Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.07.2022
Share:

By Village Missionary Movement

Friday, 22-Jul-2022

ಧೈನಂದಿನ ಧ್ಯಾನ(Kannada) – 23.07.2022

 

ನನ್ನ ಆಸೆ

 

“ಇಲ್ಲದಿರುವದರ ಮೇಲೆ ನಿನ್ನ ದೃಷ್ಟಿಯನ್ನು ಇಡುವಿಯಾ?...ನಿಸ್ಸಂದೇಹವಾಗಿ ಆಕಾಶದ ಕಡೆಗೆ ಹಾರಿಹೋಗುತ್ತದೆ" - ಜ್ಞಾನೋಕ್ತಿ 23:5

 

ನಾನು ಒಂದು ಮೊಬೈಲ್ ಫೋನ್ ಗಾಗಿ ಅನೇಕ ದಿನಗಳಿಂದ ಪ್ರಾರ್ಥಿಸುತ್ತಿದ್ದೇನೆ. ಆದರೆ ನನಗೆ ಅದು ಸಿಗಲಿಲ್ಲ. ನಾನು ಮತ್ತೆ ಪ್ರಾರ್ಥಿಸುತ್ತಲೇ ಇದ್ದೇನೆ. ಆಗ ನನಗೊಂದು ಯೋಚನೆ ಬಂತು. ಒಂದು ಮೊಬೈಲ್ ಫೋನ್‌ ಬೇಕೆಂದು ಪ್ರಾರ್ಥಿಸಿದ ನನಗೆ ಆಧ್ಯಾತ್ಮಿಕ ವರವನ್ನು, ಫಲವನ್ನು ಅಥವಾ ಇನ್ನೂ ದೇವರ ಪ್ರಸನ್ನತೆಯನ್ನು ಪಡೆಯಬೇಕು, ದೇವರ ಮಹಿಮೆಯನ್ನು ನೋಡಬೇಕು ಎಂಬ ಆಸೆಯು ಏಕೆ ಬರಲಿಲ್ಲವೆಂದು ನನ್ನನ್ನು ನಾನೇ ಪ್ರಶ್ನಿಸಿಕೊಂಡೆ. ನಶಿಸಿ ಹೋಗುವ ಒಂದು ವಸ್ತುವಿಗೆ ಕೊಡುವಂತಹ ಪ್ರಾಮುಖ್ಯತೆಯನ್ನು ದೇವರ ವರಕ್ಕೋ, ಫಲಕ್ಕೋ ಕೊಡಲಾಗದೇ ನನ್ನ ಹೃದಯವು ಭೌತಿಕ ವಸ್ತುಗಳನ್ನು ತುಂಬಾ ಬಯಸುತ್ತಿದೆಯಲ್ಲಾ ಎಂದು ಭಾವಿಸಿ ನಾಚಿಕೆಪಟ್ಟೆ.

 

ಅನೇಕ ಬಾರಿ ಕ್ರೈಸ್ತರಾದ ನಾವು ಸಹ, ವಿಶೇಷವಾಗಿ ಸೇವೆಮಾಡುವವರು ಸಹ, ಎಲೀಷನಂತೆ ಬಯಸದೇ ಗೇಹಜಿಯಂತೆ ಯೋಚಿಸುತ್ತಿದ್ದೇವೆ. ನಾವು ಪ್ರಪಂಚದ ವಿಷಯಗಳು ಮತ್ತು ವಸ್ತುಗಳಿಗೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೇವೆ. ಅದನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸುತ್ತೇವೆ. ಆದರೆ ಅಪೊಸ್ತಲನಾದ ಪೌಲನು ಹೇಳುವಾಗ, "ಇಷ್ಟೇ ಅಲ್ಲದೇ, "ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿವಿುತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ" ಎಂದು ಹೇಳುತ್ತಾರೆ. ಅಷ್ಟು ಮಾತ್ರವಲ್ಲದೇ ಅವರು ಹೇಳುವಾಗ "ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ" ಎಂದು ಸಲಹೆ ನೀಡುತ್ತಿದ್ದಾರೆ. ಅಪೊಸ್ತಲನಾದ ಪೌಲನಿಗೆ, ದೇವರನ್ನು ಮೆಚ್ಚಿಸುವುದು ಆತನಿಗೆ ಪ್ರಾಮುಖ್ಯತೆಯನ್ನು ಕೊಡುವುದೇ ಗುರಿಯಾಗಿ ಇದ್ದುದರಿಂದ ಲೋಕವು ಅವರಿಗೆ ಕಸದಂತೆ ತೋರಿತು.

 

ಹೌದು, ನಾವು ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತೇವೆಯೋ ಅದೇ ನಮ್ಮ ಬಯಕೆಯಾಗುತ್ತದೆ. ಎಲೀಷನಿಗೆ ಎಲೀಯನ ಮೇಲಿದ್ದ ಆತ್ಮದ ವರವೂ, ಅವರ ಮೇಲಿನ ಅಭಿಷೇಕವೇ ದೊಡ್ಡದೆಂದು ಭಾವಿಸಿದ್ದರಿಂದ ಅವರ ಮನಸ್ಸು ಅದರ ಮೇಲೆಯೇ ಇತ್ತು, ಸತತ ಪ್ರಯತ್ನದೊಂದಿಗೆ ಹೋರಾಡಿ ಅದನ್ನು ಪಡೆದುಕೊಂಡರು ಎಂಬುದು ಎಷ್ಟು ಆಶ್ಚರ್ಯ! ಇದೆಲ್ಲಾ ಗೊತ್ತಿದ್ದೂ ಗೇಹಜಿಯ ಮನಸ್ಸಿನಲ್ಲಿ ದೇವರ ಕಾರ್ಯದ ಮೇಲೆ ಒಂದು ಪರ್ಸೆಂಟ್ ಕೂಡ ಆಸಕ್ತಿ ತೋರಲೇ ಇಲ್ಲ.  

 

ಪ್ರಿಯರೇ! ಪ್ರಾಪಂಚಿಕ ವಿಷಯಗಳಿಗೂ ಮತ್ತು ವಸ್ತುಗಳಿಗೂ ಪ್ರಾಮುಖ್ಯತೆಯನ್ನು ನೀಡಿ ಪ್ರಾರ್ಥಿಸುತ್ತಿದ್ದೇವಾ? ನಮಗೆ ಏನು ಬೇಕು ಎಂದು ತಿಳಿದಿರುವ ಪರಮತಂದೆ ಅಗತ್ಯಗಳನ್ನು ಪೂರೈಸಲು ಶಕ್ತರಾಗಿದ್ದಾರೆ. ಆದ್ದರಿಂದ ದೇವರ ಕಾರ್ಯಗಳಿಗಾಗಿ ಪ್ರಾರ್ಥಿಸಿರಿ. ಭೂಸಂಬಂಧವಾದವುಗಳನ್ನಲ್ಲ ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಹೆಚ್ಚು ಆಶೀರ್ವಾದಗಳನ್ನು ಪಡೆಯಿರಿ!

- Mrs. ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ಸೇಲಂನಲ್ಲಿ ಇಂದು ನಡೆಯಲಿರುವ ಉಜ್ಜೀವನವನ್ನು ಬಯಸುವವರ ಶಿಬಿರದಲ್ಲಿ ಭಾಗವಹಿಸುವಂತಹ ವ್ಯಕ್ತಿಗಳ ಮೂಲಕ ದೇವರು ದೊಡ್ಡ ಕಾರ್ಯಗಳನ್ನು ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al