವರ ಪೋಷಕರು ಶೆಕೆಮ್‌ಗೆ ಹಾಗೆ ಕಲಿಸಿದ್ದರೆ ಹೀಗೆ ಸಂಭವಿಸುತ್ತಿರಲಿಲ್ಲವೋ ಏನೋ? ಬದಲಾಗಿ ಅವನ ತಂದೆಯೂ ಅವನ ಮಾತನ್ನು ಒಪ್ಪಿದ್ದು ವಿನಾಶಕ್ಕೆ ಮುಖ್ಯ ಕಾರಣವಾಯಿತು.
ನನ್ನ ಪ್ರೀತಿಯ ಸಹೋದರಿಯರೇ, ನಾವು ಏನು ಹೇಳಿದರೂ, ನಮ್ಮ ಸಮಾಜವು ಅಂತಹ ದೊಡ್ಡ ಬದಲಾವಣೆಗೆ ಇನ್ನೂ ಸಿದ್ಧವಾಗಿಲ್ಲ. ಆದ್ದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಜಾಣತನ. ನಾವು ಪೋಷಕರ ರಕ್ಷಣೆಯನ್ನು ನಿರಾಕರಿಸುವಾಗ ನಮ್ಮನ್ನು ನಾವೇ ಅಪಾಯಕ್ಕೆ ಗುರಿಮಾಡಿಕೊಳ್ಳುತ್ತೇವೆ. ನಮ್ಮ ಇಷ್ಟದಂತೆ ಬದುಕುವುದೇ ಸ್ವಾತಂತ್ರ್ಯ ಎಂದು ಭಾವಿಸುತ್ತೇವೆ. ಹಾಗಲ್ಲ ನಿರ್ಬಂಧಗಳಿರುವ ಸ್ವಾತಂತ್ರ್ಯವೇ ನಿಜವಾದ ಸುರಕ್ಷಿತವಾದ ಸ್ವಾತಂತ್ರ್ಯ. ಆದ್ದರಿಂದ ನಾವು ನಮ್ಮ ಹೆತ್ತವರಿಗೆ ವಿಧೇಯರಾಗಿ, ಈ ಕಪಟ ಮತ್ತು ಭ್ರಷ್ಟ ಪ್ರಪಂಚದ ಬಲೆಯಿಂದ ನಮ್ಮನ್ನು ಕಾಪಾಡಿಕೊಳ್ಳಲು ಅವರ ರಕ್ಷಣೆಯನ್ನು, ಸಲಹೆಯನ್ನು ಕೋರಿದಾಗ ನಾವು ಖಂಡಿತವಾಗಿಯೂ ಪರಲೋಕ ದೇವದೂತರ ರಕ್ಷಣೆಯನ್ನೂ ಪಡೆದು ಪರಿಶುದ್ದಜೀವನವನ್ನು ನಡೆಸಬಹುದು ಹಲ್ಲೇಲೂಯಾ!
HAPPY INDEPENDENCE DAY
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ನಂಬಿಕೈ ಟಿವಿ, ಸತ್ಯಂ ಟಿವಿ ಮತ್ತು ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾಗುವ “ಗ್ರಾಮೀಣ ಸಮಯ” ಕಾರ್ಯಕ್ರಮದ ಮೂಲಕ ಅನೇಕರು ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482