Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.08.2022 (Youth Special)
Share:

By Village Missionary Movement

Monday, 01-Aug-2022

ಧೈನಂದಿನ ಧ್ಯಾನ(Kannada) – 01.08.2022 (Youth Special)

 

ಕೆಟ್ಟ ಯೋಚನೆ

 

"...ದೇವರ ಜ್ಞಾನವು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅನಿಷ್ಟಭಾವಕ್ಕೆ ಒಪ್ಪಿಸಿದನು" - ರೋಮಾ 1:28

 

ದೇವರು ನಮ್ಮನ್ನು ಗಂಡು ಮತ್ತು ಹೆಣ್ಣಾಗಿ ಸೃಷ್ಟಿಸಿ, ತನ್ನ ಪರಿಪೂರ್ಣ ಇಚ್ಛೆಯ ಪ್ರಕಾರ ಕುಟುಂಬವಾಗಿ ಸೇರಿಸಿ, ಈ ಲೋಕವನ್ನು ಆಳಲು ಮತ್ತು ದೇವರ ಪರಿಶುದ್ಧ ಸಂತತಿಯನ್ನು ರೂಪಿಸಲು ಸೃಷ್ಟಿಸಿದರು ಎಂದು ಸತ್ಯವೇದವು ಹೇಳುತ್ತಿದೆ. ಹಾಗಾಗಿ ದಾಂಪತ್ಯ ಜೀವನದಲ್ಲಿ ಗಂಡು ಹೆಣ್ಣನ್ನು ಒಂದುಗೂಡಿಸಿ ಅವರು ಕರ್ತನಿಗಾಗಿ ಮಕ್ಕಳನ್ನು ಹೆತ್ತು ಬೆಳೆಸಬೇಕೆಂಬುದು ನಮಗೆ ಕೊಡಲ್ಪಟ್ಟ ಕರ್ತವ್ಯವಾಗಿದೆ. ಅದು ದೇವರ ನಿಯಮ. ಆದರೆ ಇತ್ತೀಚೆಗೆ ಮನುಷ್ಯರು ಇದನ್ನು ಬದಲಾಯಿಸುತ್ತಿದ್ದಾರೆ. ದಾಂಪತ್ಯಕ್ಕೆ ಹೊರತಾದ ಸಂಬಂಧ, ಮದುವೆಯಿಲ್ಲದೆ ಸಂಬಂಧ ಬೆಳೆಸುವುದು, ಬಯಸಿದ ವ್ಯಕ್ತಿಯೊಂದಿಗೆ Live in Relationship ಎಂಬ ಹೆಸರಿನಲ್ಲಿ ಇದ್ದು ಬಿಟ್ಟು, ನಂತರ ಬೇರ್ಪಡುವುದು, ಸಲಿಂಗಕಾಮ ಹೀಗೆ ಹಲವು ಪಾಪಗಳಲ್ಲಿ ಮಾನವ ಜನಾಂಗ ಸಿಕ್ಕಿಬಿದ್ದಿದೆ. ಇದು ಪ್ರಸ್ತುತ ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುತ್ತಿದೆ. ಇದು ನಮ್ಮ ದೇಶದಲ್ಲಿ ನುಸುಳಿ ಸಾಮಾನ್ಯ ಸಂಗತಿಯಾಗಿದೆ. ಆದರೆ ಇವುಗಳು ದೇವರಿಗೆ ಅಸಹ್ಯಕರವೆಂದು ನಾವು ಮರೆಯಬಾರದು.

 

ಸತ್ಯವೇದದಲ್ಲಿ ಇದಕ್ಕೆ ಅನೇಕ ಉದಾಹರಣೆಗಳಿವೆ. ಹಳೇ ಒಡಂಬಡಿಕೆಯ ಕಾಲದಲ್ಲಿ ಬಹುಪತ್ನಿತ್ವವು ಸ್ವೀಕಾರಾರ್ಹವಾಗಿದ್ದರೂ, ಅದು ದೇವರಿಗೆ ಇಷ್ಟವಾಗಿರಲಿಲ್ಲ. ದಾವೀದನು ಬತ್ಷೆಬಳೊಂದಿಗೆ ಮಾಡಿದ ಪಾಪದ ಫಲಿತಾಂಶವು ನಮಗೆ ತಿಳಿದಿದೆ. ಅಂತೆಯೇ, ಹೊಸ ಒಡಂಬಡಿಕೆಯ ಕಾಲದಲ್ಲಿ ಒಬ್ಬನಿಗೆ ಒಬ್ಬಳು ಎಂಬುದು ನೇಮಿಸಲಾಗಿತ್ತು. ಅದರ ಹೊರತಾಗಿ ಮದುವೆಯ ನಂತರ ಬೇರ್ಪಡುವುದು ಮತ್ತು ಮರುಮದುವೆಯಾಗುವುದು ದೇವರ ದೃಷ್ಟಿಯಲ್ಲಿ ಸ್ವೀಕಾರಾರ್ಹವಲ್ಲ. ಸಲಿಂಗಕಾಮದ ಪಾಪದಿಂದಾಗಿ ಸೊದೋಮ್ ಗೊಮೊರಾಗೆ ಸಂಭವಿಸಿದ ಕಾರ್ಯಗಳೂ ನಮಗೆ ಗೊತ್ತು! ಅಂತಹ ಜನರು ತಮ್ಮ ಆತ್ಮ ಮತ್ತು ದೇಹಗಳನ್ನು ಕೆಟ್ಟ ಕಾಮಕ್ಕೆ ಒಪ್ಪಿಸಿದ್ದಾರೆ. ದೇವರ ಜ್ಞಾನವನ್ನು ಗ್ರಹಿಸುವ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಕೆಟ್ಟ ಆಲೋಚನೆಗಳಿಗೆ ಒಪ್ಪಿಸಿಬಿಟ್ಟರು ಎಂದು ಸತ್ಯವೇದವು ಹೇಳುತ್ತಿದೆ.

 

ಪ್ರೀತಿಯ ಯೌವನಸ್ಥ ಮಕ್ಕಳೇ! ಇಂತಹ ಸಾವಿನ ಬಲೆಗಳಲ್ಲಿ ಸಿಲುಕಿಕೊಳ್ಳಬೇಡಿರಿ, ದೇವರನ್ನು ಹಿಡಿದುಕೊಳ್ಳಿರಿ. Social media ಮತ್ತು ವೆಬ್‌ಸೈಟ್‌ಗಳ ಮೂಲಕ ವಿರುದ್ಧ ಲಿಂಗದೊಂದಿಗೆ ಸಂವಹನ ನಡೆಸುವುದು ಸುಲಭ. ಆದರೆ ದೇವರ ನಿಯಮವೆಂದರೆ ಮದುವೆಯ ನಂತರ ಸ್ನೇಹ. ಪುರುಷನು ತನ್ನ ಸ್ವಂತ ಹೆಂಡತಿಯನ್ನು ಮತ್ತು ಅವಳು ತನ್ನ ಸ್ವಂತ ಗಂಡನನ್ನು ಹಿಡಿದುಕೊಂಡಿರುವಂತೆ ಸತ್ಯವೇದವನ್ನು ಧ್ಯಾನಿಸಿ ಎಂದು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತಿದೆ. ಆದ್ದರಿಂದ ಸತ್ಯವೇದವನ್ನು ಧ್ಯಾನಿಸಿ ದೇವರನ್ನು ಹಿಡಿದುಕೊಳ್ಳಿರಿ. ಕೆಟ್ಟ ಆಲೋಚನೆಗಳಿಂದ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿರಿ. ಆಮೆನ್.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಎಲ್ಲಾ ಸೇವೆಗಳಲ್ಲಿ ಕರ್ತನು ತನ್ನ ಬಲವನ್ನು ಪ್ರಕಟಗೊಳಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet