By Village Missionary Movement
Saturday, 16-Jul-2022ಧೈನಂದಿನ ಧ್ಯಾನ(Kannada) – 16.07.2022
ದೃಷ್ಟಿ ಹೇಗಿದೆ?
“...ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ..." -1 ಸಮುವೇಲ 16:7
ಒಂದು ಚಪ್ಪಲಿ ಅಂಗಡಿಯ ಮಾಲೀಕ ತನ್ನ ಅಂಗಡಿಯ ಮುಂದಿನ ಶಾಖೆಯನ್ನು ಒಂದು ನಿರ್ದಿಷ್ಟ ದ್ವೀಪದಲ್ಲಿ ತೆರೆಯಲು ಬಯಸಿದರು. ಅವರು ತನ್ನ ಇಬ್ಬರು ಸೇವಕರನ್ನು ಅಲ್ಲಿನ ಕ್ಷೇತ್ರದ ಪರಿಸ್ಥಿತಿಯನ್ನು ಪರೀಕ್ಷಿಸಲು ಕಳುಹಿಸಿದರು. ಅವರು ದ್ವೀಪಕ್ಕೆ ಹೋಗಿ ಎಲ್ಲರನ್ನೂ ಮಾತನಾಡಿಸಿ ತಮ್ಮ ಮಾಲೀಕನ ಬಳಿಗೆ ಹೋದರು. ಮೊದಲನೆಯವನು “ಅಯ್ಯಾ, ಆ ದ್ವೀಪದಲ್ಲಿರುವವರಿಗೆ ಚಪ್ಪಲಿ ಹಾಕಿಕೊಳ್ಳುವ ಅಭ್ಯಾಸವೇ ಇಲ್ಲ. ಅಲ್ಲಿ ನಾವು ಅಂಗಡಿ ತೆರೆದರೂ ವ್ಯಾಪಾರ ಆಗುವುದಿಲ್ಲ" ಎಂದು ಹೇಳಿದನು. ಎರಡನೆಯ ವ್ಯಕ್ತಿ, "ಅಯ್ಯಾ, ಆ ದ್ವೀಪದ ಜನರಿಗೆ ಚಪ್ಪಲಿಯ ಪರಿಚಯವೇ ಇಲ್ಲ, ಅವರಿಗೆ ಚಪ್ಪಲಿ ಬಳಕೆಯನ್ನು ಮತ್ತು ಅದರ ಮಹತ್ವವನ್ನು ವಿವರಿಸಿದರೆ, ನಾವು ಖಂಡಿತವಾಗಿಯೂ ಅಲ್ಲಿ ಒಳ್ಳೆಯ ವ್ಯಾಪಾರ ಮಾಡಬಹುದು" ಎಂದು ಹೇಳಿದರು. ಹೌದು, ಒಂದೇ ಪರಿಸ್ಥಿತಿ. ಆದರೆ ಇಬ್ಬರ ದೃಷ್ಟಿಕೋನವೂ ಭಿನ್ನವಾಗಿತ್ತು.
ಹೌದು, ಪ್ರಿಯರೇ! ಅದೇ ರೀತಿ, ಯೆಹೋಶುವ ಮತ್ತು ಕಾಲೇಬ್, ಇತರರೊಂದಿಗೆ ಕಾನಾನ್ ಅನ್ನು ನೋಡಲು ಹೋದಾಗ, ಬಂದವರ ದೃಷ್ಟಿಕೋನಗಳು ಯೆಹೋಶುವ ಮತ್ತು ಕಾಲೇಬ್ ಅವರ ದೃಷ್ಟಿಕೋನಗಳಿಗಿಂತ ಭಿನ್ನವಾಗಿತ್ತು. ಪರಿಸ್ಥಿತಿ ಒಂದೇ, ಆದರೆ ದೃಷ್ಟಿಕೋನಗಳು ವಿಭಿನ್ನವಾಗಿವೆ. ಆದಿ. 39 ನೇ ಅಧ್ಯಾಯದಲ್ಲಿ ನಾವು ಯೋಸೇಫನ ಬಗ್ಗೆ ಓದುತ್ತೇವೆ. ಪೋಟೀಫರನು ಯೋಸೇಫನೊಂದಿಗೆ ಕರ್ತನು ಇರುವುದನ್ನು ನೋಡುತ್ತಾರೆ. (ಆದಿಕಾಂಡ 39:3,4) ಪೋಟಿಫರನ ಹೆಂಡತಿಯೋ. ಯೋಸೇಫನ ಬಾಹ್ಯ ಸೌಂದರ್ಯವನ್ನು ನೋಡುತ್ತಾಳೆ. (ಆದಿಕಾಂಡ 39:6,7)
ಇಂದು ನಮ್ಮ ದೃಷ್ಟಿ ಎಂಥದ್ದಾಗಿದೆ? ನಾವು ಒಬ್ಬರನ್ನು ನೋಡುವಾಗ ಅವರ ರೂಪವನ್ನು ನೋಡಿ ನಿರ್ಣಯಿಸುತ್ತಿದ್ದೇವಾ? ಯೋಚಿಸಿ ನೋಡೋಣ. ಅದೇ ಸಮಯದಲ್ಲಿ, ನಮ್ಮನ್ನು ನೋಡುವವರಿಗೆ ನಮ್ಮ ಬಾಹ್ಯ ಸೌಂದರ್ಯ, ನಮ್ಮ ಶಿಕ್ಷಣ, ಅರ್ಹತೆ ಮತ್ತು ಸ್ಥಾನಮಾನವನ್ನು ಒತ್ತಿಹೇಳುತ್ತಿದ್ದೇವಾ? ಅಥವಾ ಯೇಸುವನ್ನು ಪ್ರತಿಬಿಂಬಿಸುತ್ತಿದ್ದೇವಾ?
ಅಷ್ಟೇ ಅಲ್ಲದೆ ನಾವಿರುವ ಪರಿಸ್ಥಿತಿಯನ್ನು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದೇವೆ? ಇನ್ನು ಮುಂದೆ ಏನೂ ಮಾಡಲು ಸಾಧ್ಯವಿಲ್ಲ ಎಂದಾ? ನಮ್ಮ ಪ್ರಯತ್ನಗಳು ನಿಷ್ಪ್ರಯೋಜಕವೆಂದು ಅಪನಂಬಿಕೆಯಿಂದ ಮಾತನಾಡುತ್ತಿದ್ದೇವೆಯೇ ಅಥವಾ ನಂಬಿಕೆಯ ಮನೋಭಾವದಿಂದ ಸಂದರ್ಭಗಳನ್ನು ಎದುರಿಸುತ್ತಿದ್ದೇವೆಯೇ? ಪರಿಸ್ಥಿತಿ ಎಂಥದ್ದಾಗಿದ್ದರೂ ನಮ್ಮನ್ನು ಬಲಪಡಿಸುವ ಕ್ರಿಸ್ತನಿಂದ ನಾವು ಎಲ್ಲವನ್ನೂ ಮಾಡೋಣ! ನಮಗೆ ಜಯವನ್ನು ಕೊಡುವ ದೇವರು ನಮ್ಮೊಂದಿಗಿದ್ದಾರೆ! ಆದ್ದರಿಂದ ನಿರುತ್ಸಾಹಗೊಳ್ಳದೇ ನಿಮಗೆ ನಿಯೋಜಿಸಲಾದ ಕೆಲಸವನ್ನು ಮುಂದುವರೆಸಿರಿ. ಕರ್ತನು ನಿಮ್ಮೊಂದಿಗಿರುತ್ತಾರೆ!
- Sis. ಐಡಾ
ಪ್ರಾರ್ಥನಾ ಅಂಶ:
ತಿರುಚ್ಚಿಯ ಕಾರ್ಯಕ್ಷೇತ್ರದಲ್ಲಿ ಇಂದು ನಡೆಯಲಿರುವ ಉಜ್ಜೀವನವನ್ನು ಬಯಸುವವರ ಶಿಬಿರದಲ್ಲಿ ಭಾಗವಹಿಸುವ ಜನರನ್ನು ದೇವರು ವಿಶೇಷವಾದ ಅಭಿಷೇಕದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482