Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.02.2021
Share:

By Village Missionary Movement

Thursday, 04-Feb-2021

ಧೈನಂದಿನ ಧ್ಯಾನ(Kannada) – 04.02.2021

ಧೈರ್ಯವಾಗಿ ಎದ್ದೇಳು

"ಅವರೆಲ್ಲರೂ ಪವಿತ್ರಾತ್ಮಭರಿತರಾಗಿ,...." - ಅಪೊಸ್ತಲ 2:4

ವೇಲ್ಸ್ ದೇಶದಲ್ಲಿ ಇವಾನ್ ರಾಬರ್ಟ್ ಎಂಬ ಯುವಕನು ಪ್ರಾರ್ಥಿಸುತ್ತಿದ್ದ ವೇಳೆಯಲ್ಲಿ  "ವೇಲ್ಸ್ ದೇಶಕ್ಕೆ  ಉಜ್ಜೀವನವನ್ನು ಕಳುಹಿಸಲಿದ್ದೇನೆ. ಈ ಉಜ್ಜೀವನದ ಬೆಂಕಿಯು ಇಂಗ್ಲೆಂಡ್, ಯೂರೋಪ್, ಆಫ್ರಿಕಾ, ಆಸಿಯ ವರೆಗೂ ಹರಡುತ್ತದೆ" ಎಂದು ದೇವರು ಅವರ ಬಳಿ ಹೇಳಿದರು. ಇವನು ತಾನು ಹೊಂದಿಕೊಂಡ ದೇವರ ಮಾತುಗಳನ್ನು ಸಭೆಯಲ್ಲಿ ತಿಳಿಸಲು ಆತುರದಿಂದಿದ್ದರು. ಆದರೆ ಸಂದರ್ಭ ಸಿಗಲಿಲ್ಲ. ಕೊನೆಯದಾಗಿ ಸೇವಕರು,  "ಮುಂದಿನ ಬುಧವಾರ ರಾತ್ರಿ ಆರಾಧನೆಯಲ್ಲಿ ಸಂದೇಶ ಕೊಡು ಯಾರಾದರೂ ಕುಳಿತುಕೊಂಡು ಕೇಳುವುದಾದರೆ ಕೇಳಲಿ" ಎಂದರು. ಸಂದೇಶವನ್ನು ಕೇಳಿದ ಸೇವಕರು ಮತ್ತು 17 ಜನರು ದೇವರ ಬೆಂಕಿಯಿಂದ ಸ್ಪರ್ಶಿಸಲ್ಪಟ್ಟರು. ಯೌವ್ವನಸ್ದನಾದ ಇವಾನ್ ದೇವರ ಮಾತುಗಳನ್ನು ಧೈರ್ಯವಾಗಿ ಪ್ರಸಂಗ ಮಾಡಿದರು. ಇವರ ಸುಲಭವಾದ ಸಂದೇಶ ಅನೇಕರನ್ನು ಮುಟ್ಟಿತು. ಉಜ್ಜೀವನದ ಬೆಂಕಿಯು ವೇಗವಾಗಿ ಹರಡಲು ಪ್ರಾರಂಭವಾಯಿತು. ನಂತರ 30 ದಿನಗಳಲ್ಲಿ 37 ಸಾವಿರ ಜನರು ಮಾನಸಾಂತರ ಹೊಂದಿ, ಪಾಪವನ್ನು ಹರಿಕೆ ಮಾಡಿ, ಯೇಸುವನ್ನು ರಕ್ಷಕನನ್ನಾಗಿ ಅಂಗೀಕರಿಸಿಕೊಂಡರು. ಐದು ತಿಂಗಳೊಳಗೆ ಒಂದು ಲಕ್ಷ ಜನರು ದೇಶದಲ್ಲಿ ರಕ್ಷಣೆ  ಹೊಂದಿದರು. ಹೀಗೆ ಆ ದೇಶ ಪೂರ್ತಿಯಾಗಿ ಉಜ್ಜೀವನ ತಲುಪಿತು.

ಸತ್ಯವೇದದಲ್ಲಿ ಯೇಸುಕ್ರಿಸ್ತನು ಪರಲೋಕಕ್ಕೆ ಎತ್ತಲ್ಪಟ್ಟ ನಂತರ ಅವರು ವಾಗ್ಧಾನ ಮಾಡಲ್ಪಟ್ಟ ಪರಿಶುದ್ಧಾತ್ಮನನ್ನು ಯೆರೂಸಲೇಮಿನಲ್ಲಿ ಮೇಲಂತಸ್ತಿನಲ್ಲಿ ಕಾದಿದ್ದವರ ಮೇಲೆ ಸುರಿಸಿದರು. ಅಂದು ಪೇತ್ರನ ಪ್ರಸಂಗವನ್ನು ಕೇಳಿ 3000 ಜನರು ಮಾನಸಾಂತರ ಹೊಂದಿ, ರಕ್ಷಣೆ ಹೊಂದಿ, ಸಭೆಯಲ್ಲಿ ಸೇರಿಸಲ್ಪಟ್ಟರು. ಹೆಚ್ಚಾಗಿ ವಿದ್ಯಾ ಜ್ಞಾನವಿಲ್ಲದ ಮೀನು ಹಿಡಿಯುವ ಪೇತ್ರನ ಮೂಲಕ ಉಜ್ಜೀವನ ಉಂಟಾಯಿತು. ಇನ್ನು ಅಪೊಸ್ತಲರು ಹೋದ ಸ್ಥಳವೆಲ್ಲಾ ಅದ್ಭುತ ಅತಿಶಯಗಳೊಂದಿಗೆ ದೇವರು ತನ್ನನ್ನು ಪ್ರಕಟಿಸಿಕೊಂಡರು. ಹೀಗೆ ಅಪೊಸ್ತಲರ ಕಾಲದಲ್ಲಿ ಬಹುದೊಡ್ಡ ಉಜ್ಜೀವನವು ಉಂಟಾಯಿತು.

ಪ್ರಿಯರೇ! ನಿಮಗೆ ಭಾರತ ದೇಶದ ಉಜ್ಜೀವನದ ಬಗ್ಗೆ ಬಯಕೆ ಇರಬಹುದು. ಆದರೆ ನನ್ನ ಹೃದಯದಲ್ಲಿ ಇವಾನ್ ರಾಬರ್ಟ್ ನ ಹಾಗೆ, ಆದಿ ಅಪೊಸ್ತಲರ ಹಾಗೆ ಆತ್ಮಗಳ ಕುರಿತ ಭಾರ ಇಲ್ಲವೇ ಎಂದು ಒಂದು ವೇಳೆ ನೀವು ಅಂಗಲಾಚಿಕೊಳ್ಳಬಹುದು. ತಾನಾಗಿಯೇ ನಮಗೆ ಇಂತಹ ಭಾರ ಬರುವುದಿಲ್ಲ. ಆದರೆ ಪರಿಶುದ್ಧಾತ್ಮನು ನಮ್ಮೊಳಗೆ ಸುರಿಸಲ್ಪಡುವಾಗ ಇಂತಹ ಭಾರವನ್ನು ಹೊಂದಿಕೊಳ್ಳಲು ಸಾಧ್ಯ. ಭಾರತ ದೇಶದ ಉಜ್ಜೀವನದಲ್ಲಿ ನನ್ನ ಪಾಲು ಏನಾದರೂ ಮಾಡಬೇಕು ಎಂಬ ದಾಹ  ಉಂಟಾಗುತ್ತದೆ. ತಮಿಳುನಾಡಿನಲ್ಲಿ ಕೇವಲ 4% ಮಾತ್ರವೇ ಕ್ರೈಸ್ತರು. ಅಂದರೆ 100% ಜನರು ಯೇಸುವನ್ನು ತಿಳಿದುಕೊಳ್ಳಬೇಕಾದರೆ ಒಬ್ಬ ಕ್ರೈಸ್ತನು 25 ಆತ್ಮಗಳನ್ನು ಆದಾಯ ಮಾಡಬೇಕು. ಈ ಲೆಕ್ಕವನ್ನು ನೋಡುವುದಾದರೆ ಇದು ನನ್ನಿಂದ ಸಾಧ್ಯವೇ? ಎಂದು ಅನಿಸಬಹುದು. ಆದರೆ ಪರಿಶುದ್ಧಾತ್ಮನಿಂದ ತುಂಬಿಸಲ್ಪಟ್ಟ ಇವರಿಂದಲೇ ದೇವರು ದೊಡ್ಡ ಕಾರ್ಯಗಳನ್ನು ಮಾಡಿದರೇ! ಖಂಡಿತವಾಗಿ ನಿಮ್ಮ ಮೂಲಕವೂ ಮಾಡುತ್ತಾರೆ. ಧೈರ್ಯವಾಗಿ ಎದ್ದೇಳಿರಿ. ಉಜ್ಜೀವನದಲ್ಲಿ ನಿಮಗೂ ಪಾಲು ಉಂಟು.
-    P. ಸ್ಟೀವ್ ಮ್ಯಾಥ್ಉಂಟ

ಪ್ರಾರ್ಥನಾ ಅಂಶ:-
ನಮ್ಮೊಂದಿಗೆ ಸೇರಿ ಸೇವೆ ಮಾಡುತ್ತಿರುವ ಜೊತೆ ಮಿಷನರಿಗಳ ಪ್ರಯಾಣಗಳಲ್ಲಿ ದೇವರ ಹಸ್ತವು ಜೊತೆ ಇದ್ದು ಅವರನ್ನು ನಡೆಸುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel