Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.07.2022
Share:

By Village Missionary Movement

Monday, 25-Jul-2022

ಧೈನಂದಿನ ಧ್ಯಾನ(Kannada) – 26.07.2022

 

ಬಚ್ಚಿಟ್ಟಿದ ಸಂಪತ್ತು

 

 "...ಪರಲೋಕರಾಜ್ಯವು ಹೊಲದಲ್ಲಿ ಬಚ್ಚಿಟ್ಟಿದ ಸಂಪತ್ತಿಗೆ ಹೋಲಿಕೆಯಾಗಿದೆ;..." - ಮತ್ತಾಯ 13:44

 

ಇಂಗ್ಲೆಂಡಿನಲ್ಲಿ ಪೀಟರ್ ವಾರ್ಟ್ಲಿಂಗ್ ಎಂಬ ರೈತ ವಾಸಿಸುತ್ತಿದ್ದರು. ಒಂದು ದಿನ ಅವರು ತನ್ನ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹೊಲದಲ್ಲಿ ಸುತ್ತಿಗೆಯನ್ನು ಕಳೆದುಕೊಂಡರು. ಅದನ್ನು ಹಾಗೇ ಬಿಟ್ಟುಬಿಟ್ಟರೆ ಉಳುಮೆ ಮಾಡುವ ಯಂತ್ರಗಳಿಗೆ ಏನಾದರೂ ಹಾನಿಯಾಗಬಹುದು ಎಂದುಕೊಂಡು ಅದನ್ನು ಹುಡುಕುವ ಪ್ರಯತ್ನ ಮಾಡಿದರು. ತನ್ನ ಸ್ನೇಹಿತ ಎರಿಕ್ ಜೊತೆ, ವಿಶಾಲವಾದ ಜಮೀನಿನಲ್ಲಿ ಉಪಕರಣಗಳೊಂದಿಗೆ ಸುತ್ತಿಗೆಯನ್ನು ಹುಡುಕಲು ಪ್ರಾರಂಭಿಸಿದರು, ಆದರೆ ಅವರು ಹುಡುಕುತ್ತಿದ್ದ ಸುತ್ತಿಗೆ ಎಲ್ಲಿಯೂ ಕಂಡುಬಂದಿಲ್ಲ. ಆದರೆ 24 ಕಂಚಿನ ನಾಣ್ಯಗಳು, 565 ಚಿನ್ನದ ನಾಣ್ಯಗಳು, 15,000 ಬೆಳ್ಳಿ ನಾಣ್ಯಗಳು ಮತ್ತು 200 ಬಗೆಯ ಆಭರಣಗಳು ಪತ್ತೆಯಾದವು

 

ಕಾನೂನಿನ ಪ್ರಕಾರ ಮೊದಲು ಪೊಲೀಸರಿಗೆ ಮಾಹಿತಿ ನೀಡಿದರು. ಮರುದಿನ ತಜ್ಞರ ತಂಡವು ಅಲ್ಲಿಗೆ ಬಂದು ತನಿಖೆ ನಡೆಸುತ್ತಿದ್ದಾಗ ಕಾಣೆಯಾದ ಸುತ್ತಿಗೆಯು ಸಿಕ್ಕಿತು. ಇಂತಹ ನಿಧಿಯನ್ನು ಹುಡುಕುವವರಿಗೆ ದೊರೆತ ವಸ್ತುಗಳ ಮಾರುಕಟ್ಟೆಯ ಮೌಲ್ಯವನ್ನು ಕೊಟ್ಟು ಸನ್ಮಾನಿಸಬೇಕು. ಆ ರೀತಿ ಅವರಿಗೆ ದೊರೆತ ಒಂದು ಕೋಟಿ ಹಣವನ್ನು ಪೀಟರ್ ಮತ್ತು ಅವರಿಗೆ ಸಹಾಯ ಮಾಡಿದ ಎರಿಕ್ ಇಬ್ಬರೂ ಹಂಚಿಕೊಂಡರು.

 

ಈ ನಿಧಿಯನ್ನು ಕಂಡುಹಿಡಿದವರ ಸಂತೋಷಕ್ಕೆ ಮಿತಿಯೇ ಇಲ್ಲ ಅಲ್ವಾ? ದೇವರು ಇದಕ್ಕಿಂತ ದೊಡ್ಡ ನಿಧಿಯನ್ನು ನಮಗಾಗಿ ಪರಲೋಕದಲ್ಲಿಟ್ಟಿದ್ದಾರೆ. ಪರಲೋಕರಾಜ್ಯವು ಹೊಲದಲ್ಲಿ ಬಚ್ಚಿಟ್ಟಿದ ಸಂಪತ್ತಿಗೆ ಹೋಲಿಕೆಯಾಗಿದೆ ಎಂದು ಯೇಸು ಕ್ರಿಸ್ತನು ಹೇಳಿದರು. ಅದನ್ನು ಕಂಡುಹಿಡಿದವರು ಆ ನಿಧಿಯನ್ನು ಪಡೆದ ಸಂತೋಷಕ್ಕಿಂತ 1000 ಪಟ್ಟು ಹೆಚ್ಚು ಸಂತೋಷಪಡುತ್ತಾರೆ. ಈ ನಿಧಿಯನ್ನು ಪಡೆಯಲು ಒಂದೇ ಒಂದು ಷರತ್ತು ಇದೆ. ಅದು ಯೇಸುಕ್ರಿಸ್ತನ ಅಮೂಲ್ಯವಾದ ರಕ್ತದಿಂದ ಪಾಪ ನೀಗಲು ತೊಳೆಯಲ್ಪಡಬೇಕು ಹಾಗೆ ತೊಳೆಯಲ್ಪಟ್ಟರೆ ಆತನ ಕೃಪೆಯ ಮಹಾ ಉನ್ನತವಾದ ಸಂಪತ್ತನ್ನು ಕಂಡು ಹಿಡಿದು ಬಿಟ್ಟರೆ, ಈ ಪ್ರಪಂಚ, ಅದರ ಹಣ, ಅದರ ಸಂಪತ್ತು ಮತ್ತು ಅದರ ಎಲ್ಲಾ ಪ್ರಭಾವವು ನಮಗೆ ಕಸದಂತೆ ತೋರುತ್ತದೆ. ನಿಜ ಹೇಳಬೇಕೆಂದರೆ ಪರಲೋಕದಲ್ಲಿ ಅವೆಲ್ಲವುಗಳಿಗೆ ಯಾವ ಬೆಲೆಯೂ ಇಲ್ಲ ಎಂಬುದು ಅರ್ಥವಾಗುತ್ತದೆ. 

 

ನೀವು ಯೇಸುಕ್ರಿಸ್ತನ ರಕ್ತದಿಂದ ತೊಳೆಯಲ್ಪಟ್ಟಿದ್ದೀರಾ? ಆತನ ರಕ್ತವು ಸಕಲ ಪಾಪಗಳನ್ನು ತೊಳೆದು ನಮ್ಮನ್ನು ಶುದ್ಧಗೊಳಿಸುತ್ತದೆ. ಆತನ ನಿರ್ಮಲ ರಕ್ತವು ಮಾತ್ರವೇ ನಮ್ಮ ಪಾಪಗಳಿಂದ ನಮ್ಮನ್ನು ಶುದ್ಧೀಕರಿಸಬಲ್ಲದು. ಪರಲೋಕ ರಾಜ್ಯಕ್ಕೆ ನಮ್ಮನ್ನು ಅರ್ಹರನ್ನಾಗಿ ಮಾಡುತ್ತದೆ. ಇಂದೇ ನಮ್ಮನ್ನು ತೊಳೆಯಲ್ಪಡುವಂತೆ ಅರ್ಪಿಸಿಕೊಳ್ಳೋಣ. ಆತನು ನಮ್ಮನ್ನು ಶುದ್ಧೀಕರಿಸುವರು. ಪರಲೋಕ ರಾಜ್ಯದ ನಿಧಿಯನ್ನು ಕೊಡುತ್ತಾರೆ!

- Bro. ಹನೀಸ್ ಸಮುವೇಲ್

 

ಪ್ರಾರ್ಥನಾ ಅಂಶ:

ಪ್ರಾರ್ಥನೆ ಮತ್ತು ಕಾಣಿಕೆಗಳೊಂದಿಗೆ ನಮ್ಮ ಸೇವೆಗಳನ್ನು ಬೆಂಬಲಿಸುತ್ತಿರುವ ಪಾಲುದಾರರ ಮಕ್ಕಳ ವಿಧ್ಯಾಭ್ಯಾಸ, ವ್ಯಾಪಾರ ಮತ್ತು ಕೆಲಸ ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al