Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.08.2022
Share:

By Village Missionary Movement

Tuesday, 09-Aug-2022

ಧೈನಂದಿನ ಧ್ಯಾನ(Kannada) – 09.08.2022

 

ಸಮಯವನ್ನು ವ್ಯರ್ಥ ಮಾಡುವುದು

 

“ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ." - ಎಫೆಸದವರಿಗೆ 5:16

 

ಒಬ್ಬ ರಾಜನು ತನ್ನ ದೇಶದ ಬಡವನಿಗೆ ಅರಮನೆಯ ಖಜಾನೆಯ ಕೀಲಿಕೈಯನ್ನು ಕೊಟ್ಟು, "ಇಂದು ರಾತ್ರಿ ಪ್ರಾರಂಭವಾಗುವ ಮೊದಲು ನಿನಗೆ ಬೇಕಾದುದನ್ನು ತೆಗೆದುಕೋ" ಎಂದು ಹೇಳಿದರು. ಈ ವ್ಯಕ್ತಿಯು ಬಹಳ ಸಂತೋಷದಿಂದ ಅವನ ಮನೆಗೆ ಹೋಗಿ ತನ್ನ ಹೆಂಡತಿಯೊಂದಿಗೆ ವಿಷಯವನ್ನು ಹಂಚಿಕೊಂಡನು. ಹೆಂಡತಿ ಕೂಡ "ಬೇಗನೆ ಹೋಗಿ ತೆಗೆದುಕೊಂಡು ಬನ್ನಿ" ಎಂದಳು. ಆದರೆ ಆ ವ್ಯಕ್ತಿ, “ನನಗೆ ಸಂತೋಷವನ್ನು ಸಹಿಸಲಾಗುತ್ತಿಲ್ಲ. ನನಗೆ ವಿಧವಿಧವಾದ ರುಚಿಕರವಾದ ಆಹಾರ ಪದಾರ್ಥಗಳನ್ನು ಮಾಡಿಕೊಡು" ಎಂದು ಹೇಳಿದನು. ಊಟ ಮುಗಿಸಿ "ಸ್ವಲ್ಪ ಮಲಗಿ ಆಮೇಲೆ ಹೋಗುತ್ತೇನೆ" ಎಂದು ನಿದ್ದೆಗೆ ಜಾರಿದ. ಎಚ್ಚರವಾದಾಗ ಸಂಜೆಯಾಗಿತ್ತು. ವೇಗವಾಗಿ ಅರಮನೆಗೆ ಹೋಗುವಾಗ ಮಾರ್ಗದಲ್ಲಿ ಮಾವಿನ ಮರವನ್ನು ನೋಡಿದ ಕೂಡಲೇ ಆ ಮಾವಿನ ಮರದ ಬಳಿಗೆ ಹೋಗಿ ಮಾವಿನ ಹಣ್ಣುಗಳನ್ನು ಕೊಯ್ದು ತಿನ್ನಲು ಕುಳಿತನು. ಕೊನೆಗೆ ಅರಮನೆ ತಲುಪುವಷ್ಟರಲ್ಲಿ ಕತ್ತಲಾಗಿತ್ತು. ಆ ಮನುಷ್ಯನು ಆತುರಾತುರವಾಗಿ ಅರಮನೆಯನ್ನು ಪ್ರವೇಶಿಸುವುದನ್ನು ಕಂಡು ರಾಜನು, “ನಿನಗೆ ಕೊಟ್ಟ ಒಳ್ಳೆಯ ಅವಕಾಶವನ್ನು ನೀನು ಕಳೆದುಕೊಂಡೆ” ಎಂದು ಹೇಳಿ ಅವನನ್ನು ಹೊರಗೆ ಕಳುಹಿಸಿಬಿಟ್ಟರು.

 

ಸಮಯವು ಮನುಷ್ಯನಿಗೆ ದೇವರು ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಒಂದಾಗಿದೆ. ಅನೇಕ ಬಾರಿ ನಾವು ನಮಗೆ ನೀಡಿದ ಸಮಯವನ್ನು ವ್ಯರ್ಥ ಮಾಡಿ ಆಶೀರ್ವಾದವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಜೀವನದಲ್ಲಿ ಅಮೂಲ್ಯ ಸಮಯವನ್ನು ವೇಗವಾಗಿ ಹೋಗುವಂತೆ ಮಾಡುವ ಕೆಲವು ವಿಷಯಗಳನ್ನು ನಾವು ಧ್ಯಾನಿಸೋಣ.

 

1. ಸಹ ಮನುಷ್ಯರಿಂದ Inspiration - ಅನ್ನು ಎದುರುನೋಡುವುದು ಮತ್ತು External ಕಾರ್ಯಗಳಿಗಾಗಿ Wait ಮಾಡಿ ಸಮಯವನ್ನು ವ್ಯರ್ಥ ಮಾಡುವುದು.

 

2. ಇತರ ಜನರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಿದ್ದಾರೋ ಎಂದು ಯೋಚಿಸುತ್ತಾ ಸಮಯವನ್ನು ವ್ಯರ್ಥ ಮಾಡಿ ಕೆಲಸ ಮಾಡದಿರುವುದು.

 

3. ತಡೆಯಾಗಿರುವ ಕಾರ್ಯಗಳನ್ನೋ ಅಥವಾ ಪರಿಸ್ಥಿತಿಗಳನ್ನೋ ಕೊರತೆಯಾಗಿ ಹೇಳುತ್ತಲೇ ಇರುವುದು.

 

4. ನಮ್ಮನ್ನು ನಾವು ಇತರರಿಗೆ ಹೋಲಿಸಿಕೊಳ್ಳುವುದರಲ್ಲಿ ಸಮಯ ವ್ಯರ್ಥ ಮಾಡುವುದು.

 

5. ಒಮ್ಮೆ ಸೋಲುವುದು ಸಹಜ. ಆದರೆ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುವುದು.

 

6. ನಮ್ಮ ಜೀವನವನ್ನು ಸುಧಾರಿಸುವ ವಿಷಯಗಳಿಗೆ ಪ್ರಾಮುಖ್ಯತೆ ನೀಡುವ ಬದಲು, ನಾವು ಅವುಗಳನ್ನು ಮುಂದೂಡುತ್ತಾ ಮತ್ತು ಅನಗತ್ಯ ವಿಷಯಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಸಮಯವನ್ನು ವ್ಯರ್ಥ ಮಾಡುವುದು.

 

7. ಸೋಲುಗಳಿಂದ ಎದೆಗುಂದಿ, ಜೀವನದಲ್ಲಿ ಮುಂದಿನ ಹಂತಕ್ಕೆ ಹೋಗದೇ ಬಳಲಿ ಹೋಗುವುದು.

 

ಪ್ರಿಯರೇ! ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ (ಎಫೆ. 5:16), ಅಪೊಸ್ತಲನಾದ ಪೌಲನು, "ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ" ಎಂದು ಹೇಳುತ್ತಾರೆ. ನಾವು ಬದುಕುತ್ತಿರುವ ಈ ಸಮಾಜದಲ್ಲಿ ಸಮಯ ಕಳೆಯಲು ಲೆಕ್ಕವಿಲ್ಲದಷ್ಟು ದಾರಿಗಳಿವೆ. ಈ ಸಂಗತಿಗಳಿಂದ ದೂರ ಸರಿದು ಕರ್ತನಿಗೆ ಕೊಡಬೇಕಾದ ಸಮಯವನ್ನು ಆತನಿಗೆ ಕೊಟ್ಟು, ಆತನ ಪಾದದಲ್ಲಿ ಕುಳಿತು ಕಾರ್ಯ ಮಾಡುವಾಗ, ಪ್ರಾಪಂಚಿಕ ವ್ಯವಹಾರಗಳಲ್ಲೂ ನಾವು ದಣಿಯದೇ ಜ್ಞಾನಿಗಳಾಗಿದ್ದು ಜೀವನದ ಮುಂದಿನ ಹಂತಕ್ಕೆ ಸಾಗಲು ಸಾಧ್ಯ. ಕರ್ತನು ಪ್ರತಿದಿನ ನಮಗೆ ನೀಡುವ ಅವಕಾಶಗಳನ್ನು ಬಳಸಿಕೊಂಡು ನಾವು ಆಶೀರ್ವಾದಕರವಾದ ಮತ್ತು ಯಶಸ್ವಿಕರವಾದ ಜೀವನವನ್ನು ನಡೆಸಬಹುದು.

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

1 ಲಕ್ಷ ಹಳ್ಳಿಗಳನ್ನು ಭೇಟಿ ಮಾಡುವಂತೆಯೂ ಮತ್ತು 7000 ಮಿಷನರಿಗಳನ್ನು ಕರ್ತನು ಎಬ್ಬಿಸಿ ಕೊಡುವಂತೆಯೂ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001



hacklink satın al