By Village Missionary Movement
Monday, 18-Jul-2022ಧೈನಂದಿನ ಧ್ಯಾನ(Kannada) – 19.07.2022
ಸಾಟಿಯಿಲ್ಲದ ಮಹಿಮೆ
"ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ" - ರೋಮಾ 8:18
ಒಂದು ಹಳ್ಳಿಯಲ್ಲಿ ನೀರಿನ ಭೀಕರ ಅಭಾವ ಉಂಟಾಗಿತ್ತು. ನೀರು ತರಲು ಎಲ್ಲರೂ 2 ಮೈಲಿ ನಡೆದುಕೊಂಡು ಹೋಗಿ ಬರುತ್ತಿದ್ದರು. ಆಗ ಆ ಊರಿನಲ್ಲಿದ್ದ ಒಬ್ಬ ತಂದೆ ತನ್ನ ಇಬ್ಬರು ಗಂಡುಮಕ್ಕಳಿಗೆ, "ನಮ್ಮ ತೋಟದಲ್ಲಿ ಒಂದು ದೊಡ್ಡ ನಿಧಿ ಇದೆ" ಎಂದು ಹೇಳಿದರು. ಕೆಲಸಕ್ಕೆ ಬಂದ ಕೂಡಲೇ ಇಬ್ಬರು ಗಂಡುಮಕ್ಕಳು ಬಹಳ ಪ್ರಯತ್ನದಿಂದ ಅಗೆಯಲು ಪ್ರಾರಂಭಿಸಿದರು. ಆದರೆ ಒಂದೇ ಒಂದು ನಿಧಿ ಪತ್ತೆಯಾಗಿಲ್ಲ. ಕೂಡಲೇ ತಂದೆಯವರು "ನಿಧಿ ಸಿಗಬೇಕಾದರೆ ಇನ್ನೂ ಹೆಚ್ಚು ಅಗೆಯಬೇಕು" ಎಂದು ಧೈರ್ಯ ತುಂಬಿದರು. ಇಬ್ಬರೂ ಬಂಡೆಗಳನ್ನೆಲ್ಲ ಒಡೆದು ಅಗೆದರು. ಅದನ್ನು ನೋಡಿ ಗ್ರಾಮಸ್ಥರು ನಕ್ಕರು. "ಹುಚ್ಚರು" ಎಂದರು. ಇಬ್ಬರೂ ಅದನ್ನೆಲ್ಲಾ ಲೆಕ್ಕಿಸದೆ ಅಗೆದರು. ಒಂದು ದಿನ ಅದರಲ್ಲಿ ಒಂದು ನೀರಿನ ತೊರೆ ಉಕ್ಕಿತು. ಅದನ್ನು ಕುಡಿದು ನೋಡಿದಾಗ ಅದು ಒಳ್ಳೆಯ ನೀರಾಗಿತ್ತು. ಆ ನೀರಿನ ತೊರೆಯು ಅವರಿಗೆ ದೀರ್ಘಕಾಲದವರೆಗೆ ನೀರನ್ನು ಮತ್ತು ಹೆಚ್ಚಿನ ಸಂತೋಷವನ್ನು ನೀಡಿತು. ಇದಕ್ಕಾಗಿ ತಾವು ಪಟ್ಟ ಕಷ್ಟ ತಿಳಿಯದೆ ಖುಷಿ ಪಟ್ಟರು.
ಅಪೊ. ಪೌಲನು ರೋಮಾ 8: 17,18 ರಲ್ಲಿ "ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು" ಎಂದು ಹೇಳಿ "ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ" ಎಂದು ಹೇಳುತ್ತಾರೆ. ಓಟಗಾರನು ಬಹುಮಾನದ ಗುರಿಯೊಂದಿಗೆ ಓಡಿದರೆ, ಓಟದ ಅಂತರವು ಚಿಕ್ಕದಾಗಿರುತ್ತದೆ. ಅಂತೆಯೇ ಜಯಿಸುವವನು ಎಂದು ಪ್ರಕಟನೆ ಗ್ರಂಥದಲ್ಲಿ ಸಭೆಗಳಿಗೆ ಹೇಳಲಾದ ಮಹಿಮೆಯು, ಶೋಧನೆಗಳನ್ನು ಜಯಿಸುವವರಿಗೆ ಸ್ವಂತವಾಗುತ್ತದೆ. ಅಂತಹ ಮಹಾ ಮಹಿಮೆಗೆ ವಾರಸುದಾರರಾಗಲು ನಾವು ಯಾವ ಕಷ್ಟವನ್ನಾದರೂ ಅನುಭವಿಸಬಹುದು ಎಂದು ತೋರುತ್ತದೆ. ನಾವು ಅತಿಯಾಗಿ ಜಜ್ಜಲ್ಪಡುವಾಗ, ದುಃಖಿತರಾದಾಗ, ನಾವು ನೆನೆಪಿಸಿಕೊಳ್ಳಬೇಕಾದ ಸತ್ಯ ವಾಕ್ಯಗಳು, "ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು", "ನೀವು ಸಹಿಸುವದಕ್ಕಿಂತ ಹೆಚ್ಚಿನ ಶೋಧನೆಯನ್ನು ಆತನು ನಿಮಗೆ ಬರಮಾಡುವದಿಲ್ಲ" (1 ಕೊರಿಂಥ. 10:13) ಲೋಕದಲ್ಲಿ ನಿಮಗೆ ಸಂಕಟ ಇರುವದು. ಅದನ್ನೆಲ್ಲಾ ಜಯಿಸಲು, ಕ್ರಿಸ್ತನನ್ನು ಹಿಡಿದುಕೊಳ್ಳಬೇಕು ( ಯೋಹಾನ 16:33 ) ನಾವು ಆತನಂತೆ ಕಷ್ಟಾನುಭವಿಸಿದರೆ ಆತನಂತೆ ಮಹಿಮೆ ಹೊಂದುವೆವು.
ಇದನ್ನು ಓದುತ್ತಿರುವ ನೀವು ಸಹ ಕೆಲವು ಕಷ್ಟಗಳ ಮೂಲಕ ಹಾದು ಹೋಗುತ್ತಿರಬಹುದು. ಅದನ್ನು ಸಂತೋಷದಿಂದ ಸ್ವೀಕರಿಸಿ ಮತ್ತು ತಾಳ್ಮೆಯಿಂದ ಗುರಿಯತ್ತ ಓಡಿರಿ, ಆ ಶಾಶ್ವತ ಮಹಿಮೆಯನ್ನು ಸ್ವತಂತ್ರಿಸಿಕೊಳ್ಳೋಣ. ನಾವು ಅದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಅದುವೇ ನಮ್ಮನ್ನು ಹುರಿದುಂಬಿಸುತ್ತದೆ. ನಮ್ಮ ಕಷ್ಟಗಳನ್ನು ಸಹಿಸಿಕೊಳ್ಳಲು ಬಲಪಡಿಸುತ್ತದೆ!
- Mrs .ಅನ್ಬು ಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
"ಪ್ರಾರ್ಥನಾ ಗುಂಪಿನ ನಾಯಕರ ಕೈಪಿಡಿ" ಮೂಲಕ 7000 ಪ್ರಾರ್ಥನಾ ಗುಂಪುಗಳನ್ನು ರೂಪಿಸಲು; ದೇಶದಲ್ಲಿ ಉಜ್ಜೀವನ ಉಂಟಾಗುವುದಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482