Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.08.2022 (Youth Special)
Share:

By Village Missionary Movement

Sunday, 07-Aug-2022

ಧೈನಂದಿನ ಧ್ಯಾನ(Kannada) – 08.08.2022 (Youth Special)

 

ಯಾವ ಶಬ್ದ ಕೇಳುತ್ತಿದೆ?

 

"ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ." - ಕೀರ್ತನೆ 127:4

 

ಈ ಯೌವನ ವಯಸ್ಸಿನಲ್ಲಿ, ಸೈತಾನನು ನಮ್ಮ ಜೀವನದಲ್ಲಿ ಈ ಪ್ರಪಂಚದ ಶಬ್ದವನ್ನು ಅಧಿಕವಾಗಿ ಕೇಳುವಂತೆ ನಮ್ಮ ಕಿವಿಗಳನ್ನು ಅದರ ಕಡೆಗೆ ತಿರುಗಿಸುತ್ತಾನೆ, ಲೋಕದ ಸದ್ದು ಕೇಳಿದರೆ ಅದು ಏನೆಲ್ಲಾ ಮಾಡುತ್ತದೆ?

 

1. ಜೀವನದಲ್ಲಿ Focus ಇಲ್ಲದೇನೆ ಓಡುತ್ತಲೇ ಇರುತ್ತೇವೆ.

 

2. ನಮ್ಮ ಮನಸ್ಸಿನಲ್ಲಿರುವ ಅಶುದ್ಧ ವಿಷಯಗಳನ್ನು ಯೋಚಿಸುವಂತೆ ಮಾಡುತ್ತದೆ.

 

3. ನಮ್ಮನ್ನು ದೇವರ ಬಳಿಗೆ ಬರಲು ಬಿಡದೆ ನಮಗೆ ಯಾರೂ ಇಲ್ಲ ಎಂದು ಯೋಚಿಸುವಂತೆ ಮಾಡುತ್ತದೆ.

 

4. ನಮ್ಮನ್ನು ಸುಳ್ಳು ಪ್ರೀತಿಯಲ್ಲಿ ಸಿಲುಕಿಸುತ್ತದೆ. 

 

5. ಮಾಯೆಯಾಗಿರುವ ಈ ಲೋಕದ ಸಂಗತಿಗಳೇ ನಿಜವೆಂದು ನಂಬುವಂತೆ ಮಾಡುತ್ತದೆ. 

 

6. ಕರ್ತನಲ್ಲಿ ನೀವು ಯಾರೆಂದು ಯೋಚಿಸಲು ಅವಕಾಶ ನೀಡುವುದಿಲ್ಲ.

 

ಯೌವನ ಕಾಲದಲ್ಲಿ ಪ್ರಪಂಚದ ಗದ್ದಲವು ನಿಮ್ಮನ್ನು ಆವರಿಸುವಂತೆ ವಿರೋಧಿಯು ಅನೇಕ ಸೂಕ್ಷ್ಮ ತಂತ್ರಗಳಿಂದ ನಿಮ್ಮನ್ನು ಮೋಸಗೊಳಿಸುತ್ತಾನೆ. ಇಹಲೋಕದ ಶಬ್ದಕ್ಕೆ Pause button press ಮಾಡಿದಾಗ ಮಾತ್ರವೇ ನಾವು ದೇವರ ಶಬ್ದವನ್ನು ಕೇಳಲು ಸಾಧ್ಯ. 1 ಅರಸು. 19 ನೇ ಅಧ್ಯಾಯದಲ್ಲಿ ದೇವರು ಎಲೀಯನೊಂದಿಗೆ ಮಾತನಾಡಿದಾಗ, ಮೊದಲು ಬಂದ ಮಹಾ ದೊಡ್ಡ ಶಬ್ದಗಳಲ್ಲಿ ದೇವರು ಇರಲಿಲ್ಲ. ತರು ವಾಯ ಮೆಲ್ಲನೆಯಾದಂಥ, ಸೂಕ್ಷ್ಮವಾದಂಥ ಶಬ್ದದಲ್ಲಿ ಮಾತನಾಡಿದರು ಎಂದು ಓದುತ್ತೇವೆ. ಅದೇ ರೀತಿಯಲ್ಲೇ, ಉನ್ನತವಾದ ದೇವರು ಮೆಲ್ಲನೆಯ ಶಬ್ದದಲ್ಲಿ ನಮ್ಮೊಂದಿಗೆ ಮಾತನಾಡುತ್ತಿದ್ದಾರೆ. ಆದ್ದರಿಂದ Tune your ears to hear God's word. ನಾವು ಯಾರೊಂದಿಗೆ ಹೆಚ್ಚು ಸಮಯ ಕಳೆಯುತ್ತೇವೋ ಅವರ ಶಬ್ದ ನಮಗೆ ಹೆಚ್ಚು ಪರಿಚಿತವಾಗಿರುತ್ತದೆ. ನೀವು ದೇವರೊಂದಿಗೆ ಹೆಚ್ಚು ಸಮಯ ಕಳೆಯಲು ಕಲಿತುಕೊಂಡರೆ, ನೀವು ಅವರ ಮೆಲ್ಲನೆಯ ಶಬ್ದವನ್ನು ಗ್ರಹಿಸಲು ಸಾಧ್ಯವಾಗುತ್ತದೆ.

 

ಯೌವನದ ಮಕ್ಕಳು ಪರಾಕ್ರಮಶಾಲಿಯ ಕೈಯಲ್ಲಿ ಬಾಣಗಳ ಹಾಗೆ ಎಂದು ದೇವರು ಹೇಳಿದ್ದಾರೆ. ನಿಮ್ಮ ಮೂಲಕ ಕರ್ತನು ಈ ದೇಶವನ್ನು ಅಲುಗಾಡಿಸಲು ಬಯಸುತ್ತಿದ್ದಾರೆ. ಈ ಲೋಕದಲ್ಲಿ ದೊಡ್ಡ ದೊಡ್ಡ ಅದ್ಭುತಗಳನ್ನು ಅತಿಶಯಗಳನ್ನು ಮಾಡಲು ದೇವರು ನಿಮ್ಮನ್ನು ಬಳಸಬೇಕೆಂದು ಬಯಸುತ್ತಿದ್ದಾರೆ. Miss ಮಾಡ್ಕೋಬೇಡಿ. ಸೈತಾನನು ಹೇಳುವ ಲೌಕಿಕ ಶಬ್ದಕ್ಕೆ ಕಿವಿಗೊಡಬೇಡಿರಿ. ಕರ್ತನು ನಿಮ್ಮನ್ನು ಹೆಚ್ಚಿಸಲು ಮತ್ತು ಅನೇಕರಿಗೆ ಆಶೀರ್ವಾದಕರವಾಗಿರಿಸಲು ಸಿದ್ಧವಾಗಿದ್ದಾರೆ ಮತ್ತು ಸರ್ವಶಕ್ತನಾಗಿದ್ದಾರೆ. ಆದುದರಿಂದ, ಪ್ರೀತಿಯ ತಂಗಿ, ನೀನು ನಿನ್ನ ಕಿವಿಯನ್ನು ದೇವರ ವಾಕ್ಯವನ್ನು ಕೇಳಲು ತರಬೇತಿಗೊಳಿಸಿದರೆ, ನೀನು ಈ ಭೂಮಿಯನ್ನು ಆಳಬಹುದು.

- Mrs. ದಿವ್ಯಾ ಬೆರ್ನಾರ್ಡ್

 

ಪ್ರಾರ್ಥನಾ ಅಂಶ:

ನಮ್ಮ ಕೆಲಸದ ಸ್ಥಳಗಳಲ್ಲಿ ನಾವು ಭೇಟಿಯಾಗುವ ಹಳ್ಳಿಗಳಲ್ಲಿ ಹೇರಳವಾದ ಆತ್ಮಗಳನ್ನು ಕರ್ತನು ನೀಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al