By Village Missionary Movement
Sunday, 17-Jul-2022ಧೈನಂದಿನ ಧ್ಯಾನ(Kannada) – 17.07.2022
ಜೆರ್ರಿಯ ಸಂತೋಷ
"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು" - ಯೋಹಾನ 3:16
Hai ಪುಟಾಣಿಗಳೇ! ಸಂತೋಷವಾಗಿದ್ದೀರಾ? ನಿಮ್ಮ Friends ನೊಂದಿಗೆ ವಿಭಿನ್ನ ಆಟಿಕೆಗಳೊಂದಿಗೆ ಆಟವಾಡುವಾಗ ತುಂಬಾ ಸಂತೋಷಪಡುತ್ತೀರ ತಾನೇ!
ಇಂದು ಜೆರ್ರಿ ಸಂತೋಷವಾಗಿರಲು ಹೇಗೆ ಕಲಿತುಕೊಂಡನು ಎಂಬುದನ್ನು ನೋಡೋಣವಾ?. ಜೆರ್ರಿಯನ್ನು ಚೆಲ್ಸಿಯಾಳ ಮನೆಯಲ್ಲಿ ಬಿಟ್ಟು ಅವನ ತಾಯಿ ಮತ್ತು ತಂದೆ ಎಲ್ಲಿಗೋ ಹೋದರು. ಅವನು ಮತ್ತು ಚೆಲ್ಸಿಯಾ Teddi Bear ಮತ್ತು Car ನೊಂದಿಗೆ ತುಂಬಾ ಆಸೆಯಾಗಿ ಆಟವಾಡಿದರು. ಜೆರ್ರಿಯನ್ನು ಕರೆದುಕೊಂಡು ಹೋಗಲು ಅವನ ತಾಯಿ ಮತ್ತು ತಂದೆ ಬಂದಾಗ ಅವನು ಚೆಲ್ಸಿಯಾಳ Teddi Bear ಮತ್ತು Car ನೊಂದಿಗೇನೆ ಮನೆಗೆ ಬರುತ್ತೇನೆ ಎಂದು ಹಠ ಹಿಡಿದನು. ಜೆರ್ರಿಯ ತಾಯಿ ಅವನ ಗಮನವನ್ನು ಬೇರೆಡೆ ಸೆಳೆಯಲು, "ಜೆರ್ರಿ Walking ಹೋಗಿ ಬಂದು ಇದನ್ನು ತೆಗೆದುಕೊಂಡು ಹೋಗೋಣ" ಎಂದು ಹೇಳಿದರು. ತಕ್ಷಣವೇ ಅವುಗಳನ್ನು ಬಿಟ್ಟು ಅಮ್ಮ ಅಪ್ಪನ ಜೊತೆ ಖುಷಿಯಾಗಿ Walking ಗೆ ಹೋದನು.
ಅವರು ಹೋದ ಸ್ಥಳದಲ್ಲಿದ್ದ ಮನೆಗಳು ತುಂಬಾ ಚಿಕ್ಕದಾಗಿದ್ದವು. ಅಲ್ಲಿದ್ದ ಪುಟಾಣಿಗಳು ತಮ್ಮ ಮುರಿದ ಆಟಿಕೆಗಳು, ಹಳೆಯ ಚೆಂಡುಗಳು, ಓಡದ ಹಳೆಯ ಸೈಕಲ್‌ಗಳೊಂದಿಗೆ ಸಂತೋಷವಾಗಿ ಆಟವಾಡುತ್ತಿದ್ದರು. ಅಳುತ್ತಿದ್ದ ಒಂದು ಪುಟ್ಟ ಮಗುವಿನ ಬಳಿ ನನ್ನ "ಏರೋಪ್ಲೇನ್ ಆಟಿಕೆಯೊಂದಿಗೆ ಆಟವಾಡಲು ಬರುತ್ತೀಯಾ?" ಎಂದು ಹೇಳಿ ಒಬ್ಬ ತಮ್ಮ ತನ್ನ ಚಕ್ರ ಮುರಿದ ಆಟಿಕೆಯನ್ನು ಕೊಡುವುದನ್ನು ನೋಡಿದ ಕೂಡಲೇ ಜೆರ್ರಿ ಆಶ್ಚರ್ಯಚಕಿತನಾದನು. ಜೆರ್ರಿ ತನ್ನ ತಾಯಿಯ ಬಳಿ, “ನಾನು ಇನ್ನು ಮುಂದೆ ಬೇರೆಯವರ ವಸ್ತುಗಳನ್ನು ಆಸೆಪಡೋದಿಲ್ಲ. ಈ ಚಿಕ್ಕ ಮಕ್ಕಳು ತಮ್ಮಲ್ಲಿರುವ ಒಡೆದ ವಸ್ತುಗಳಿಂದ ಸಂತೋಷವಾಗಿ ಆಟವಾಡುತ್ತಿದ್ದಾರೆ. ನಾನೂ ಕೂಡ ನಾಳೆ ಬಂದು ನನ್ನ ಬಳಿ ಇರುವ ಕೆಲವು ಆಟಿಕೆಗಳನ್ನು ಇವರಿಗೆ ಕೊಡುತ್ತೇನೆ” ಎಂದು ಹೇಳಿದನು.
ಏನು ಪುಟಾಣಿಗಳೇ! ನೀವು ಕೂಡ ಮತ್ತೊಬ್ಬರ ವಸ್ತುಗಳನ್ನು ಆಸೆಪಡೋದಿಲ್ಲ ತಾನೇ! ನಿಮ್ಮ ಬಳಿ ಇರುವ ಆಟಿಕೆಗಳನ್ನು ಇತರ ಪುಟಾಣಿಗಳಿಗೆ ಕೊಟ್ಟು ಅವರೊಂದಿಗೆ ಆಟವಾಡುವಾಗಲೇ ಸಂತೋಷವಾಗಿರುತ್ತದೆ. ನಾವು ಸಂತೋಷವಾಗಿರಬೇಕೆಂದೇ ಯೇಸಪ್ಪ ನಮಗಾಗಿ ತನ್ನನ್ನೇ ಕೊಟ್ಟು ಬಿಟ್ಟರಲ್ವಾ... Ok... Bye...
- A. ಬ್ಯೂಲಾ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482