Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.07.2022
Share:

By Village Missionary Movement

Tuesday, 26-Jul-2022

ಧೈನಂದಿನ ಧ್ಯಾನ(Kannada) – 27.07.2022

 

ಕೋಪ

 

"ಆಗ ಕರ್ತನು ಕಾಯಿನನಿಗೆ--ಯಾಕೆ ಕೋಪಗೊಂಡಿದ್ದೀ? ಯಾಕೆ ನಿನ್ನ ಮುಖವು ಕಳೆಗುಂದಿತು?” - ಆದಿಕಾಂಡ 4:6

 

ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ ವಯಸ್ಸಾದ ಒಂದು ವ್ಯಕ್ತಿಯನ್ನು ಬರ್ಬರವಾಗಿ ಇರಿದು ಕೊಂದಿದ್ದರು. ನಂತರ ಪೊಲೀಸರು ಆಕೆಯನ್ನು ನಿವೃತ್ತ ಶಿಕ್ಷಕಿ ಮರಿಯಾ ವೆರ್ಲಿಂಟನ್ ಎಂದು ಗುರುತಿಸಿದರು. ನವೆಂಬರ್ ತಿಂಗಳು 2020 ರಲ್ಲಿ ನಡೆದ ಈ ಕೊಲೆಯಲ್ಲಿ ಹಲವಾರು ದಿನಗಳ ನಂತರ, ಉವೆಂಟ್ಸ್‌ ಎಂಬ ಕೊಲೆಗಾರರನ್ನು ಬಂಧಿಸಲಾಯಿತು, ಕೊಲೆಗಾರನು ತಪ್ಪೊಪ್ಪಿಕೊಂಡು ಹೇಳಿದ ಮಾತುಗಳು ಎಲ್ಲರಿಗೂ ಆಘಾತವನ್ನುಂಟು ಮಾಡಿತು.

 

ಹತ್ಯೆಗೀಡಾದ ವೆರ್ಲಿಂಟನ್ ತನ್ನ ಒಂದನೇ ತರಗತಿಯ ಶಿಕ್ಷಕರೆಂದು ಮತ್ತು ಒಂದು ಬಾರಿ ತರಗತಿಯ ಸಮಯದಲ್ಲಿ ಸಹ ವಿದ್ಯಾರ್ಥಿಗಳ ನಡುವೆ ತನ್ನನ್ನು ಕಠಿಣವಾಗಿ ಬೈದು ಪರಿಹಾಸ್ಯ ಮಾಡಿದ್ದನ್ನು ತನ್ನಿಂದ ಸಹಿಸಲಾಗಲಿಲ್ಲ ಎಂದು ಉವೆಂಡ್ಟ್ಸ್ ಹೇಳಿದನು. ಶಿಕ್ಷಕರ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂಬ ಆಲೋಚನೆ ನನ್ನಲ್ಲಿ ಕುದಿಯುತ್ತಿತ್ತು. ಒಮ್ಮೆ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ನೋಡಿದ ಕೂಡಲೇ ನನ್ನಿಂದ ನನ್ನನ್ನು ನಿಯಂತ್ರಿಕೊಳ್ಳಲು ಸಾಧ್ಯವಾಗಲಿಲ್ಲ. ತನ್ನ ದೇಹಕ್ಕೆ ಚಾಕುವಿನಿಂದ 101 ಬಾರಿ ಇರಿದು ಕೊಲೆಮಾಡಿದೆ ಎಂದು ತಪ್ಪೊಪ್ಪಿಕೊಂಡನು. ಇದರಲ್ಲಿ ತಮಾಷೆಯ ವಿಷಯವೆಂದರೆ "ಉವೆಂಡ್ಸ್ ಭಕ್ತಿಯುಳ್ಳ ಕ್ರೈಸ್ತನೆಂದೂ, ನಿರಾಶ್ರಿತ ಸರಳ ಜನರಿಗೆ ತನ್ನಿಂದ ಸಾಧ್ಯವಾದದ್ದನ್ನು ಕೊಟ್ಟು ಸಹಾಯ ಮಾಡುತ್ತಾರೆ" ಎಂದು ಉವೆಂಡ್ಸ್‌ನ ಅಕ್ಕಪಕ್ಕದ ಮನೆಯವರು ಹೇಳುತ್ತಾರೆ. 30 ವರ್ಷಗಳ ನಂತರ ಸೇಡು ತೀರಿಸಿಕೊಂಡ ಈ ಘಟನೆ ನಮಗೊಂದು ಪಾಠ ಕಲಿಸುತ್ತಿದೆ.

 

ಪರಿಶುದ್ಧ ಗ್ರಂಥದಲ್ಲಿ ಆದಿಕಾಂಡ 4 ನೇ ಅಧ್ಯಾಯದಲ್ಲಿ ನಡೆದ ಒಂದು ಕೊಲೆಯ ಬಗ್ಗೆ ನಾವು ಅಲ್ಲಿ ಓದುತ್ತೇವೆ. ತನ್ನ ಕಾರ್ಯಗಳು ಕೆಟ್ಟದ್ದೆಂದು ತಿಳಿದಿದ್ದರೂ ಅವನ ಸಹೋದರನಾದ ಹೇಬೆಲನನ್ನು ಸೇಡಿನಿಂದ ಕಾಯಿನನು ಕೊಲೆಮಾಡಿದನು. ಯಾವುದೇ ಮನುಷ್ಯನಾದರೂ ಕೋಪ, ಸೇಡು ಎಂಬ ಸ್ವಭಾವಕ್ಕೆ ಸ್ಥಳ ಕೊಡುವುದಾದರೆ ಅಲ್ಲಿ ಕೊಲೆಪಾತಕಗಳು ತುಂಬಿ ಕಾಣುತ್ತವೆ. ಕಹಿ, ಕೋಪ ಮತ್ತು ಸೇಡು ಇಂತಹ ಲಕ್ಷಣಗಳು ಸೈತಾನನದಾಗಿವೆ. ಅಪೊ. ಪೌಲನು ಎಫೆಸದವರಿಗೆ ಬರೆಯುವಾಗ, "ಸೈತಾನನಿಗೆ ಸ್ಥಳ ಕೊಡಬೇಡಿರಿ" ಎಂದು ಬರೆಯುತ್ತಾರೆ. ಸ್ವಭಾವಗಳಲ್ಲಿ ತಪ್ಪು ಮಾಡುವವರು ತಮ್ಮ ಆಯುಷ್ ದಿನಗಳನ್ನು ಕಳೆದುಕೊಳ್ಳುತ್ತಾರೆ. ಸತ್ಯವೇದದಲ್ಲಿ ಅದಕ್ಕೆ ಅನೇಕ ಘಟನೆಗಳನ್ನು ಹೇಳಬಹುದು. ಗಲಾತ್ಯ 5:22, 23 ರಲ್ಲಿ ಹೇಳಿರುವಂತೆ ಆತ್ಮದ 9 ಫಲಗಳನ್ನು ಪಡೆದುಕೊಂಡು ಅದರಲ್ಲಿ ಸಮೃದ್ಧಿಯಾಗಿ ಬೆಳೆಯುವಂತೆ ಜಾಗರೂಕರಾಗಿರೋಣ. ದೇವರು ನಮಗೆ ಸಹಾಯ ಮಾಡಲಿ! ಆಮೆನ್!

- P.ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಹೋಪ್ ಟಿವಿ, ಸತ್ಯಂ ಟಿವಿ ಮತ್ತು ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾಗುವ ನಮ್ಮ “ಹಳ್ಳಿ ಸಮಯ” ಎಂಬ ಕಾರ್ಯಕ್ರಮದ ಮೂಲಕ ದೇವರಿಗಾಗಿ ಕೆಲಸ ಮಾಡುವ ಅನೇಕ ಜನರನ್ನು ದೇವರು ಎಬ್ಬಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al