Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.07.2022
Share:

By Village Missionary Movement

Wednesday, 20-Jul-2022

ಧೈನಂದಿನ ಧ್ಯಾನ(Kannada) – 21.07.2022

 

ಸೋಮಾರಿ

 

"ಸೋಮಾರಿಯ ಆಶೆಯು ಅವನನ್ನು ಕೊಲ್ಲುವದು, ಅವನ ಕೈಗಳು ದುಡಿಯಲೊಲ್ಲವಷ್ಟೆ" - ಜ್ಞಾನೋಕ್ತಿ 21:25

 

ವಿಶ್ವಪ್ರಸಿದ್ಧ ಬರಹಗಾರ ಲಿಯೋ ಟಾಲ್‌ಸ್ಟಾಯ್ ಜೀವಿಸಿದ ದಿನಗಳಲ್ಲಿ ಮೊದಲ ಗುಣಮಟ್ಟದ ಸೋಮಾರಿಯು ಕಾಣಲ್ಪಟ್ಟನು. ಅವನು ಟಾಲ್ಸ್ಟಾಯ್ ಅವರನ್ನು ಭೇಟಿಯಾಗಲು ಬಂದು "ಅಯ್ಯಾ, ನನ್ನ ತಂದೆಗೆ ಕಾಲಿಲ್ಲ, ಆದ್ದರಿಂದ ನನಗೆ ಒಂದು ಸಹಾಯ ಬೇಕು" ಎಂದನು. ಚಿಕ್ಕ ಹುಡುಗನಾಗಿದ್ದ ಅವನನ್ನು ನೋಡಿ, “ತಾತ್ಕಾಲಿಕ ಸಹಾಯ ಬೇಕೇ? ಅಥವಾ ಶಾಶ್ವತ ಸಹಾಯ ಬೇಕೇ?” ಎಂದು ಕೇಳಿದರು. ಅವನು ಮನದಲ್ಲಿ ಸಂತಸಪಟ್ಟು, ಶಾಶ್ವತವಾದ ಸಹಾಯ ಕೇಳೋಣವೆಂದು ಯೋಚಿಸಿ, "ಅಯ್ಯಾ, ದಯವಿಟ್ಟು ನನಗೆ ಶಾಶ್ವತವಾದ ಸಹಾಯವನ್ನು ಮಾಡಿ" ಎಂದನು.

 

"ನಿನ್ನ ಬಲಗೈಯನ್ನು ಕತ್ತರಿಸಿ ಕೊಡು, 500 ರೂ. ಕೊಡುತ್ತೇನೆ" ಎಂದರು. ಸೋಮಾರಿಗೆ ತುಂಬಾ ಕೋಪ ಬಂತು. "ನನ್ನ ಕೈನ ಬೆಲೆ ಕೇವಲ 500 ರೂ ಅಷ್ಟೇನಾ?" ಎಂದನು. “ಸರಿ ನಿನ್ನ ಕಣ್ಣು ಕಿತ್ತುಬಿಡು, 1000 ರೂಪಾಯಿ ಕೊಡುತ್ತೇನೆ” ಎಂದರು. ಮತ್ತೆ ಸೋಮಾರಿಯ ಕೋಪ ಭುಗಿಲೆದ್ದಿತು. ಅವನಿಗೆ ಟಾಲ್ಸ್ಟಾಯ್ ವಿಷಯವನ್ನು ವಿವರಿಸಲು ಪ್ರಾರಂಭಿಸಿದರು. "ನಿನ್ನ ಅಮೂಲ್ಯವಾದ ದೇಹದಿಂದ ದುಡಿದು ಬದುಕು" ಎಂದು ಸ್ಪಷ್ಟಪಡಿಸಿದರು. ಆ ಹುಡುಗನ ಕಣ್ಣುಗಳು ತೆರೆಯಲ್ಪಟ್ಟವು, ತನ್ನ ಬಳಿ ಇಷ್ಟೊಂದು ಬಲವಿರುವುದನ್ನು ತಿಳಿಯದೇ ಎಷ್ಟು ಸೋಮಾರಿಯಾಗಿ ಕಾಣಲ್ಪಟ್ಟೆನು ಎಂಬುದನ್ನು ನೆನೆಸಿ ನಾಚಿಕೆಪಟ್ಟನು. ಅಂದಿನಿಂದ ಅವನ ಸೋಮಾರಿತನ ಬದಲಾಗಿ ಚುರು-ಚುರುಕಾದ ಯೌವನಸ್ಥನಾಗಿ ವರ್ತಿಸಲು ಪ್ರಾರಂಭಿಸಿದನು. ಜಗತ್ಪ್ರಸಿದ್ಧ ಪುಸ್ತಕಗಳನ್ನು ಬರೆದ ಟಾಲ್‌ಸ್ಟಾಯ್‌ನ ಮೂಲಕ ಒಬ್ಬ ಸೋಮಾರಿ ಬದಲಾದದ್ದು ವಿಶೇಷವಾಗಿ ಕಾಣುತ್ತಿದೆ.

 

ಕ್ರಿಸ್ತನಲ್ಲಿ ಪ್ರಿಯರೇ! ಸೊಲೊಮೋನ್ ಜ್ಞಾನಿಯ ಮೂಲಕ ಇಂದಿಗೂ ಅನೇಕ ಸೋಮಾರಿಗಳಿಗೆ ಸಂದೇಶವನ್ನು ಬೋಧಿಸಲಾಗುತ್ತಿದೆ. ಸೋಮಾರಿತನವು ಒಬ್ಬ ಮನುಷ್ಯನ ಜೀವನದಲ್ಲಿ ಹೇಗೆ ದುಃಖ ಮತ್ತು ದರಿದ್ರವನ್ನು ತರುತ್ತದೆ ಎಂಬುದನ್ನು ನಾವು ಜ್ಞಾನೋಕ್ತಿಗಳಲ್ಲಿ ಓದುತ್ತೇವೆ. ಇಂದು ಮಾಡಬೇಕಾದ ಕೆಲಸವನ್ನು ನಾಳೆಗೆ ಮುಂದೂಡುವುದು ಸೋಮಾರಿತನದ ಪ್ರಮುಖ ಲಕ್ಷಣವಾಗಿದೆ. ಆಯಾ ಕೆಲಸಗಳನ್ನು ಕಾಲಕಾಲಕ್ಕೆ ನಿಯಮಿತವಾಗಿ ಮಾಡಿದರೆ ಸೋಮಾರಿತನಕ್ಕೆ ಅಲ್ಲಿ ಕೆಲಸವೇ ಇಲ್ಲ. ಮತ್ತಾಯನು ಬರೆದ ಸುವಾರ್ತೆಯಲ್ಲಿ, ಸೋಮಾರಿಗಳ - ಅಂತ್ಯವು ಕತ್ತಲೆಯೊಳಗೆ ತಳ್ಳಲ್ಪಡುವುದೇ ಎಂದು ಯೇಸು ಹೇಳುತ್ತಾರೆ. ಮದ್ಯಪಾನವು ಮನೆಗೂ ಮತ್ತು ದೇಶಕ್ಕೂ ಕೆಟ್ಟದು ಎಂದು ಹೇಳುವಂತೆ, ಸೋಮಾರಿಯಾದವನು ಮನೆಗೂ ಮತ್ತು ದೇಶಕ್ಕೂ ದೊಡ್ಡ ಹೊರೆ. ಪ್ರಾರ್ಥಿಸಿರಿ, ಸೋಮಾರಿತನದಿಂದ ಹೊರಬರಲು ಯೇಸು ನಿಮಗೆ ಸಹಾಯ ಮಾಡುತ್ತಾರೆ.

- P.ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಪ್ರತಿ ತಿಂಗಳು ಪತ್ರಿಕೆಗಳನ್ನು ಮುದ್ರಿಸಲು ಮತ್ತು ಹೊರಬಿಡಲು ಬೇಕಾದ ಅವಶ್ಯಕತೆಗಳು ಪೂರೈಸಲ್ಪಡಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al