Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.08.2022
Share:

By Village Missionary Movement

Friday, 12-Aug-2022

ಧೈನಂದಿನ ಧ್ಯಾನ(Kannada) – 13.08.2022

 

ಬಾಲ ಕಾರ್ಮಿಕರು

 

 "...ಅಳುವವರ ಸಂಗಡ ಅಳಿರಿ." - ರೋಮಾ 12:15

 

ನಮ್ಮ ದೇಶದಲ್ಲಿರುವ ಬಡತನದ ಕಾರಣದಿಂದಾಗಿ ಉದ್ಭವಿಸಿರುವ ಸಾಮಾಜಿಕ ದುಷ್ಕಾರ್ಯಗಳಲ್ಲಿ ಬಾಲಕಾರ್ಮಿಕವೂ ಒಂದು. ಒಂದು ನಿರ್ದಿಷ್ಟ ವಯಸ್ಸು ದಾಟಿದ ನಂತರ, ಪೋಷಕರು ತಮ್ಮ ಮಕ್ಕಳನ್ನು ಪೋಷಿಸಲು ಸಾಧ್ಯವಾಗದೇ, ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗುವುದರಿಂದಲೂ ಮಕ್ಕಳು ಚಿಕ್ಕಂದಿನಲ್ಲೇ ದುಡಿಯುವ ಅನಿವಾರ್ಯತೆಗೆ ಸಿಲುಕುತ್ತಿದ್ದಾರೆ.

 

ಮನೆಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದೆ. ಪಟಾಕಿ ಮತ್ತು ಬೆಂಕಿಕಡ್ಡಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಕ್ಕಳು ಉಸಿರಾಟದ ತೊಂದರೆ ಮತ್ತು ಚರ್ಮ ರೋಗಗಳು ಮತ್ತು ಕ್ಯಾನ್ಸರ್ ರೋಗಗಳಿಗೆ ಗುರಿಯಾಗುತ್ತಿದ್ದಾರೆ. ಕಾರ್ಖಾನೆಗಳಲ್ಲಿನ ಅಪಘಾತಗಳಲ್ಲಿ ಅವರು ಸಾಯುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡಲು ಆಗದಿದ್ದರೆ ಹಿಂಸೆಗೊಳಗಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳ ಸೂಕ್ಷ್ಮ ಬೆರಳುಗಳು ಲೇಸ್ (Lace) ಕೆಲಸಕ್ಕೆ ಸೂಕ್ತವಾಗಿರುವುದರಿಂದ 4 ವರ್ಷ ವಯಸ್ಸಿನ ಮಕ್ಕಳನ್ನು ತೊಡಗಿಸಿಕೊಂಡಿದ್ದಾರೆ. ಅಂತಿಮವಾಗಿ ಅವರ ದೃಷ್ಟಿ ಕ್ಷೀಣಿಸುತ್ತದೆ. ಬೆನ್ನು ಬಾಗುತ್ತದೆ. ಮಕ್ಕಳು ಬಾಲ್ಯದ ಎಲ್ಲಾ ಸಂತೋಷ ಮತ್ತು ಆಟಗಳನ್ನು ಮರೆತುಬಿಡುತ್ತಾರೆ. ಅವರ ಮನಸ್ಸು ಕಠಿಣವಾಗಿ ಮಾರ್ಪಡುವುದರಿಂದ, ಅವರು ಬೆಳೆಯುತ್ತಾ ಬೆಳೆಯುತ್ತಾ ಅಪರಾಧಿಗಳಾಗುತ್ತಿದ್ದಾರೆ.

 

ದೇವರ ಹೃದಯವನ್ನು ಒಡೆಯುತ್ತಿರುವ ಈ ವಿಷಯವು ನಮ್ಮ ಹೃದಯವನ್ನೂ ಒಡೆಯಬೇಕು. ನಾವು ಈ ಕೆಳಗಿನ ಅಂಶಗಳಿಗೆ ಮುರಿದ ಹೃದಯದಿಂದ ಪ್ರಾರ್ಥಿಸಿದರೆ ಸರ್ವಶಕ್ತನಾದ ದೇವರು ಪರಿಸ್ಥಿತಿಗಳನ್ನು ಬದಲಾಯಿಸುತ್ತಾರೆ.

 

1) ಬಡತನ ರೇಖೆಗಿಂತ ಕೆಳಗಿರುವ ಜನರ ಜೀವನೋಪಾಯವನ್ನು ಹೆಚ್ಚಿಸಲು ಸರ್ಕಾರ ಕ್ರಮಕೈಗೊಳ್ಳಬೇಕು.

 

2) ಬಡವರಿಗೆ ಸಬ್ಸಿಡಿ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಬೇಕು.

 

3) ಬಡವರಿಗೆ ಉಚಿತ ಸರಕುಗಳು ತಡೆಯಿಲ್ಲದೆ ಸಿಗಬೇಕು.

 

4) ಬಡ ಪೋಷಕರಿಗೆ ಯೋಗ್ಯ ಉದ್ಯೋಗ ಕಲ್ಪಿಸಲು, ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸಲು, ಓದು ಬಿಟ್ಟ ಮಕ್ಕಳನ್ನು ಮತ್ತೆ ಓದಲು ಅನುಕೂಲ ಮಾಡಿಕೊಡಲು ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

 

5) ಅನಾಥ ಮಕ್ಕಳಿಗೆ ಇರಲು ಆಶ್ರಮಗಳು ಸಿಗಬೇಕು.

 

ನಾವು ಪ್ರಾರ್ಥನೆ ಮಾಡುವುದಷ್ಟೇ ಅಲ್ಲ, ಬಾಲಕಾರ್ಮಿಕರ ಸಮಸ್ಯೆಗಳನ್ನು ತಡೆಯಲು ನಮ್ಮಿಂದಾಗುವ ಕೆಲಸವನ್ನು ಮಾಡಬೇಕು. ಚಿಕ್ಕ ಮಕ್ಕಳನ್ನು ನಮ್ಮ ಮನೆಗಳಲ್ಲಿ ಕಡಿಮೆ ಕೂಲಿಗೆ ಕೆಲಸಕ್ಕೆ ನೇಮಿಸಿಕೊಳ್ಳಬಾರದು. ಸಾಧ್ಯವಾದರೆ ನಾವು ಅವರ ಶಿಕ್ಷಣಕ್ಕೆ ಸಹಾಯ ಮಾಡಬೇಕು. ವಿದ್ಯಾರ್ಥಿ ವೇತನ ನೀಡಬೇಕು.

ಪ್ರಿಯರೇ, ನಾವು ಇವುಗಳನ್ನು ಮಾಡಿದರೆ ಕರ್ತನು ನಮ್ಮ ವಿಷಯದಲ್ಲಿ ಸಂತೋಷಪಡುತ್ತಾರೆ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಸೀರ್ಕಾಲಿಯಲ್ಲಿ ನಡೆಯಲಿರುವ "ಉಜ್ಜೀವನವನ್ನು ಬಯಸುವವರ ಶಿಬಿರ" - ದಲ್ಲಿ ಉಜ್ಜೀವನವನ್ನು ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಜ್ಜೀವನ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet