Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.07.2022 (Kids Special)
Share:

By Village Missionary Movement

Sunday, 31-Jul-2022

ಧೈನಂದಿನ ಧ್ಯಾನ(Kannada) – 31.07.2022 (Kids Special)

 

ಕೈಲಾದಷ್ಟು ಮಾಡು

 

 "...ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ" - ಮಾರ್ಕನು 16:15

 

ಶರಣ್‌ ಎಂಬ ಪುಟ್ಟ ತಮ್ಮನಿಗೆ ಎರಡೂ ಕಾಲುಗಳೂ ಇಲ್ಲದೆ ಕುಂಟನಾಗಿದ್ದನು. ನಡೆದಾಡಲು ಸಾಧ್ಯವಾಗದ ಅವನನ್ನು ನಿರುಪಯುಕ್ತ ಎಂದು ಪರಿಗಣಿಸಿದ ಅವನ ಮನೆಯವರು ತಿಳಿಯದ ಒಂದು ಊರಿನ ಬಸ್ ನಿಲ್ದಾಣದಲ್ಲಿ ಬಿಟ್ಟು ಹೊರಟುಹೋದರು. ಯಾರಾದರೂ ದಯೆಯಿಟ್ಟು ಊಟ ಕೊಟ್ಟರೆ ಮಾತ್ರವೇ ಆ ದಿನ ಅವನ ಹೊಟ್ಟೆ ತುಂಬುತ್ತಿತ್ತು. ಬಿಸಿಲು, ಮಳೆ, ಚಳಿ ಇವೇ ಅವನಿಗೆ ಜೊತೆಯಾಗಿದ್ದವು. ಹೀಗೆಯೇ ಕೆಲವು ವಾರಗಳು ಕಳೆದವು. ಅವನ ಜೀವನದಲ್ಲಿ ಒಂದು ದಿನ ಉದಯ ಮೂಡಿತು. ಕಸದಲ್ಲಿರುವ ವಸ್ತುಗಳನ್ನು ಆಯ್ದುಕೊಂಡು ಅದನ್ನು ಮಾರಿ ಬದುಕುವ ವಯಸ್ಸಾದ ತಾಯಿಯೊಬ್ಬರು ಅವನನ್ನು ನೋಡಿ ಕರುಣೆ ತೋರಿ ತನ್ನ ಚಿಕ್ಕ ಛಾವಣಿಯ ಮನೆಗೆ ಕರೆದುಕೊಂಡು ಹೋದರು. ಅವರು ಅವನಿಗೆ ಪ್ರತಿದಿನ ಪ್ರೀತಿಯಿಂದ ಊಟ ಕೊಡುತ್ತಿದ್ದರು. ನಿಜವಾದ ಕಾಳಜಿಯಿಂದ ಗಮನಿಸಿದರು. ಇವರು ಯೇಸುವಿನ ಮಗಳಾಗಿದ್ದದರಿಂದ, ಪ್ರತಿದಿನ ಸತ್ಯವೇದವನ್ನು ಓದುತ್ತಿದ್ದರು ಮತ್ತು ಪ್ರಾರ್ಥಿಸುತ್ತಿದ್ದರು. ಶರಣ್ ಗೂ ಸಹ ಪ್ರಾರ್ಥಿಸಲು ಕಲಿಸಿಕೊಟ್ಟರು. ಓದಲು ಮತ್ತು ಬರೆಯಲು ಬರದ ಅವನಿಗೆ, ಓದಲು ಕಲಿಸಿ ಸತ್ಯವೇದವನ್ನು ಓದಲು ಕಲಿಸಿದರು. ನಾವು ಕರ್ತನಿಗೋಸ್ಕರ ಏನಾದರೂ ಮಾಡಬೇಕು ಎಂಬ ಭಾರವನ್ನು ಆಗಾಗ ಅವನೊಂದಿಗೆ ಹಂಚಿಕೊಳ್ಳುತ್ತಿದ್ದರು. ಒಂದು ದಿನ ಆ ತಾಯಿ ತೀರಿಕೊಂಡರು. ದುಃಖದಲ್ಲಿದ್ದ ಶರಣ್, ಮಾನವೀಯತೆಯುಳ್ಳ ಒಂದು ವ್ಯಕ್ತಿಯ ಮೂಲಕ ಸರ್ಕಾರಿ ಆಶ್ರಯಕ್ಕೆ ಸ್ಥಳಾಂತರಿಸಲ್ಪಟ್ಟನು. ಅವನಿಗೆ ನೀಡಿದ ಸ್ಥಳವು ಮೊದಲ ಮಹಡಿಯ ಕಿಟಕಿಯ ಪಕ್ಕ. ಆ ಸ್ಥಳದಲ್ಲಿಯೂ ಅವನು ಪ್ರತಿದಿನ ಎಂದಿನಂತೆ ಸತ್ಯವೇದವನ್ನು ಓದುತ್ತಿದ್ದನು ಮತ್ತು ಪ್ರಾರ್ಥಿಸುತ್ತಿದ್ದನು.

 

ಅವನೊಳಗೆ ಕರ್ತನಿಗಾಗಿ ಏನಾದರೂ ಮಾಡಬೇಕೆಂಬ ಯೋಚನೆ ಅವನ ಮನದಲ್ಲಿ ಬರುತ್ತಲೇ ಇತ್ತು. ಆದರೆ ಈ ಪರಿಸ್ಥಿತಿಯಲ್ಲಿ ಕ್ರಿಸ್ತನಿಗಾಗಿ ನಾನು ಏನು ಮಾಡಬಲ್ಲೆ ಎಂದು ಯೋಚಿಸಿ ಅವನು ಬೇಸರವಾಗಿದ್ದನು. ಒಂದು ದಿನ ತನ್ನನ್ನು ನೋಡಿಕೊಳ್ಳಲು ಬಂದ ವ್ಯಕ್ತಿಯ ಬಳಿ ನೋಟು ಮತ್ತು ಪೆನ್ನು ಕೇಳಿದನು. ಪ್ರತಿದಿನ ಅವನು ಒಂದು ಕಾಗದದ ಮೇಲೆ ಸತ್ಯವೇದದ ಒಂದು ವಾಕ್ಯವನ್ನು ಬರೆದು ಆ ಹಾಳೆಯನ್ನು ಸುತ್ತಿ ಕಿಟಕಿಯ ಮೂಲಕ ಕೆಳಗೆ ಎಸೆಯುತ್ತಿದ್ದನು. ಅದೇ ಅವನು ಮಾಡಿದ ಸೇವೆ. ಒಂದು ದಿನ, ಒಬ್ಬ ಯೌವನಸ್ಥ ಹುಡುಗಿ ಒಂಟಿತನದಿಂದ ತುಂಬಾ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಆ ಮಾರ್ಗದಲ್ಲಿ ಹೋಗುತ್ತಿದ್ದಳು. ಆ ವೇಳೆ ಶರಣ್ ಬರೆದು ಎಸೆದಿದ್ದ ವಾಕ್ಯ ಆ ಹುಡುಗಿಯ ತಲೆಯ ಮೇಲೆ ಬೀಳಲು ಅವಳು ಅದನ್ನು ಎತ್ತಿಕೊಂಡು ಬಿಡಿಸಿ ಓದಿದಳು. ಅದರಲ್ಲಿ "ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ” ಎಂಬ ವಾಕ್ಯ ಬರೆಯಲಾಗಿತ್ತು. ಅವಳು ಅದನ್ನು ಓದಿ ಧೈರ್ಯ ತಂದುಕೊಂಡು ಮನಸ್ಸು ಬದಲಾಯಿಸಿಕೊಂಡು ಮನೆಗೆ ಹೋದಳು. ಅವಳ ಜೀವನ ಬದಲಾಯಿತು. ಯಾರಿಗೂ ಪ್ರಯೋಜನವಿಲ್ಲದ ಶರಣ್ ಹೀಗೆ ಎಷ್ಟೋ ಜನರಿಗೆ ಆಶೀರ್ವಾದ ಕಾರಣವಾಗಿದ್ದನು. 

 

ಪ್ರೀತಿಯ ತಮ್ಮ, ತಂಗಿ ನೀನು ಯೇಸುವಿಗಾಗಿ ಏನಾದರೂ ಮಾಡಿದ್ದೀಯ ಎಂದು ಯೋಚಿಸಿ ನೋಡು. ನಡೆಯಲು ಸಾಧ್ಯವಿಲ್ಲದ ಶರಣ್ ಯೇಸಪ್ಪನಿಗೆ ಸೇವೆ ಮಾಡಲು ಸಾಧ್ಯವಾಯಿತೆಂದರೆ, ನೀನು ಸುಮ್ಮನೆ ಇರಬಹುದಾ? ನಿನ್ನಿಂದ ಸಾಧ್ಯವಾದ ಸೇವೆಯನ್ನು ಮಾಡಲು ಪ್ರಾರಂಭಿಸು, ಸರೀನಾ!

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş marsbahis casibom casibom giriş holiganbet holiganbet giriş jojobet jojobet giriş alobet alobet giriş amgbahis amgbahis giriş sweet bonanza tlcasino amgbahis holiganbet wbahis casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin superbetin giriş marsbahis marsbahis giriş