Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.07.2022
Share:

By Village Missionary Movement

Tuesday, 12-Jul-2022

ಧೈನಂದಿನ ಧ್ಯಾನ(Kannada) – 13.07.2022

 

ಸಹಾಯ ಬೇಕಾ?

 

"ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ" - ಇಬ್ರಿಯ 2:18

 

ತಮ್ಮ ಏಕೈಕ ಪುತ್ರಿ ರೇಚಲ್ ನ ವಿವಾಹವು ಇತ್ತೀಚೆಗೆ ನಡೆಯಿತು. ತಂದೆ ತನ್ನ ಮಗಳನ್ನು ನೋಡಲು ಹೋದಾಗ, ಮಗಳು ಮತ್ತು ಅಳಿಯ ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು. “ರೇಚಲ್, ನಿನಗೆ ಇಷ್ಟವಾದ ಮೀನುಗಳನ್ನು ತಂದಿದ್ದೇನೆ. ಬೇಗ ಅಡಿಗೆ ಮಾಡು. ಊಟ ಮಾಡೋಣ” ಎಂದರು ತಂದೆ. "ಅಪ್ಪಾ, ನಿಮ್ಮ ಅಳಿಯನಿಗೆ ಮೀನು ಇಷ್ಟವಿಲ್ಲ, ಹಾಗಾಗಿ ನಾನು ಈಗ ಮೀನು ಮಾಡೋದೇ ಬಿಟ್ಟುಬಿಟ್ಟೆ" ಎಂದು ರೇಚಲ್ ಹೇಳಿದಾಗ ಅಪ್ಪ ತುಂಬಾ ಸಂತೋಷಪಟ್ಟರು. ಏಕೆಂದರೆ ಒಬ್ಬರ ಇಷ್ಟವನ್ನು ಇನ್ನೊಬ್ಬರು ತಿಳಿದುಕೊಂಡು ವರ್ತಿಸಿದಾಗ ಮಾತ್ರವೇ ವೈವಾಹಿಕ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.

 

ನಾವು ಕೂಡ ಈ ಲೋಕದಲ್ಲಿ ಯೇಸು ಕ್ರಿಸ್ತನನ್ನು ಮೆಚ್ಚಿಸುವಂತೆ ಜೀವಿಸಲು ಕರೆಯಲ್ಪಟ್ಟಿದ್ದೇವೆ. “ನಾವು ಮಾಡುತ್ತಿರುವ ಈ ಕೆಲಸವು ಕರ್ತನಿಗೆ ಮೆಚ್ಚಿಕೆಯಾಗಿದೆಯೇ? ಇದನ್ನು ಅಂಗೀಕರಿಸುತ್ತಾರಾ?" ಎಂದು ಆತನ ಚಿತ್ತವನ್ನು ತಿಳಿದು ಜೀವಿಸುವಾಗ ನಾವು ಕೂಡ ಪಾಪದಿಂದ ದೂರ ಸರಿದು ಯಶಸ್ವಿ ಜೀವನ ನಡೆಸಬಹುದು. ದೇವರ ಚಿತ್ತವನ್ನು ಬಿಟ್ಟು ದೂರ ಹೋಗುವುದೇ ಪಾಪ. ಮೊದಲ ಮನುಷ್ಯ ಹೀಗೆ ದಾರಿ ತಪ್ಪಿ ಪಾಪ ಮಾಡಿದನು. ಆದರೆ ಎರಡನೇ ಆದಾಮನಾದ ಯೇಸು ಕ್ರಿಸ್ತನು ನಮ್ಮಂತೆಯೇ ಮಾಂಸ ಮತ್ತು ರಕ್ತವನ್ನು ಹೊಂದಿರುವ ನಿಜವಾದ ಮನುಷ್ಯನಾಗಿ ಈ ಲೋಕಕ್ಕೆ ಬಂದರು. ಅವರ ದೈವತ್ವಕ್ಕೂ ಮಾನವೀಯತೆಗೂ ಇರುವ ಸಂಬಂಧ ನಮಗೆ ಗೊತ್ತಿಲ್ಲ. ಆದರೆ ದೈವತ್ವಕ್ಕೆ ಯಾವುದೇ ಶೋಧನೆಯೂ ಇಲ್ಲ, ಪಾಪವೂ ಇಲ್ಲ. ಆದ್ದರಿಂದಲೇ, ಯೇಸು ಕ್ರಿಸ್ತನು ಪರಿಪೂರ್ಣ ಮನುಷ್ಯನಾಗಿ ಪರೀಕ್ಷಿಸಲ್ಪಟ್ಟಿರಬೇಕು. ಆದರೆ ಪರಿಶುದ್ಧನಾಗಿ ಜೀವಿಸಿದ್ದು ಹೇಗೆ?

 

ಪ್ರಿಯರೇ! ಯೇಸುಕ್ರಿಸ್ತನು ಯಾವಾಗಲೂ ತಂದೆಗೆ ಇಷ್ಟವಾದದ್ದನ್ನು ಮಾಡಿದ ಕಾರಣ, ಅವರು ತಂದೆಯೊಂದಿಗಿನ ಐಕ್ಯತೆಯೊಂದಿಗೂ, ದೇವರಾತ್ಮನ ಶಕ್ತಿಯಿಂದಲೂ ಮತ್ತು ಆಸಕ್ತಿಕರ ಪ್ರಾರ್ಥನೆಯಿಂದಲೂ ಶೋಧನೆಗಳನ್ನು ಜಯಿಸಿದರು. ಪಾಪಕ್ಕೆ NO ಎಂದು ಹೇಳಲಾಗದ ನಮಗೆ ಸಹಾಯ ಹಸ್ತ ಚಾಚಿದರು. ಏಕೆಂದರೆ ಈ ಪಾಪದ ಲೋಕದಲ್ಲಿ ಅವರು ಜೀವಿಸಿದಾಗ, ಸೈತಾನನಿಂದಲೂ, ಶತ್ರುಗಳಿಂದಲೂ, ಸಾಮಾನ್ಯ ಜನರಿಂದಲೂ, ಜನಾಂಗಗಳಿಂದಲೂ ಮತ್ತು ಶಿಷ್ಯರಿಂದಲೂ ಇಕ್ಕಟ್ಟುಗಳಿಗೊಳಗಾಗಿ ಶೋಧಿಸಲ್ಪಟ್ಟರೂ ಪಾಪ ಮಾಡದ ಕಾರಣ ಶೋಧಿಸಲ್ಪಡುವ ನಮಗಾಗಿ ಪರಿತಪಿಸಲು ಮತ್ತು ಸಹಾಯ ಮಾಡಲು ಶಕ್ತರಾಗಿದ್ದಾರೆ. ಆದ್ದರಿಂದ ನಾವು ಯೇಸುಕ್ರಿಸ್ತನ ಚಿತ್ತವನ್ನು ನಮ್ಮ ಚಿತ್ತವನ್ನಾಗಿ ಮಾಡಿಕೊಳ್ಳುವಾಗ, ಅವರನ್ನೇ ಅಂಟಿಕೊಂಡಿರುವಾಗ, ಅವರೇ ನಮಗೆ ಎಲ್ಲಾ ವಿಷಯಗಳಲ್ಲಿ ಸಹಾಯ ಮಾಡುತ್ತಾರೆ. ಹಲ್ಲೇಲೂಯಾ!

- A. ಬ್ಯೂಲಾ

 

ಪ್ರಾರ್ಥನಾ ಅಂಶ:

7000 ಸೇವಕರುಗಳ ಮೂಲಕ ಒಂದು ಲಕ್ಷ ಹಳ್ಳಿಗಳನ್ನು ಭೇಟಿ ಮಾಡಲು ತೆಗೆದುಕೊಳ್ಳುವಂತಹ ಪ್ರಯತ್ನಗಳಲ್ಲಿ ದೇವರ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al