Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.08.2022
Share:

By Village Missionary Movement

Thursday, 04-Aug-2022

ಧೈನಂದಿನ ಧ್ಯಾನ(Kannada) – 05.08.2022

 

ಅಂಗೀಕರಿಸು

 

"ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ." - ರೋಮಾ 5:8

 

ಇಂದು ನಮ್ಮ ಸಮಾಜ ಹಲವಾರು ಅಧಃಪತನಗಳ ಮಧ್ಯೆ ಇದೆ. ಅವುಗಳಲ್ಲಿ ಒಂದು ವ್ಯಭಿಚಾರ. ವ್ಯಭಿಚಾರ ಪಾಪ ಎಂದು ನಮ್ಮ ಸತ್ಯವೇದವು ನಮಗೆ ಹೇಳುತ್ತಿದೆ. ಅದು ದೇವರಿಗೆ ಇಷ್ಟವಾಗದ ಕಾರ್ಯವಾಗಿದೆ. ವ್ಯಭಿಚಾರವು ಪುರುಷರು ಮತ್ತು ಮಹಿಳೆಯರಿಬ್ಬರನ್ನೂ ಒಳಗೊಂಡಿರುತ್ತದೆ. ಆದರೆ ನಮ್ಮ ಸಮಾಜವು ಅದನ್ನು ಮಹಿಳೆಯರ ಮೇಲೆ ಮಾತ್ರ ಹೇರುತ್ತದೆ ಮತ್ತು ಮಹಿಳೆಯರನ್ನು ಮಾತ್ರ ಅಪರಾಧಿಗಳನ್ನಾಗಿ ಮಾಡುತ್ತಿದೆ. ಇಂತಹ ಮಹಿಳೆಯರನ್ನು ನಿರ್ಲಕ್ಷಿಸುವುದು, ಅಸಹ್ಯಕರವಾಗಿ ನೋಡುವ ಮೂಲಕ ಇವರನ್ನು ಶಿಕ್ಷಿಸುತ್ತಿದೆ. ಆದರೆ ಸಂತ್ರಸ್ತ ಮಹಿಳೆಯರಲ್ಲಿ ಅನೇಕರನ್ನು ಅವರ ಸಂಬಂಧಿಕರು ಮತ್ತು ಕುಟುಂಬದವರು ವೇಶ್ಯಾವಾಟಿಕೆಗೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಅಪಹರಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ನಾವು ಎಷ್ಟು ಬಾರಿ ಯೋಚಿಸಿದ್ದೇವೆ!

 

ವ್ಯಭಿಚಾರ ಖಂಡಿತವಾಗಿಯೂ ಪಾಪವೇ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ದೇವರು ಪಾಪವನ್ನು ದ್ವೇಷಿಸುತ್ತಾರೆ. ಆದರೆ ಅವರು ಪಾಪಿಗಳನ್ನೂ ಪ್ರೀತಿಸುತ್ತಾರೆ. ಸತ್ಯವೇದದಲ್ಲಿ ಯೋಹಾನ 8 ನೇ ಅಧ್ಯಾಯದಲ್ಲಿ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಮಹಿಳೆಯ ಬಗ್ಗೆ ನಾವು ಓದುತ್ತೇವೆ. ಅಲ್ಲಿ ಶಾಸ್ತ್ರಿಗಳು ಮತ್ತು ಫರಿಸಾಯರು ಆ ಮಹಿಳೆಯನ್ನು ಕಲ್ಲೆಸೆಯಲು ಯೇಸುವಿನ ಬಳಿಗೆ ಕರೆತಂದರು. ಆದರೆ ಯೇಸುವಿನ ಉತ್ತರವು ಅವರ ಹೃದಯವನ್ನು ಚುಚ್ಚಿತು, "ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಹೇಳಿದ ಕೂಡಲೇ, ಹಿರಿಯರು ಮೊದಲುಗೊಂಡು ಕಿರಿಯರವರೆಗೂ ಒಬ್ಬರ ಹಿಂದೊಬ್ಬರು ಹೊರಗೆ ಹೋದರು. ಯೇಸು ಸಹ ಆಕೆಯನ್ನು ಶಿಕ್ಷಿಸದೆ ಹೋಗು, ಇನ್ನು ಮೇಲೆ ಪಾಪಮಾಡಬೇಡ ಎಂದು ಹೇಳಿದರು. “ನಾವೆಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಕಳೆದುಕೊಂಡಿದ್ದೇವೆ” ಎಂದು ಸತ್ಯವೇದವು ಹೇಳುತ್ತಿದೆ. ಹಾಗಾದರೆ ಮಾನವರಾಗಿ ಹುಟ್ಟಿದವರೆಲ್ಲರೂ ಪಾಪಿಗಳೇ! ಪಾಪದಿಂದ ನಮ್ಮನ್ನು ರಕ್ಷಿಸಲು ಯೇಸು ಶಿಲುಬೆಯಲ್ಲಿ ನೇತಾಡಿದರು.

 

ಹೌದು, ಪ್ರಿಯರೇ! ಯೇಸು ನಾವು ಪಾಪಿಗಳಾಗಿದ್ದರೂ ಅಂಗೀಕರಿಸಿದಂತೆಯೇ, ನಾವು ಇತರರ ಅಪರಾಧಗಳನ್ನು ಕ್ಷಮಿಸಲು ಬಾಧ್ಯತೆ ಹೊಂದಿದ್ದೇವೆ. ಇತರರನ್ನು ಶಿಕ್ಷಿಸಲು ನಾವು ಸ್ವಲ್ಪ ಮಟ್ಟಿಗೆ ಅನರ್ಹರಾಗಿದ್ದೇವೆ. ವ್ಯಭಿಚಾರಿಗಳು ನಮಗೆ ಪಾಪಿಗಳಾಗಿ ಕಾಣಿಸಿಕೊಂಡರೂ, ದೇವರು ಅವರನ್ನು ಅಮೂಲ್ಯವಾದ ಆತ್ಮಗಳಂತೆ ನೋಡುತ್ತಾರೆ. ಯೇಸು ಅವರನ್ನು ಸ್ವೀಕರಿಸಿದಂತೆ ನಾವು ಅವರನ್ನು ಸ್ವೀಕರಿಸಬೇಕು.. ನಾವು ಸಾಂತ್ವನದ ಮಾತುಗಳನ್ನು ಮಾತನಾಡುವಾಗ ಮತ್ತು ದೇವರ ಸತ್ಯವನ್ನು ಹೇಳಿದಾಗ, ಅವರು ಕೂಡ ರಕ್ಷಿಸಲ್ಪಡುತ್ತಾರೆ! ಆದ್ದರಿಂದ ನಾವು ಪಾಪಿಗಳನ್ನು ಪ್ರೀತಿಸೋಣ. ದೇವರ ಪ್ರೀತಿಯನ್ನು ವ್ಯಕ್ತಪಡಿಸೋಣ! ಆತ್ಮಗಳನ್ನು ಗೆಲ್ಲೋಣ.

- Mrs. ಸ್ಟೆಫಿ ರಾಕ್ಸನ್

 

ಪ್ರಾರ್ಥನಾ ಅಂಶ:

ದೇಶಕ್ಕಾಗಿ ಒಡಕಿನಲ್ಲಿ ನಿಂತುಕೊಳ್ಳುವ‌ ಹೊಸ, ಹೊಸ ಪ್ರಾರ್ಥನಾ ಗುಂಪುಗಳನ್ನು ಕರ್ತನು ಎಬ್ಬಿಸಿಕೊಡುವುದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet