Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.08.2022
Share:

By Village Missionary Movement

Tuesday, 02-Aug-2022

ಧೈನಂದಿನ ಧ್ಯಾನ(Kannada) – 03.08.2022

 

ತಪ್ಪು ನಡತೆ

 

"ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮರೆಹೊಕ್ಕವರನ್ನು ಬಲ್ಲನು." - ನಹೂಮ.1:7

 

19 ನೇ ಶತಮಾನದಲ್ಲಿ, ಭಾರತದಲ್ಲಿ ಅತ್ಯಂತ ಪ್ರಮುಖ ಸಾಮಾಜಿಕ ಕೆಟ್ಟ ಕಾರ್ಯವಾಗಿ ದೇವದಾಸಿ ವಿಧಾನವು ಕಾಣಲ್ಪಟ್ಟಿತು. ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ನೃತ್ಯ ಮಾಡಲು ಮತ್ತು ಸೇವಕಿಯಾಗಿ ಕೆಲಸ ಮಾಡಲು ದೇವಾಲಯಗಳಲ್ಲಿ ಬಿಟ್ಟು ಬಿಟ್ಟರು. ತಮ್ಮ ಮಕ್ಕಳನ್ನು ದೇವಸ್ಥಾನಗಳಲ್ಲೇ ದೇವದಾಸಿಯಾಗಿ ಕೆಲಸ ಮಾಡಲು ಬಿಟ್ಟು ಬಿಟ್ಟರೆ ದೇವರಿಗೆ ಮೆಚ್ಚಿಗೆಯಾಗಿರುತ್ತದೆಂದು ತಮಗೆ ಪುಣ್ಯ ದೊರೆಯುತ್ತದೆಂದೂ ಆ ಮಕ್ಕಳಿಗೆ "ದೇವದಾಸಿಯರು" ಎಂದು ನಾಮಕರಣ ಮಾಡಿ ಸಂತಸಪಟ್ಟರು. ಈ ದುಸ್ಥಿತಿಯೊಳಗೆ ಬಲವಂತವಾಗಿ ತಳ್ಳಲ್ಪಟ್ಟ ಅನೇಕ ಮಹಿಳೆಯರೂ ಇದ್ದಾರೆ.

 

ಇಂತಹ ಪೀಳಿಗೆಯನ್ನು ಬಿಡಿಸಲು ಮತ್ತು ಆಶ್ರಯನೀಡಲು ಯಾರೂ ಮುಂದೆ ಬರಲಿಲ್ಲ. ಆ ಸಮಯದಲ್ಲಿ ಎಮೀ ಕಾರ್ಮೈಕೆಲ್ ಅಮ್ಮನವರು 1895 ರಲ್ಲಿ ಐರ್ಲ್ಯಾಂಡ್‌ನಿಂದ ಭಾರತಕ್ಕೆ ಬಂದು ಈ ಅನಾಹುತವನ್ನು ತಡೆಯಲು ರೋಷದಿಂದ ಹೊರಟರು. ಹುಡುಗಿಯರು ಮತ್ತು ಮಹಿಳೆಯರನ್ನು ನಾಟಕ ಕಂಪನಿಗಳಿಗೆ ಮಾರಾಟ ಮಾಡಲಾಯಿತು. 1926 ರಲ್ಲಿ ಎಮೀ ಕಾರ್ಮೈಕೆಲ್ ಇಂತಹ ಕ್ರಮವಿಲ್ಲದ ಜೀವನವನ್ನು ತಡೆಯಲು ಡೋನಾವೂರ್ ಸೊಸೈಟಿಯನ್ನು ಸ್ಥಾಪಿಸಿದರು.

 

ದಿಕ್ಕಿಲ್ಲದವರು, ಗಂಡನಿಂದ ಕೈ ಬಿಡಲ್ಪಟ್ಟವರು, ವಿಧವೆಯರು, ನೈತಿಕವಾಗಿ ಭ್ರಷ್ಟರು ಮತ್ತು ನಿರ್ಗತಿಕರಿಗೆ ಆಶ್ರಯ ನೀಡುವ ಮೂಲಕ ಅವರಿಗೆ ಕ್ರಿಸ್ತನ ಪ್ರೀತಿಯನ್ನು ಕ್ರಿಯೆಯಲ್ಲಿ ತೋರಿಸಿದರು. ಅವರು ಈ ವ್ಯವಸ್ಥೆಯನ್ನು "ನಕ್ಷತ್ರ ಕೂಟ" ಎಂದು ಕರೆದರು. ಇಂದಿಗೂ ಡೋಣಾವೂರು ಒಕ್ಕೂಟವು ಸಾವಿರಕ್ಕೂ ಹೆಚ್ಚು ಜನರಿಗೆ ಬದುಕು ನೀಡುತ್ತಿದೆ.

 

ಇಂದಿಗೂ ಕೊಳೆಗೇರಿ ಮತ್ತು ಬಡತನದಲ್ಲಿ ಬದುಕುತ್ತಿದ್ದ ಮಹಿಳೆಯರು ತಮ್ಮ ಬಡತನವನ್ನು ನೀಗಿಸಲು ಮತ್ತು ಕುಟುಂಬವನ್ನು ಪೋಷಿಸಲು ನೀರಿನಂತೆ ವೇಶ್ಯಾವಾಟಿಕೆಯನ್ನು ಆಶ್ರಯಿಸುತ್ತಿದ್ದಾರೆ. ನಾನು ಕೆಲಸ ಮಾಡಿದ ಸರ್ಕಾರಿ ಶಾಲೆಯೊಂದರಲ್ಲಿ ತನ್ನ 3 ಮಕ್ಕಳನ್ನು ಬಿಟ್ಟು ಬೇರೆ ಗಂಡನನ್ನು ಆಶ್ರಯಿಸಿದ ತಾಯಿ ನನಗೆ ಗೊತ್ತು! ಇನ್ನೊಂದು ಕುಟುಂಬದಲ್ಲಿ ತಂದೆ-ತಾಯಿ ತಮ್ಮ ಇಬ್ಬರು ಮಕ್ಕಳನ್ನೂ ವಯಸ್ಸಾದ ತಾಯಿಯ ಬಳಿ ಬಿಟ್ಟು ಹೋದರು! ಇಂತಹ ಮಕ್ಕಳು ರಾತ್ರಿ ಊಟ ಮಾಡದೆ ಬೆಳಿಗ್ಗೆ ಊಟ ಮಾಡದೆ ಮಧ್ಯಾಹ್ನ ಮಾತ್ರ ಶಾಲೆಯ ಊಟವನ್ನು ಆತುರದಿಂದ ತಿನ್ನುವ ದಯನೀಯ ದೃಶ್ಯ! ನೋಡಿಕೊಳ್ಳಲು ಯಾರೂ ಇಲ್ಲದೆ ತಲೆ ಬೋಳಿಸಿಕೊಂಡು ಕೊಳಕು ಬಟ್ಟೆ ಯೊಂದಿಗೆ ಬರುವ ಮಕ್ಕಳನ್ನು ಕಂಡು ಬೇಸರವಾಗುತ್ತಿತ್ತು.

 

ಪಾಪಿಗಳನ್ನು ರಕ್ಷಿಸಲು ಈ ಲೋಕದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡ ಯೇಸುಕ್ರಿಸ್ತನು, ಮುಖಾಮುಖಿಯಾಗಿ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಮಹಿಳೆಯನ್ನು ಕ್ಷಮಿಸಿ, "ಇನ್ನು ಪಾಪ ಮಾಡಬೇಡ" ಎಂದರು. ಕ್ರೈಸ್ತವ್ಯದ ಪ್ರಮುಖ ಲಕ್ಷಣವಾಗಿರುವ ಆ ಪ್ರೀತಿಯು ನಮ್ಮಲ್ಲಿ ಪ್ರತಿಯೊಬ್ಬರಿಗೂ ಇದೆಯೇ?

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಮಿಷಿನರಿ ಮಕ್ಕಳ ಶಿಕ್ಷಣಕ್ಕಾಗಿ, ಹಣಕಾಸಿನ ಅಗತ್ಯತೆಗಳು ಪೂರೈಸಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al