Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.08.2022
Share:

By Village Missionary Movement

Thursday, 04-Aug-2022

ಧೈನಂದಿನ ಧ್ಯಾನ(Kannada) – 04.08.2022

 

ದ್ವೇಷ

 

"ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ" - ಎಫೆಸದವರಿಗೆ 4:31

 

ಜಿಮ್ಮಿ ಬುಕ್ನೇರ್ 16 ವರ್ಷ ತುಂಬಿದ ಸ್ವೀಡನ್ ದೇಶದ ಯೌವನಸ್ಥನು. ಶಾಲೆಯಲ್ಲಿ ಓದುತ್ತಿದ್ದ ಅವನು, ಸ್ನೇಹಿತರಿಲ್ಲದೆ ಒಬ್ಬಂಟಿಯಾಗಿದ್ದನು. ಅವನೊಂದಿಗೆ ಓದಿದ ಕೆಲವು ಕಪ್ಪು ಬಣ್ಣದ ವಿದ್ಯಾರ್ಥಿಗಳು ಅವನನ್ನು ಅಣಕಿಸಿ ಚುಡಾಯಿಸಿ ಕೆಳಗೆ ತಳ್ಳಿ ತಮಾಷೆ ಮಾಡುತ್ತಿದ್ದರು. ಈ ರೀತಿ ಅನೇಕ ಬಾರಿ ಸಂಭವಿಸಿತು. ಮೊದಮೊದಲು ಇವರನ್ನು ಮಾತ್ರ ಜಿಮ್ಮಿ ದ್ವೇಷಿಸುತ್ತಿದ್ದರು, ಆದರೆ ನಂತರ ಶಾಲೆಯಲ್ಲಿನ ಎಲ್ಲಾ ಕಪ್ಪು ವಿದ್ಯಾರ್ಥಿಗಳನ್ನು ದ್ವೇಷಿಸಲು ಆರಂಭಿಸಿದರು. ನಂತರ ಅವರು ವಾಸಿಸುತ್ತಿದ್ದ ದೇಶದ ಮೇಲೆಯೇ ಬಹು ದ್ವೇಷ ಉದ್ವೇಗ ಉಂಟಾಯಿತು.

 

ಜಿಮ್ಮಿ ಅಂತಿಮವಾಗಿ "National Socialist Front" ಎಂಬ ಬಿಳಿಯ ಪ್ರಾಬಲ್ಯವಾದಿ ಗುಂಪನ್ನು ಸೇರಿದರು. ಈ ಗುಂಪಿನವರ ಉದ್ದೇಶವೇನೆಂದರೆ, ಸ್ವೀಡನ್‌ ದೇಶದಲ್ಲಿರುವ ಸರಿಯಾಗಿ ಓದದ, ಉದ್ಯೋಗವಿಲ್ಲದ ಯುವಕರನ್ನೆಲ್ಲಾ ಸೇರಿಸಿ ನಿಮ್ಮ ಈ ದುಃಸ್ಥಿತಿಗೆ ಕಾರಣ ಇತರ ದೇಶಗಳಿಂದ ಕೆಲಸಕ್ಕೆ ಬಂದಿರುವವರೇ ಎಂದು ಹೇಳುವುದು. ಇವರು ತಮ್ಮ ದೇಶದವರನ್ನು ಹೊರತುಪಡಿಸಿ ಬೇರೆ ಯಾರನ್ನಾದರೂ ಕಂಡರೆ, ಅವರನ್ನು ಹೊಡೆಯುವುದು ಮತ್ತು ಹೆದರಿಸುವಂತಹ ತೀವ್ರ ಕೃತ್ಯಗಳಲ್ಲಿ ತೊಡಗುತ್ತಿದ್ದರು. ಹಿಟ್ಲರ್‌ನಂತಹವರು ಬರೆದ ನಾಜಿ ತತ್ವಗಳನ್ನು ಒಳಗೊಂಡ ಪುಸ್ತಕಗಳೇ ಇವರಿಗೆ ಇಷ್ಟ.

 

ಒಮ್ಮೆ ಈ ವ್ಯಕ್ತಿ ಏಷ್ಯಾ ಖಂಡದಿಂದ ಬಂದ ವ್ಯಕ್ತಿಯನ್ನು ಹೊಡೆದು ಹಿಂಸಿಸಿದ ಕಾರ್ಯವನ್ನು ಅರಿತುಕೊಂಡ ಪೋಲೀಸರು ಜಿಮ್ಮಿ ಮತ್ತು ಇತರ ಕೆಲವರನ್ನು ಬಂಧಿಸಿದರು. ಇದರಿಂದ ಅವಮಾನಗೊಂಡ ಜಿಮ್ಮಿ ತನ್ನನ್ನು ಈ ಗುಂಪಿನಿಂದ ಬಿಡಿಸಿಕೊಂಡನು. ಈ ಘಟನೆ Readers Digest ಎಂಬ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು.

 

ಮೇಲಿನ ಘಟನೆಯಲ್ಲಿ ಕೆಲವು ಜನರ ಮೇಲೆ ಉಂಟಾದ ದ್ವೇಷವು ಆ ದೇಶವನ್ನೇ ದ್ವೇಷಿಸುವ ಮಟ್ಟಕ್ಕೆ ಕಟುವಾಗಿ ಬೇರೂರಿತ್ತು. ಹೀಗೆ ಜನರು ಒಬ್ಬರನ್ನೊಬ್ಬರು ವಿರೋಧಿಸಿ ನಾಶಪಡಿಸುವುದು ಸೈತಾನನ ತಂತ್ರವಾಗಿದೆ.

 

ಪ್ರಿಯರೇ! ಯಾವುದೋ ಒಂದು ಊರಿನಿಂದ ಮದುಮಗಳಾಗಿ ಬಂದ ಹೆಣ್ಣಿನ ಗುಣ ಸರಿಯಿಲ್ಲದ ಕಾರಣ ಆ ಊರಿನ ಹೆಂಗಸರೇ ಅಹಂಕಾರಿಗಳು, ಅಲ್ಲಿ ಹೆಣ್ಣನ್ನು ತೆಗೆದುಕೊಳ್ಳಲೇಬಾರದು ಎಂದು ಕೆಲವರು ಹೇಳುತ್ತಾರೆ. ಅನ್ಯ ಭಾಷೆಯನ್ನಾಡುವವರೇ ಅಯೋಗ್ಯರು ಎಂದು ಕೆಲವರು ಹೇಳುತ್ತಾರೆ. ಒಂದು ನಿರ್ದಿಷ್ಟ ಮಿಷಿನರಿ ಸ್ಥಾಪನೆಯಲ್ಲಿ ಒಬ್ಬ ಮಿಷಿನರಿ ಒಳ್ಳೆಯವನಲ್ಲದಿದ್ದರೆ, ನೂರಾರು ಮಿಷನರಿಗಳನ್ನು ಹೊಂದಿರುವ ಆ ಸಂಸ್ಥೆಯೇ ಒಳ್ಳೇದಲ್ಲ ಎಂಬ ಲೆಕ್ಕಾಚಾರವು ಸಂಪೂರ್ಣವಾಗಿ ತಪ್ಪು. ಯಾವುದೇ ವಿಷಯದ ಬಗ್ಗೆ ಯೋಚಿಸಿ ಶಾಂತ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಇಂತಹ ಕಹಿ ಭಾವನೆ ಯಾವುದೇ ವ್ಯಕ್ತಿ ಅಥವಾ ಗುಂಪಿನ ಮೇಲೆ ಬರದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳೋಣ. ಇದು ನಮ್ಮ ಸಮಾಜವನ್ನು ನಾಶಪಡಿಸುತ್ತದೆ ಆದ್ದರಿಂದ ಎಲ್ಲದರಲ್ಲೂ ತಾಳ್ಮೆಯಿಂದಿರಿ .

- J. ಸಂತೋಷ್

 

ಪ್ರಾರ್ಥನಾ ಅಂಶ:

ಮನೆ-ಮನೆಗಳಲ್ಲಿ ನಡೆಯುತ್ತಿರುವ ಪ್ರಾರ್ಥನಾ ಗುಂಪುಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ದೇವರ ಆತ್ಮದಿಂದ ತುಂಬಲ್ಪಡಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al