Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.07.2022
Share:

By Village Missionary Movement

Thursday, 14-Jul-2022

ಧೈನಂದಿನ ಧ್ಯಾನ(Kannada) – 15.07.2022

 

ಬಲವಾದ ನಂಬಿಕೆ

 

“ನಿಮ್ಮನ್ನು ಐಗುಪ್ತದಿಂದ ಕರತಂದ ಯೆಹೋವನೆಂಬ ನಾನೇ ನಿಮ್ಮ ದೇವರು. ಅಗಲವಾಗಿ ಬಾಯಿದೆರೆಯಿರಿ; ಅದನ್ನು ತುಂಬಿಸುವೆನು" - ಕೀರ್ತನೆ 81:10

 

ಕರ್ತನಾದ ಯೇಸು ಕ್ರಿಸ್ತನನ್ನು ನಂಬಿದರೆ ಏರ್ಪಡುವ ಫಲಿತಾಂಶವು ಏನು ಗೊತ್ತಾ? ರಕ್ಷಣೆ ಉಂಟಾಗುತ್ತದೆ. ಎಷ್ಟು ಸಂತೋಷ! ಜಕ್ಕಾಯನು ರಕ್ಷಿಸಲಪಟ್ಟ ಕೂಡಲೇ ಮಾಡಿದ್ದೇನು? ತನ್ನ ಆಸ್ತಿಯಲ್ಲಿ ಅರ್ಧದಷ್ಟು ಬಡವರಿಗೆ ನೀಡುತ್ತೇನೆ ಎಂದನು. ಒಬ್ಬನು ರಕ್ಷಣೆ ಹೊಂದಿದ ಕೂಡಲೇ ದೇವರು ಸೃಷ್ಟಿಸಿದ ಮನುಷ್ಯನನ್ನು ಪ್ರೀತಿಸುತ್ತಾನೆ. ದೇವ ಮನುಷ್ಯನಾದ ಜಾರ್ಜ್ ಮುಲ್ಲರ್ ರವರು ಯೇಸುವಿನ ಹೆಸರನ್ನು ನಂಬಿದ್ದದರಿಂದ ಸಾವಿರಾರು ಬಡ ಮಕ್ಕಳಿಗೆ ತಂದೆಯಾದರು. ಅವರನ್ನು ಪೋಷಿಸಲು ಕರ್ತನನ್ನು ಬಿಟ್ಟರೆ ಬೇರೆ ಯಾರ ಬಳಿಯೂ ಸಹಾಯ ಕೇಳಲಿಲ್ಲ. ಬ್ರಿಸ್ಟಲ್‌ನಲ್ಲಿ ಅನಾಥಾಶ್ರಮಗಳನ್ನು ತೆರೆಯುವ ಮೊದಲು ಅವರ ಏಕಾಂತ ಧ್ಯಾನದಲ್ಲಿ, ಸತ್ಯವೇದವನ್ನು ಓದುವಾಗ, "ಅಗಲವಾಗಿ ಬಾಯಿದೆರೆಯಿರಿ; ಅದನ್ನು ತುಂಬಿಸುವೆನು" ಎಂಬ ವಾಗ್ದಾನ ನೀಡಲಾಯಿತು. ಇದುವೇ ಅವರ ಜೀವನದ ಬಯಕೆಯು ನೆರವೇರಲು ಮೊದಲ ಆಧಾರಸ್ತಂಭವಾಯಿತು. ಈ ವಾಕ್ಯವೇ ಮುಲ್ಲರ್ ಅವರಿಗೆ ಆಕಾಶವೆಂಬ ಬ್ಯಾಂಕ್ ನಲ್ಲಿ ಚೆಕ್ ನ ಹಾಗೆ ಕಂಡಿತು. ಅಗತ್ಯವಿದ್ದಾಗಲೆಲ್ಲಾ ದೇವರಿಂದ ದೊರೆತ ಸಹಾಯ, ಅವರನ್ನು ನಂಬಿಕೆಯಲ್ಲಿ ದೃಢಪಡಿಸಿತು.

 

ಮುಲ್ಲರ್ ಯಾವಾಗಲೂ ನೋಟ್ಬುಕ್ ಅನ್ನು ಇಟ್ಟುಕೊಂಡೇ ಇರುತ್ತಿದ್ದರು. ಅದರಲ್ಲಿ ಎರಡು ಭಾಗವಾಗಿ ಮಾಡಿ ಒಂದುಕಡೆ ತಾನು ದೇವರಿಗೆ ಸಲ್ಲಿಸಿದ ಮನವಿಗಳು, ಇನ್ನೊಂದು ಕಡೆ ಅವುಗಳಿಗೆ ಸಿಕ್ಕಿದ ಉತ್ತರಗಳನ್ನು ಬರೆದಿಡುತ್ತಿದ್ದರು. ಇದರಂತೆ ಅವರ ವಿಜ್ಞಾಪನೆಗಳಿಗೂ ಮತ್ತು ನಿರ್ದಿಷ್ಟವಾಗಿ ಸ್ಪಷ್ಟವಾಗಿ ದೊರೆತ ಉತ್ತರಗಳ ಕುರಿತಾದ ಉತ್ತಮ ಆಧಾರ ಉಲ್ಲೇಖಗಳು ಇದ್ದವು. ಈ ಹವ್ಯಾಸವನ್ನು ಅನುಸರಿಸಿ ದೇವರ ಮಾರ್ಗದರ್ಶನವನ್ನು ಕಂಡು, ಕೃತಜ್ಞತೆಯಿಂದ ಬದುಕಲು ವಿಶ್ವಾಸಿಗಳಿಗೆ ಕಲಿಸಿದರು.

 

"...ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು" - ಯೋಹಾನ 16:24. ಹೌದು, ನಂಬಿಕೆಯ ವೀರನು ಎಂದು ಮುಲ್ಲರ್ ಅವರನ್ನು ಕರೆಯಲಾಯಿತು! ನಾವು ನಂಬಿದರೆ ದೇವರ ಮಹಿಮೆಯನ್ನು ಕಾಣಬಹುದು. ನಂಬಿಕೆಯ ಮೊದಲ ಹೆಜ್ಜೆ ಯಾಗಿ ನಾವು ಬಾಯಿ ತೆರೆಯಬೇಕು. ಸತ್ಯವೇದದಲ್ಲಿ ಆ ಕುರುಡನು ತನ್ನ ಬಾಯಿಯನ್ನು ತೆರೆದು, "ದಾವೀದ ಕುಮಾರನೇ ನನಗೆ ಕರುಣಿಸು" ಎಂದು ತನ್ನ ಬಾಯನ್ನು ಅಗಲವಾಗಿ ತೆರೆದು ಹೇಳಿದಂತೆಯೇ, ನಾವು ಸಹ ದೇವರನ್ನು ಕರೆಯಬೇಕು. ರಕ್ತಕುಸುಮ ರೋಗವಿದ್ದ ಸ್ತ್ರೀಯು ತನ್ನೊಳಗಿದ್ದ ನಂಬಿಕೆಯನ್ನು ಹೊರಪಡಿಸಲು ಜನಸಂದಣಿಯಲ್ಲಿ ಮುಂದೆ ಹೋಗಿ ಯೇಸುಕ್ರಿಸ್ತನ ವಸ್ತ್ರದ ಅಂಚನ್ನು ಮುಟ್ಟಿ ಸ್ವಸ್ಥತೆಯನ್ನು ಪಡೆದಂತೆಯೇ, ನಾವು ಕೂಡ ನಂಬಿಕೆಯನ್ನು ಪ್ರದರ್ಶಿಸಿದಾಗ ಖಂಡಿತವಾಗಿಯೂ ಅದ್ಭುತವನ್ನು ನೋಡುತ್ತೇವೆ. ನಂಬಿಕೆಯನ್ನು ವೃದ್ಧಿಮಾಡುವಂತಹ ಯೇಸುವನ್ನು ನೋಡಲು ನೀವು ಸಿದ್ಧರಿದ್ದೀರಾ?

- Mrs. ಬ್ಯೂಲಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

12 ಮಿಷನರಿಗಳ ಮೂಲಕ ಆಯಾ ರಾಜ್ಯಗಳಲ್ಲಿ 500 ಸಮರ್ಪಿತ ಮಿಷನರಿಗಳನ್ನು ದೇವರು ಎಬ್ಬಿಸಿಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş