Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.07.2022
Share:

By Village Missionary Movement

Wednesday, 13-Jul-2022

ಧೈನಂದಿನ ಧ್ಯಾನ(Kannada) – 14.07.2022

 

ಸುಳ್ಳು ತುಟಿ

 

"ಸುಳ್ಳುತುಟಿ ಯೆಹೋವನಿಗೆ ಹೇಸು;..." - ಜ್ಞಾನೋಕ್ತಿ 12:22

 

ನಾನು ನನ್ನ ಮನೆಯಿಂದ ಅಂಗಡಿಗೆ ಹೋಗುವಾಗ ರಸ್ತೆ ತುಂಬಾ ಅಸಹ್ಯಕರವಾಗಿ ಕೆಟ್ಟ ವಾಸನೆ ಬರುತ್ತಿತ್ತು. ಆದರೆ ಅದನ್ನು ದಾಟದೆ ನಾನು ಅಂಗಡಿಗೆ ಹೋಗಲು ಸಾಧ್ಯವಿಲ್ಲ. ನಾನು ಆ ಸ್ಥಳವನ್ನು ಒಂದು ರೀತಿಯಲ್ಲಿ ಹಾದುಹೋದೆ. ಹಿಂತಿರುಗಿ ಬರುವಾಗ ಮೇಲಿನ ವಾಕ್ಯ ನನಗೆ ನೆನಪಾಯಿತು. ನಾವು ಸುಳ್ಳು ಮಾತುಗಳನ್ನು ಮಾತನಾಡುವಾಗ ನಮ್ಮನ್ನೂ ಸಹ ದೇವರು ಅಸಹ್ಯವಾಗಿಯೇ ನೋಡುತ್ತಾರೆ.

 

ಸುಳ್ಳು ಹೇಳುವುದು ಅಷ್ಟು ದೊಡ್ಡ ಪಾಪವಾಗಿ ನಮಗೆ ಕಾಣುವುದಿಲ್ಲ. ಇತರರ ನಂಬಿಕೆಯನ್ನು ಗಳಿಸಬೇಕು, ನಾನು ಮಾಡುವ ಕೆಲಸವನ್ನು ಯಾರೂ ಟೀಕಿಸಬಾರದು ಎಂಬುದಕ್ಕಾಗಿ ಬಹಳ ಸುಲಭವಾಗಿ ಸುಳ್ಳು ಹೇಳಿಬಿಡುತ್ತೇವೆ. ದೇವರು ಇದನ್ನೆಲ್ಲಾ ಗಮನಿಸುತ್ತಿದ್ದಾರೆ ಎಂದೆಲ್ಲಾ ನಾವು ಯೋಚಿಸುವುದಿಲ್ಲ. ನಾವು ದೇವರಿಗೆ ಭಯಪಟ್ಟು ಜೀವಿಸಬೇಕು, ಅವರನ್ನು ಮೆಚ್ಚಿಸಬೇಕು ಎಂಬ ಭಾವನೆ ನಮ್ಮಲ್ಲಿದ್ದರೆ ಇಂತಹ ಸುಳ್ಳು ಮಾತುಗಳು ನಮ್ಮ ಬಾಯಲ್ಲಿ ಬರುವುದಿಲ್ಲ. ಸುಳ್ಳು ಮಾತನಾಡಿದರೆ ಆಗುವ ಪರಿಣಾಮಗಳ ಬಗ್ಗೆ ಸತ್ಯವೇದವು ಏನು ಹೇಳುತ್ತದೆ. ಇಲ್ಲಿದೆ...

 

ಸುಳ್ಳುಬಾಯಿ ಮುಚ್ಚಿಹೋಗುವುದು (ಕೀರ್ತನೆ 63:11) 

 

ಕಳ್ಳಸಾಕ್ಷಿಯು ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ತಪ್ಪಿಸಿಕೊಳ್ಳನು. (ಜ್ಞಾನೋ. 19:5) 

 

ಸುಳ್ಳಾಡುವವನು ಹಾಳಾಗುವನು. (ಜ್ಞಾನೋ. 19:9)

 

ಸುಳ್ಳು ನಾಲಿಗೆಯಿಂದ ವಸ್ತುವನ್ನು ಗಳಿಸುವುದು ಸಾವನ್ನು ಹುಡುಕುವವರ ಉಸಿರಾಟದಂತೆ. (ಜ್ಞಾನೋ. 21:6) 

 

ಅವರ ಬಾಯಿಂದ ಬರುವದೆಲ್ಲಾ ಪಾಪವೇ. ಅವರ ಅಹಂಕಾರದಿಂದಲೇ ಅವರು ಸಿಕ್ಕಿ ಬೀಳಲಿ. (ಕೀರ್ತನೆ 59:12) 

 

ಸುಳ್ಳುಗಾರನು ನನ್ನ ಮುಂದೆ ನಿಲ್ಲಕೂಡದು. (ಕೀರ್ತನೆ 101:7)

 

ಗರ್ವಿಷ್ಠರು ಮಾನಭಂಗಹೊಂದಲಿ. (ಕೀರ್ತನೆ 119:78)

 

ಸುಳ್ಳುಸಾಕ್ಷಿಯು ಮೋಸ ವನ್ನೂ ತೋರ್ಪಡಿಸುತ್ತಾನೆ. (ಜ್ಞಾನೋ. 12:17)

 

ಕರ್ತನು ಸುಳ್ಳು ನಾಲಿಗೆಯನ್ನು ದ್ವೇಷಿಸುತ್ತಾನೆ. (ಜ್ಞಾನೋ. 6:17)

 

ಸುಳ್ಳುಸಾಕ್ಷಿಯವನು ನಾಶವಾಗುವನು. (ಜ್ಞಾನೋ. 21:28)

 

ಹೌದು! ಸುಳ್ಳು ಮಾತನಾಡುವವರ ಬಗ್ಗೆ ಇನ್ನೂ ಅನೇಕ ವಿಷಯಗಳು ಸತ್ಯವೇದದಲ್ಲಿವೆ. ಪೇತ್ರನಿಗೆ ಧೈರ್ಯವಾಗಿ ಸುಳ್ಳು ಹೇಳಿದ ಅನನೀಯ, ಸಪ್ಫೈರಳ ಅಂತ್ಯವನ್ನು ತಿಳಿದಿದ್ದೇವೆ. ಆದ್ದರಿಂದ ಧೈರ್ಯವಾಗಿ ಸುಳ್ಳು ಹೇಳದಂತೆ ನಮ್ಮ ತುಟಿಗಳನ್ನೂ ಆತ್ಮಗಳನ್ನೂ ಕಾಪಾಡಿಕೊಳ್ಳೋಣ. ಆಮೆನ್!

- Sis.ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ದೇವರು ನಮಗೆ ನೀಡಿರುವ ದರ್ಶನವನ್ನು ನೆರವೇರಿಸಲು ಪ್ರತಿಯೊಂದು ರಾಜ್ಯದಿಂದಲೂ 12 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al