Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.07.2022
Share:

By Village Missionary Movement

Thursday, 21-Jul-2022

ಧೈನಂದಿನ ಧ್ಯಾನ(Kannada) – 22.07.2022

 

ಸಂಗೀತ ವಾದ್ಯವು ಮಾತನಾಡುತ್ತಿದೆ

 

“ದಮ್ಮಡಿಬಡಿಯುತ್ತಾ ಕುಣಿಯುತ್ತಾ ಆತನನ್ನು ಸ್ತುತಿಸಿರಿ; ತಂತೀವಾದ್ಯಗಳಿಂದಲೂ ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ" - ಕೀರ್ತನೆ 150:4

 

ನನ್ನ ಯಜಮಾನ ಬಹಳ ಶ್ರೀಮಂತ. ಕಾರಣಾಂತರಗಳಿಂದ ಅವರ ವ್ಯಾಪಾರವು ನಷ್ಟವನ್ನು ಅನುಭವಿಸಿತು ಮತ್ತು ಅವರ ಎಲ್ಲಾ ಮನೆಯ ವಸ್ತುಗಳನ್ನು ಹರಾಜು ಮಾಡಲಾಯಿತು. ಹಾಜರಿದ್ದವರೆಲ್ಲರೂ ಹರಾಜಿಗೆ ಸಿದ್ಧವಿದ್ದ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡುಬಿಟ್ಟರು. ವಾದ್ಯವಾಗಿರುವ ನಾನು ಮಾತ್ರ ಧೂಳು ತುಂಬಿ ಒಂದು ಮೂಲೆಯಲ್ಲಿ ಹರಾಜಿನಲ್ಲಿ ಯಾರು ತೆಗೆದುಕೊಳ್ಳದೇ ಬಿದ್ದಿದ್ದೆ. ಕೊನೆಗೆ ಕುಳಿತಿದ್ದ ನನ್ನ ವಯಸ್ಸಾದ ಯಜಮಾನನು ಬಂದರು. ನನ್ನ ಧೂಳನ್ನೆಲ್ಲಾ ಒರೆಸಿ ಕೆಲವು ತಂತಿಗಳನ್ನು ಸರಿಪಡಿಸಿ ನನ್ನನ್ನು ಕೈಗಳಲ್ಲಿ ಎತ್ತಿಕೊಂಡು ಹಿಡಿದು ಒಂದು ಸುಂದರವಾದ ಹಾಡನ್ನು ಹಾಡಿದರು. ಕೀರ್ತನೆಗಳಲ್ಲಿ ಮರುಳಾಗದವರು ಯಾರಾದರೂ ಇದ್ದಾರಾ? ನಂತರ ನನ್ನನ್ನು ಅಧಿಕ ಬೆಲೆಗೆ ಹರಾಜಿನಲ್ಲಿ ತೆಗೆದುಕೊಂಡರು. ನನ್ನನ್ನು ಹರಾಜಿನಲ್ಲಿ ತೆಗೆದುಕೊಂಡಾಗ ನನ್ನ ಯಜಮಾನನ ಮುಖದಲ್ಲಿ ಅದುವರೆಗೂ ಇಲ್ಲದಂತಹ ಒಂದು ಸಂತೋಷವನ್ನು ನೋಡಿದೆ.

 

ಸತ್ಯವೇದದಲ್ಲಿಯೂ ಸಹ ಅನೇಕ ಪರಿಶುದ್ಧರು ಸಂಗೀತ ವಾದ್ಯವಾಗಿರುವ ನನ್ನನ್ನು ಉಪಯೋಗಿಸಿದ್ದಾರೆ. ದೇವರು ಕೆಂಪು ಸಮುದ್ರವನ್ನು ವಿಭಜಿಸಿ ಇಸ್ರಾಯೇಲ್ಯರನ್ನು ಮುನ್ನಡೆಸಿದ ಅದ್ಭುತವು ಸಂಭವಿಸಿದಾಗ, ಮಿರ್ಯಾಮಳೆಂಬ ಪ್ರವಾದಿನಿ ತನ್ನ ಕೈಯಲ್ಲಿ ತಂಬೂರಿಯನ್ನು ತೆಗೆದುಕೊಂಡು ಕರ್ತನ ಜಯವನ್ನು ಕೊಂಡಾಡಿದಳು. ಕರ್ತನು ಮೋಶೆಯ ಬಳಿ "ಯುದ್ಧಕ್ಕೆ ಹೋಗುವಾಗ ಕೊಂಬುಗಳೆಂಬ ವಾದ್ಯವನ್ನು ಜೋರಾಗಿ ನುಡಿಸುವಾಗ, ನೀವು ಕರ್ತನ ಸನ್ನಿಧಿಯಲ್ಲಿ ನೆನಪಿಸಲ್ಪಟ್ಟು ಶತ್ರುಗಳಿಂದ ರಕ್ಷಿಸಲ್ಪಡುತ್ತೀರಿ" ಎಂದು ಹೇಳಿದರು. ಶತ್ರುಗಳ ಕೈಯಿಂದ ವಿಮೋಚನೆಯ ಸಾಧನವಾಗಿ ನಾನು ಬಳಸಲ್ಪಟ್ಟೆ, ಯೆಹೋಶುವನ ಕಾಲದಲ್ಲಿ ಯಾಜಕರು ಕೊಂಬುಗಳನ್ನು ಊದಿದಾಗ ಯೆರಿಕೋ ಗೋಡೆಗಳು ಕುಸಿದು ಬಿದ್ದವು. ಅದು ನಿಜವಾಗಿಯೂ ನನಗೆ ಬಹಳ ಆಶ್ಚರ್ಯವಾಗಿತ್ತು.

 

ದಾವೀದನು ಸ್ವರಮಂಡಲಕಿನ್ನರಿ ಎಂಬ ವಾದ್ಯವಾಗಿರುವ ನನ್ನನ್ನು ನುಡಿಸಿದಾಗ ಸೌಲನ ಮೇಲಿದ್ದ ದುರಾತ್ಮವು ಅವನನ್ನು ಬಿಟ್ಟು ಹೋಯಿತು. ಅಷ್ಟು ಮಾತ್ರವಲ್ಲದೇ ನನ್ನೊಂದಿಗೆ ಅನೇಕ ಕೀರ್ತನೆಗಳನ್ನು ಹಾಡಿದ್ದಾರೆ, ಯೇಸುಕ್ರಿಸ್ತನ ಎರಡನೇ ಬರೋಣದಲ್ಲಿ ಅವರು ಆರ್ಭಟವಾಗಿ ತುತೂರಿಧ್ವನಿಯೊಡನೆ ಆಕಾಶದಿಂದ ಇಳಿದು ಬರುತ್ತಾರೆ ಎಂಬ ಸುದ್ದಿಯನ್ನು ಕೇಳಿದಾಗ ನನಗೆ ತುಂಬಾ ಸಂತೋಷವಾಯಿತು. ಕರ್ತನಲ್ಲಿ ಪ್ರಿಯರೇ! ಸಂಗೀತ ವಾದ್ಯವಾದ ನನ್ನಂತೆ ಇಂದು ನಿಮ್ಮನ್ನು ಕರ್ತನ ಕೈಯಲ್ಲಿ ಒಂದು ಸಂಗೀತ ವಾದ್ಯವಾಗಿ ಒಪ್ಪಿಸಿಕೊಡುತ್ತೀರ?

 

ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಎಲ್ಲಾ ವಿಷಯಗಳಲ್ಲಿ ಜಯವನ್ನು ನೀಡುವ ದೇವರನ್ನು, ಮಿರ್ಯಾಮಳಂತೆ ಕೊಂಡಾಡುತ್ತೀರಾ? ಶತ್ರುಗಳ ಕೋಟೆಯನ್ನು ಕೆಡವಲು ಬಳಸುತ್ತೀರಾ? ಈ ಲೋಕದಲ್ಲಿ ಸೈತಾನನಿಂದ ಕಟ್ಟಲ್ಪಟ್ಟಿರುವವರನ್ನು ಬಿಡಿಸಲು, ದೀನರಿಗೆ ಸುವಾರ್ತೆಯನ್ನು ಸಾರಲು, ಅಭಿಷೇಕ ಹೊಂದಿರುವ ನಿಮ್ಮ ಮೂಲಕ ವಿಮೋಚನೆಯ ಕೂಗು ಕೇಳಿಸುತ್ತದೆಯೇ? ಕೊನೆಯ ತುತ್ತೂರಿಯ ಶಬ್ದವು ಕೇಳಲ್ಪಡುವಾಗ ನಾವು ಕ್ಷಣಮಾತ್ರದಲ್ಲಿ ರೂಪಾಂತರವಾಗಿ ಅವರೊಂದಿಗೆ ಇರುತ್ತೇವೆ! ಹಲ್ಲೇಲೂಯಾ!

- A. ಬ್ಯೂಲಾ

 

ಪ್ರಾರ್ಥನಾ ಅಂಶ:

Youtube ಮತ್ತು Facebook ಮೂಲಕ 8 ಭಾಷೆಗಳಲ್ಲಿ ಹೊರಬರುವ ನಮ್ಮ ಮೋಕ್ಷ ಪ್ರಯಾಣ ದೈನಂದಿನ ಧ್ಯಾನ ಸಂದೇಶವು ತಡೆಯಿಲ್ಲದೆ ಹೊರಬರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet