Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.07.2022 (Youth Special)
Share:

By Village Missionary Movement

Sunday, 24-Jul-2022

ಧೈನಂದಿನ ಧ್ಯಾನ(Kannada) – 25.07.2022 (Youth Special)

 

ಇದು ವಿಚಿತ್ರ ಅಲ್ವಾ?

 

"...ಆತನು ಅದನ್ನು ತಿಳಿದು - ರೊಟ್ಟಿಯಿಲ್ಲವಲ್ಲಾ ಎಂದು ಮಾತಾಡಿಕೊಳ್ಳುವದೇಕೆ? ನೀವು ಇನ್ನೂ ಗ್ರಹಿಸಲಿಲ್ಲವೋ? ತಿಳುವಳಿಕೆ ಬರಲಿಲ್ಲವೋ ನಿಮ್ಮ ಮನಸ್ಸು ಕಲ್ಲಾಗಿದೆಯೋ?” - ಮಾರ್ಕನು 8:17,18

 

1. ಆಲಯದಲ್ಲಿ ಕಾಣಿಕೆ ಹಾಡು ಹಾಡುವಾಗ ಶರ್ಟ್ ಜೇಬಿನಲ್ಲಿ 10 ರೂಪಾಯಿ ಇಲ್ಲದ ಕಾರಣ 50 ರೂಪಾಯಿ ಅರ್ಪಿಸುವಾಗ ನಮಗೆ ಆ ಹಣ ದೊಡ್ಡದಾಗಿ ಕಾಣುತ್ತದೆ. ಆದರೆ ಸ್ನೇಹಿತರೊಂದಿಗೆ ಶಾಪಿಂಗ್ ಮಾಲ್‌ಗೆ ಹೋಗುವಾಗ, ಅದೇ ಮೊತ್ತವು ತುಂಬಾ ಕ್ಷುಲ್ಲಕವಾಗಿ ತೋರುತ್ತದೆ! ಇದು ವಿಚಿತ್ರ ಅಲ್ವಾ?

 

2. ಆಲಯಕ್ಕೆ ಹೋಗಿ 2 ½ ಗಂಟೆಗಳ ಕಾಲ ಆರಾಧನೆಯಲ್ಲಿ ಕುಳಿತುಕೊಳ್ಳುವಾಗ ಅದು ನಮಗೆ ಬಹಳ ಸಮಯ ಎಂದು ತೋರುತ್ತದೆ. ಆದರೆ ಚಲನಚಿತ್ರವನ್ನು ನೋಡುವಾಗ, ಅದೇ 2 ½ ಗಂಟೆಗಳು ತುಂಬಾ ಚಿಕ್ಕದಾಗಿ ಕಾಣುತ್ತದೆ! ಇದು ವಿಚಿತ್ರ ಅಲ್ವಾ?

 

3. ಬೈಬಲ್‌ನಲ್ಲಿ ಒಂದು ಅಧ್ಯಾಯವನ್ನು ಓದುವಷ್ಟರಲ್ಲಿ ಬೇಸರವಾಗಿಬಿಡುತ್ತದೆ. ಆದರೆ ನೂರಾರು ಪುಟಗಳನ್ನು ಕಾದಂಬರಿ ಮತ್ತು ಕಥೆ ಪುಸ್ತಕಗಳನ್ನು ಓದುವುದು ಎಂದಿಗೂ ಬೇಸರವಾಗುವುದಿಲ್ಲವಲ್ಲಾ! ಇದು ವಿಚಿತ್ರ ಅಲ್ವಾ?

 

4. ಎರಡು ವಾರಗಳ ಮುಂಚಿತವಾಗಿ ನಾವು ಸಭೆಯಲ್ಲಿ ವಿಶೇಷ ಸಭೆಯ ಘೋಷಣೆಯನ್ನು ಕೇಳಿದ್ದರೂ, ನಾವು ಕೊನೆಯ ಕ್ಷಣದಲ್ಲಿ ಯಾವುದಾದರೂ ಪಾರ್ಟಿ ಇದ್ದರೆ ಸಭೆಯನ್ನು ಬಿಟ್ಟುಬಿಡುತ್ತೇವೆ! ಇದು ವಿಚಿತ್ರ ಅಲ್ವಾ?

 

5. ಕಾಲೇಜು ಮುಗಿದ ನಂತರ 15 ನಿಮಿಷಗಳ ಪ್ರಾರ್ಥನಾ ಗುಂಪಿಗೆ ನಮ್ಮನ್ನು ಆಹ್ವಾನಿಸುವ ಸ್ನೇಹಿತೆಗೆ "ಬಸ್ ಹೋಗಿಬಿಡುತ್ತದೆ" ಎಂದು ಹೇಳಿ ಹೆಗಲ ಮೇಲೆ ಬ್ಯಾಗ್‌ ಹಾಕಿಕೊಂಡು ವೇಗವಾಗಿ ಹೋಗುವ ನಾವು, ಸ್ನೇಹಿತೆಯ ಬರ್ತಡೇ ದಿನದಂದು ಮಾತ್ರ ಹಾಗೆ ಹೇಳುವದಿಲ್ಲವೇ! ಇದು ವಿಚಿತ್ರ ಅಲ್ವಾ?

 

6. ಪತ್ರಿಕೆ, ದೂರದರ್ಶನದ ಸುದ್ದಿಗಳನ್ನು ನಂಬುವ ನಮಗೆ ಸತ್ಯವೇದದಲ್ಲಿ ಹೇಳಿರುವ ವಿಷಯಗಳ ಬಗ್ಗೆ ಮಾತ್ರ ಸಂಶಯವಿರುವುದು ವಿಚಿತ್ರವಲ್ಲವೇ?

 

7. ಒಬ್ಬ ಬಸ್ ಡ್ರೈವರ್ ಅನ್ನು ನಂಬಿ ಧೈರ್ಯದಿಂದ ಬಸ್ ಹತ್ತುತ್ತೇವೆ, ನಮ್ಮನ್ನು ಸೃಷ್ಟಿಸಿದ ದೇವರನ್ನು ನಂಬಿ ನಮ್ಮ ಪ್ರಾಣವನ್ನು ಅವರ ಕೈಯಲ್ಲಿ ಇಡಲು ಹಿಂಜರಿಯುತ್ತೇವೆ! ಇದು ವಿಚಿತ್ರ ಅಲ್ವಾ?

 

8. ಮನೆ ಖರ್ಚಿಗೆ ಕೇಳುವ ಅಮ್ಮನಿಗೆ 100 ರೂಪಾಯಿ ಕೊಡಲು ಯೋಚಿಸಿದಾಗಲೆಲ್ಲ ಹೆಲ್ಮೆಟ್ ಹಾಕದ ಪೊಲೀಸರಿಗೆ 100 ರೂಪಾಯಿ ಕೊಡುತ್ತೇವೆ. ಇದು ವಿಚಿತ್ರ ಅಲ್ವಾ?

 

9. ಆಲಯದಲ್ಲಿ ಆಧ್ಯಾತ್ಮಿಕ ಪುಸ್ತಕ ಖರೀದಿಸಲು ಯಾರಾದರೂ ಕೇಳಿದರೆ, "ಅವರು ಮನೆಯಲ್ಲಿ ಹೆಚ್ಚುವರಿ ಹಣ ನೀಡುವುದಿಲ್ಲ" ಎಂದು ನಾವು ಹೇಳುತ್ತೇವೆ, ಆದರೆ ನಾವು ಇತ್ತೀಚಿನ ಮಾದರಿಯಲ್ಲಿ ಡ್ರೆಸ್ ಹೊಲಿಯಲು 500, 600 ರೂ ಕೊಡುತ್ತೇವೆ! ಇದು ವಿಚಿತ್ರ ಅಲ್ವಾ?

 

10. ನಾವು ಹೇಗಾದರೂ ಪರಲೋಕದಲ್ಲಿ ಒಂದು ಸ್ಥಾನ ಪಡೆಯಬೇಕಾದರೆ, ಸಾಯಲು ಬಯಸುವುದಿಲ್ಲವೇ! ಇದು ವಿಚಿತ್ರದಲ್ಲೂ ವಿಚಿತ್ರವಲ್ಲವೇ?

- Sis.ಕೋಕಿಲಾ

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಡಾರದ ಕಾರ್ಯಗಳು ಶೀಘ್ರದಲ್ಲಿಯೇ ಮುಗಿದು ದೇವರ ನಾಮ ಮಹಿಮೆಗಾಗಿ ಪ್ರತಿಷ್ಟೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet