Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.08.2022
Share:

By Village Missionary Movement

Thursday, 11-Aug-2022

ಧೈನಂದಿನ ಧ್ಯಾನ(Kannada) – 11.08.2022

 

ಲೆಕ್ಕವಿಲ್ಲದಷ್ಟು ತಪ್ಪುಗಳು

 

“ನನ್ನ ಮಗನೇ, ನಿನ್ನ ಹೃದಯ ವನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ನಿನ್ನ ಕಣ್ಣುಗಳು ದೃಷ್ಟಿಯಿಟ್ಟು ನೋಡಲಿ" - ಜ್ಞಾನೋಕ್ತಿ. 23:26

 

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಕೆಲವು ವಾರಗಳ ಹಿಂದೆ ಸಾವನ್ನಪ್ಪಿದ್ದಾನೆ ಎಂದು ಮರಣ ಪ್ರಮಾಣಪತ್ರ ಪಡೆದಿದೆ ಎಂಬ ಒಂದು ಮೋಸದ ಪ್ರಕರಣ ಪೊಲೀಸ್ ಠಾಣೆಗೆ ಬಂತು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನ ಪತ್ನಿ ಈ ನಡುವೆ ತನ್ನೊಂದಿಗೆ ಫೋನ್ ನಲ್ಲಿ ಸರಿಯಾಗಿ ಮಾತನಾಡುತ್ತಿಲ್ಲ ಎಂಬುದನ್ನು ತಿಳಿದು ಭಾರತಕ್ಕೆ ಮರಳಿದ್ದಾರೆ. ಆಗ ಆತನಿಗೆ ಪತ್ನಿ ಮನೆಯಲ್ಲಿ ಇಲ್ಲದಿರುವುದು ಹಾಗೂ ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಬಿಟ್ಟು ಹೋಗಿರುವುದು ಗೊತ್ತಾಯಿತು. ಅಷ್ಟು ಮಾತ್ರವಲ್ಲದೇ ಬದುಕಿರುವಾಗಲೇ ಪತಿ ಮೃತಪಟ್ಟಿರುವುದಾಗಿ ಮರಣ ಪ್ರಮಾಣ ಪತ್ರ ಪಡೆದು ವಿಮೆ ಹಣ ರೂ. 25 ಲಕ್ಷ ದುರುಪಯೋಗ ಆಗಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ವಿಚಿತ್ರ ಘಟನೆಗಳು ಎಲ್ಲೆಡೆ ನಡೆಯುತ್ತಲೇ ಇವೆ.

 

ಜ್ಞಾನೋಕ್ತಿಗಳ ಪುಸ್ತಕವು ಒಬ್ಬ ಮನುಷ್ಯನ ಕಣ್ಣುಗಳು ಮತ್ತು ಹೃದಯವನ್ನು ನಿಯಂತ್ರಿಸದಿದ್ದರೆ ಎಷ್ಟು ಕೆಟ್ಟದಾಗಿರುತ್ತದೆ ಎಂಬುದರ ಕುರಿತು ಅನೇಕ ಸ್ಥಳಗಳಲ್ಲಿ ನಮ್ಮನ್ನು ಎಚ್ಚರಿಸುತ್ತಿದೆ. ಇಂದು ನಾವು ಓದಿದಂತಹ ಸತ್ಯವೇದ ಭಾಗದಲ್ಲಿ, "ನನ್ನ ಮಗನೇ, ನಿನ್ನ ಹೃದಯ ವನ್ನು ನನಗೆ ಕೊಡು" ಎಂದು ದೇವರು ನಮ್ಮ ಬಳಿ ಹೇಳುತ್ತಿದ್ದಾರೆ. "ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ನೂತನ ಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು" ಎಂದು ಪೌಲನು ಕೊರಿಂಥದವರಿಗೆ ಬರೆಯುತ್ತಿದ್ದಾರೆ.

 

ಕ್ರಮವಾಗಿ ಪ್ರತ್ಯೇಕ ಪ್ರಾರ್ಥನೆ ಮಾಡಿ ಸತ್ಯವೇದವನ್ನು ಓದುವ ಅಭ್ಯಾಸವಿಲ್ಲದವರು ಜೀವನದಲ್ಲಿ ಅನೇಕ ವಿಷಯಗಳಲ್ಲಿ ದಾರಿ ತಪ್ಪುತ್ತಿದ್ದಾರೆ. ಒಬ್ಬ ವ್ಯಕ್ತಿಯ ಸುರಕ್ಷತೆ - ಮತ್ತು ಒಂದು ಕುಟುಂಬದ ಪೂರ್ಣ ಸುರಕ್ಷತೆ - ಅವರು ಕರ್ತನಾದ ಯೇಸು ಕ್ರಿಸ್ತನನ್ನು ಎಷ್ಟು ಮಟ್ಟಿಗೆ ಅವಲಂಬಿಸಿರುತ್ತಾರೋ ಅದರ ಮೇಲೆಯೇ ಆಧಾರಗೊಂಡಿರುತ್ತದೆ.

 

ಕರ್ತನಾದ ಯೇಸು ಕ್ರಿಸ್ತನಲ್ಲಿ ಪ್ರಿಯರೇ! ಹಿಂದೆಂದೂ ಕಾಣದ ರೀತಿಯಲ್ಲಿ ಪಾಪವು ಜನರ ಮಧ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಾ ನಿಯಂತ್ರಿಸಲಾಗದಷ್ಟು ಮಟ್ಟಿಗೆ ಇಂದು ಅನೇಕರು ಹದಗೆಟ್ಟಿದ್ದಾರೆ. ಅದಲ್ಲದೆ, ಲೈಂಗಿಕ ಬಯಕೆಗಳಿಂದ ತಪ್ಪಿಸಿಕೊಂಡು ಓಡು, ಪರಿಶುದ್ಧ ಹೃದಯದಿಂದ ದೇವರನ್ನು ಆರಾಧಿಸುವವರೊಂದಿಗೆ ನೀತಿಯನ್ನು, ನಂಬಿಕೆಯನ್ನು, ಪ್ರೀತಿಯನ್ನು ಶಾಂತಿಯನ್ನು ಹೊಂದುವಂತೆ ಮಾತನಾಡು ಎಂದು ಸತ್ಯವೇದವು ನಮಗೆ ಸಲಹೆ ನೀಡುತ್ತಿದೆ. ಕಣ್ಣು ಮತ್ತು ಹೃದಯವನ್ನು ಸರಿಯಾಗಿ ಇಟ್ಟುಕೊಳ್ಳಲು ತಿಳಿಯದವರು ಜೀವನದಲ್ಲಿ ದಾರಿ ತಪ್ಪುವುದು ಖಂಡಿತ. ದೇವರ ಸಹಾಯ ಪಡೆಯಿರಿ. ಜಾಗರೂಕರಾಗಿರಿ. ಜಯಶಾಲಿಗಳಾಗಿ ಜೀವಿಸಲು ದೇವರು ನಿಮಗೆ ಸಹಾಯ ಮಾಡುತ್ತಾರೆ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಆಸ್ಪತ್ರೆ ಸೇವೆಗಳ ಮೂಲಕ ಭೇಟಿಮಾಡುತ್ತಿರುವ ರೋಗಿಗಳು ಕರ್ತನಾದ ಯೇಸುಕ್ರಿಸ್ತನನ್ನು ಸ್ವೀಕರಿಸಲು ಮತ್ತು ಸ್ವಸ್ಥತೆ ಹೊಂದಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet