By Village Missionary Movement
Monday, 01-Aug-2022ಧೈನಂದಿನ ಧ್ಯಾನ(Kannada) – 02.08.2022
ಭವಿಷ್ಯದ ಅವನತಿಗಳು
“ನಡೆಯಬೇಕಾದ ಮಾರ್ಗದಲ್ಲಿರುವಂತೆ ಹುಡುಗನಿಗೆ ಶಿಕ್ಷಣಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದ ರಿಂದ ಹೊರಟು ಹೋಗುವದಿಲ್ಲ." - ಜ್ಞಾನೋಕ್ತಿ 22:6
ನಮ್ಮಲ್ಲಿ ಅನೇಕರಿಗೆ ಬೆತೇಲ್ ಸಮುವೇಲ್ ಅಯ್ಯನವರ ಬಗ್ಗೆ ತಿಳಿದಿರುತ್ತದೆ. ಅವರು ತಮ್ಮ ಕಿರಿಯರ ಅನಾಥಾಶ್ರಮದಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳೊಂದಿಗೆ ಇರುವ ವಿಧಾನವು ತುಂಬಾ ವಿಭಿನ್ನವಾಗಿರುತ್ತದೆ. ಕೆಲ ಚೇಷ್ಟೆ ವಿದ್ಯಾರ್ಥಿಗಳು ಹಾಸ್ಟೆಲ್ ಬಿಟ್ಟು ಊರೂರು ಸುತ್ತಿ ಬರುವುದುಂಟು. ಕೆಲವೊಮ್ಮೆ ಥಿಯೇಟರ್ ಬಾಗಿಲಲ್ಲಿ ಮತ್ತು ಅಂಗಡಿ ಬೀದಿಗಳಲ್ಲಿ ಹೋಟೆಲ್ ಗಳ ಬಳಿ ರೆಡ್ ಹ್ಯಾಂಡ್ ಆಗಿ ಅಲ್ಲಿರುವವರ ಕೈಗೆ ಸಿಕ್ಕಿಬೀಳುತ್ತಿದ್ದರು. ಇಂತಹ ತಪ್ಪುಗಳನ್ನು ಮಾಡುವ ವಿದ್ಯಾರ್ಥಿಗಳನ್ನು ಶಿಕ್ಷಿಸಲು ಸಮುವೇಲ್ ಅಯ್ಯನವರ ಬಳಿಗೆ ಕರೆದುಕೊಂಡು ಬರುತ್ತಿದ್ದರು.
ಅವರೋ ತನ್ನ ಮುಂದೆ ಅಪರಾಧ ಎಸಗಿದ ವಿದ್ಯಾರ್ಥಿಗಳನ್ನು ನೋಡಿ, “ಅಯ್ಯೋ ಇವರಾ? “ನನ್ನ ಮಕ್ಕಳಿಗೆ ತಪ್ಪು ಮಾಡಲು ಗೊತ್ತೇ ಇಲ್ಲ” ಎಂದು ಪ್ರೀತಿಯಿಂದ ಹೇಳುತ್ತಿದ್ದರು. ನಂತರ ತನ್ನ ಸಹ ಸೇವಕರನ್ನು ನೋಡಿ, ಅವರು ಥಿಯೇಟರ್ ಬಾಗಿಲಲ್ಲಿ ನಿಂತು ಅಲ್ಲಿ ಸಿನಿಮಾ ನೋಡಲು ಬಂದವರೆಲ್ಲರಿಗೂ ಆತ್ಮ ಭಾರದಿಂದ ಮತ್ತು ಕಣ್ಣೀರಿನಿಂದ ಪ್ರಾರ್ಥಿಸಲು ಹೋಗಿರಬಹುದು ಎಂದು ಹೇಳಿ ವಿದ್ಯಾರ್ಥಿಗಳನ್ನು ಕಳುಹಿಸಿತ್ತಿದ್ದರಂತೆ. ಚಿಕ್ಕ ಮಕ್ಕಳನ್ನು ಹೊಡೆದು ಸರಿಮಾಡುವುದಕ್ಕಿಂತ ಪ್ರೀತಿಯ ಭಾಷೆಯಿಂದ ತಿದ್ದಬೇಕು ಎಂಬುದನ್ನೇ ದರ್ಶನವಾಗಿಟ್ಟುಕೊಂಡಿದ್ದರು ಬೆತೇಲ್ ಸಮುವೇಲ್ ಅಯ್ಯನವರು. ಇವರ ಪ್ರೀತಿಯ ಮನೋಭಾವವನ್ನು ಕಂಡ ನೂರಾರು ವಿದ್ಯಾರ್ಥಿಗಳು ಇಂದು ಜಗತ್ತಿನ ಅನೇಕ ದೇಶಗಳಲ್ಲಿ ಕರ್ತನ ಸೇವೆಯಲ್ಲಿ ಕರ್ತನಿಗಾಗಿ ಪ್ರಕಾಶಿಸುತ್ತಿದ್ದಾರೆ.
ತಪ್ಪು ಮಾಡುವ ಮಕ್ಕಳನ್ನು ಬೆತ್ತದಿಂದ ಶಿಕ್ಷಿಸುವ ಬಗ್ಗೆ ಸತ್ಯವೇದವು ಹೇಳಿರುವುದನ್ನು ಓದುತ್ತೇವೆ. ಅದೇ ಸಮಯದಲ್ಲಿ, ನಾವು ನಮ್ಮ ಮಕ್ಕಳನ್ನು ಹೆಚ್ಚು ಪ್ರೀತಿಯಿಂದ ಸರಿಪಡಿಸಬೇಕು ಎಂದು ಸತ್ಯವೇದವು ಇನ್ನೂ ಹೆಚ್ಚಾಗಿ ನಮಗೆ ಬೋಧಿಸುತ್ತಿದೆ. ಎತ್ತಿದ್ದಕ್ಕೆಲ್ಲಾ ಗದರಿಸುವ ಪೋಷಕರಂತಾಗಲಿ ಅಥವಾ ಶಿಕ್ಷಕರಂತಾಗಲಿ ಇದ್ದರೆ, ಮಕ್ಕಳಿಗೆ ಅವರಿಂದ ಕಲಿಯಲು ಯಾವುದೇ ಸಂದೇಶವಿರುವುದಿಲ್ಲ ಎಂಬುದೇ ನಿಜ. ಇದಕ್ಕೆ ವ್ಯತಿರಿಕ್ತವಾಗಿ, ಅನೇಕರು ಕಹಿ ಅನುಭವವುಳ್ಳವರಾಗಿ ಮತ್ತು ಉರಿಗೊಳ್ಳುವವರಾಗಿ ಮಾರ್ಪಟ್ಟು ದೊಡ್ಡವರಾದ ಮೇಲೆ ಸಮಾಜವಿರೋಧಿಗಳಾಗಿ ಬದಲಾಗುತ್ತಾರೆ. ನಾವು ನಮ್ಮ ಮಕ್ಕಳನ್ನು ದೇವರ ಪ್ರೀತಿಯಲ್ಲಿ ವಾಕ್ಯವನ್ನು ಬೋಧಿಸಿ ಮುನ್ನಡೆಸುವಂತೆ ದೇವರು ಕೃಪೆ ತೋರಿಸಲಿ!
- P. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ನಮ್ಮ ಸೇವಕರ ಪ್ರಯಾಣಗಳಲ್ಲಿ ಸುರಕ್ಷತೆಯನ್ನು ಅನುಗ್ರಹಿಸುವಂತೆ, ಅವರನ್ನು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482