Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.07.2022 (Kids Special)
Share:

By Village Missionary Movement

Sunday, 24-Jul-2022

ಧೈನಂದಿನ ಧ್ಯಾನ(Kannada) – 24.07.2022 (Kids Special)

 

ನನಗಾಗಿ

 

"ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು..." - ಕೀರ್ತನೆ 138:8

 

ಎಲ್ಲಾ ಪ್ರಾಣಿಗಳು ಒಂದು ದಟ್ಟವಾದ ಕಾಡಿನಲ್ಲಿ ಸಂತೋಷದಿಂದ ವಾಸಿಸುತ್ತಿದ್ದವು. ಕಾಡಿನ ರಾಜ ಯಾರು ಎಂದು ಕೇಳಿದರೆ ಸಿಂಹ ಎನ್ನುತ್ತೀರಿ ಅಲ್ಲವೇ? ಆ ಕಾಡಿನಲ್ಲಿ ಸಿಂಹರಾಜನು ಬಹಳ ಒಳ್ಳೆಯ ರಾಜನಾಗಿದ್ದನು. ಇದು ಯಾವ ಪ್ರಾಣಿಯನ್ನೂ ಕೊಂದು ತಿನ್ನದೇ, ತ್ಯಾಗದಿಂದ ಸತ್ತ ಪ್ರಾಣಿಗಳನ್ನು ಮಾತ್ರ ತಿನ್ನುತ್ತಿತ್ತು. ತನ್ನ ಕಾಡಿನ ಪ್ರಾಣಿಗಳೊಂದಿಗೆ ಐಕ್ಯವಾಗಿತ್ತು. ಆದರೂ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದ್ದುದರಿಂದ ಒಂದು ವಿಶೇಷ ಸಭೆಯನ್ನು ಆಯೋಜಿಸಲಾಯಿತು. ಆ ಕಾಡಿಗೆ ಬೇಟೆಯಾಡಲು ಬರುವ "ಬೇಟೆಗಾರನನ್ನು ಓಡಿಸುವುದು ಹೇಗೆ" ಎಂದು ಪ್ರತಿ ಪ್ರಾಣಿಗಳು ಪರಸ್ಪರ ಮಾತನಾಡಿಕೊಂಡವು. ಹಲವಾರು ಸಲಹೆಗಳನ್ನು ನೀಡಿದರೂ ಸಿಂಹರಾಜನಿಗೆ ಸಮಾಧಾನವಾಗಲಿಲ್ಲ. ಹೇಗಾದರೂ ಮಾಡಿ ನಮ್ಮ ಕಾಡಿನಲ್ಲಿರುವ ಪ್ರಾಣಿಗಳನ್ನು ಉಳಿಸಬೇಕು ಎಂಬ ನಿರ್ಧಾರಕ್ಕೆ ಸಿಂಹರಾಜ ಬಂದನು.

 

“ನಾಳೆ ಬೇಟೆಗಾರನು ಬರುವ ಮೊದಲು ಈ ಸಸ್ಯಗಳ ನಡುವೆ ಅಡಗಿಕೊಳ್ಳಿ ಮತ್ತು ಬೇಟೆಗಾರನ ಮುಂದೆ ಒಂದೇ ಒಂದು ಪ್ರಾಣಿ ಮಾತ್ರ ಒಂಟಿಯಾಗಿ ಹೋಗಬೇಕು. ಬೇಟೆಗಾರನು ಆ ಪ್ರಾಣಿಯ ಮೇಲೆ ಗುರಿಯಿಡುವಾಗ, ನಾವೆಲ್ಲರೂ ಒಟ್ಟಿಗೆ ಸೇರಿ ದಾಳಿ ಮಾಡಿಬಿಡಬೇಕು. “ನಿಮ್ಮಲ್ಲಿ ಮೊದಲು ಯಾರು ಧೈರ್ಯವಾಗಿ ಆ ಬೇಟೆಗಾರನ ಮುಂದೆ ಹೋಗುತ್ತೀರಿ” ಎಂದು ಸಿಂಹರಾಜ ಕೇಳಿದ ಕೂಡಲೇ, ಎಲ್ಲರೂ ನಿಶ್ಯಬ್ದವಾಗಿದ್ದರು “ಸರಿ, ನಾನು ಬೇಟೆಗಾರನ ಮುಂದೆ ನನ್ನ ಏಕೈಕ ಸಿಂಹದ ಮರಿಯನ್ನು ಕಳುಹಿಸುತ್ತೇನೆ” ಎಂದು ಸಿಂಹರಾಜನು ಭರವಸೆ ನೀಡಿದರು. ಸಭೆ ಮುಗಿದ ನಂತರ ಎಲ್ಲಾ ಪ್ರಾಣಿಗಳು ಚದುರಿಹೋದವು.

 

ಮರುದಿನ ಎಲ್ಲಾ ಪ್ರಾಣಿಗಳು ಯೋಜಿಸಿದಂತೆ ಸಿದ್ಧವಾದವು. ಬೇಟೆಗಾರನೂ ಬಂದನು, ಸಿಂಹದ ಮರಿ ಧೈರ್ಯದಿಂದ ಅವನ ಮುಂದೆ ಹೋಯಿತು. ಆಹಾ! ಇಂದು ಬಂದ ಕೂಡಲೇ ಸರಿಯಾದ ಬೇಟೆ ಎಂದುಕೊಂಡು ಬಾಣ ಬಿಟ್ಟನು. ಬಾಣವು ಗುರಿ ತಪ್ಪದೆ ಮರಿಯ ಮೇಲೆ ಬಿತ್ತು. ಅಡಗಿಕೊಂಡಿದ್ದ ಪ್ರಾಣಿಗಳೆಲ್ಲಾ ಬೇಟೆಗಾರನನ್ನು ಹೊಡೆದು ಸಾಯಿಸಿದವು. ಆದರೆ ಸಿಂಹದ ಮರಿಯು ಸತ್ತುಹೋದದ್ದನ್ನು ಕಂಡು ಪ್ರಾಣಿಗಳು ದುಂಖಿಸಿದವು. ರಾಜ ತನ್ನ ಮರಿಯನ್ನು ಕಳೆದುಕೊಂಡರೂ ಕಾಡಿನಲ್ಲಿರುವ ಪ್ರಾಣಿಗಳು ರಕ್ಷಿಸಲ್ಪಟ್ಟವು ಅಂದುಕೊಂಡು ಸಮಾಧಾನ ಪಟ್ಟನು.

 

ಪ್ರೀತಿಯ ತಮ್ಮ-ತಂಗಿ ಕಾಡಿನಲ್ಲಿರುವ ಪ್ರಾಣಿಗಳು ಸುರಕ್ಷಿತವಾಗಿರಬೇಕೆಂದು ಯೋಚಿಸಿ ತನ್ನ ಏಕೈಕ ಮರಿಯನ್ನು ಕಳೆದುಕೊಂಡ ಸಿಂಹರಾಜನಂತೆ, ತಂದೆಯು ಸಹ ನಾವು ಸಂತೋಷವಾಗಿರಬೇಕೆಂದು, ಅವರಿಗೆ ಇಷ್ಟವಾದ ಮಗುವಾಗಿ ಸುರಕ್ಷಿತವಾಗಿರಬೇಕೆಂದು ತನ್ನ ಒಬ್ಬನೇ ಮಗನಾದ ಯೇಸುಕ್ರಿಸ್ತನನ್ನು ಬಲಿಯಾಗಿ ಕೊಟ್ಟರು. ನಿನಗಾಗಿ ಶಿಲುಬೆಯಲ್ಲಿ ಎಲ್ಲವನ್ನೂ ಮಾಡಿ ಮುಗಿಸಿದ ಯೇಸುವಿಗಾಗಿ ನೀನು ಸಹ ಏನಾದರೂ ಮಾಡಲೇ ಬೇಕು. ಏನು ಪುಟಾಣಿಗಳೇ, ಮಾಡುತ್ತೀರ ತಾನೇ!

- Mrs. ಚಿತ್ರಾ ಜಾನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş pokerklas betpas maximcasino pashagaming pashagaming egebet casibom casinolevant virusbet ultrabet grandpashabet royalbet perabet matbet kralbet perabet perabet giriş meritbet meritbet giriş