Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.07.2022
Share:

By Village Missionary Movement

Monday, 11-Jul-2022

ಧೈನಂದಿನ ಧ್ಯಾನ(Kannada) – 12.07.2022

 

ಈಗಿನ ಕಾಲದ ಕಷ್ಟಗಳು

 

"ಹೇಗಂದರೆ ಕ್ರಿಸ್ತನ ಮೇಲೆ ನಂಬಿಕೆಯಿಡುವದೂ ಆತನಿಗೋಸ್ಕರ ಬಾಧೆಯನ್ನನುಭವಿಸುವದೂ ನಿಮಗೆ ಅನುಗ್ರಹವಾಗಿ ದೊರೆಯಿತು." - ಫಿಲಿಪ್ಪಿ 1:29

 

ಸೆರ್ಜೀ ತನ್ನ ದೇಶದ ಬಗ್ಗೆ ತೀವ್ರವಾದ ವೈರಾಗ್ಯವುಳ್ಳವನಾಗಿದ್ದನು. ಅವರು ಕಮ್ಯುನಿಸ್ಟ್ ಆದರ್ಶಗಳು ಮತ್ತು ರಷ್ಯಾದ ಸಿದ್ಧಾಂತಗಳಿಗೆ ತುಂಬಾ ಆಕರ್ಷಿತರಾಗಿದ್ದರು. ರಷ್ಯಾದ ರಹಸ್ಯ ಗುಪ್ತಚರ ಪೊಲೀಸರ ಒಂದು ನಿರ್ದಿಷ್ಟ ಪ್ರದೇಶದ ಮುಖ್ಯಸ್ಥನಾಗಿದ್ದು, ಕ್ರೈಸ್ತರನ್ನು ಹಿಂಸಿಸುವುದು ಮತ್ತು ಅವರನ್ನು ಜೈಲಿಗೆ ಹಾಕುವುದು ಇದೇ ಸೆರ್ಜೀಯ ಮುಖ್ಯ ಕೆಲಸವಾಗಿತ್ತು. ಕ್ರೈಸ್ತರು ಪ್ರಾರ್ಥನೆ ಮಾಡಲು ಗುಪ್ತ ಪ್ರದೇಶದಲ್ಲಿ ಸೇರುತ್ತಿದ್ದಾರೆಂದು ತಿಳಿದ ಅವರು ತಮ್ಮ ಗುಂಪಿನೊಂದಿಗೆ ಅಲ್ಲಿಗೆ ಧಾವಿಸಿದರು. ವಿಶ್ವಾಸಿಗಳು ಎದುರು ನೋಡದ ಸಮಯದಲ್ಲಿ ಒಳಗೆ ಪ್ರವೇಶಿಸಿ ಎಲ್ಲರನ್ನೂ ಹೊಡೆಯಲು ಪ್ರಾರಂಭಿಸಿದನು. ಅದರಲ್ಲಿ ನತಾಶಾ ಎಂಬ ಯುವತಿಯನ್ನೂ ಸಹ ಹೊಡೆದು ಚಿತ್ರಹಿಂಸೆ ನೀಡಿದ್ದಾನೆ. ಸೆರ್ಜೀಗೆ ಈಗ ಹೃದಯದಲ್ಲಿ ತುಂಬಾ ಸಂತೋಷವಾಯಿತು! ಇನ್ನು ಮುಂದೆ ಇವರು ಪ್ರಾರ್ಥನೆ ಮಾಡಲು ಎಲ್ಲಿಯೂ ಕೂಡುವುದಿಲ್ಲ ಎಂದು! ಮುಂದಿನ ವಾರ, ಕ್ರೈಸ್ತರು ಮತ್ತೊಂದು ಸ್ಥಳದಲ್ಲಿ ಸಣ್ಣ ಗುಂಪುಗಳಲ್ಲಿ ಪ್ರಾರ್ಥಿಸುತ್ತಿದ್ದಾರೆಂದು ತಿಳಿದುಬಂದ ನಂತರ, ಸೆರ್ಜೀ ಅಲ್ಲಿಗೂ ಹೋಗಿ ಪ್ರಾರ್ಥನೆ ಮಾಡುವವರನ್ನು ತಡೆದು ಹೊಡೆಯಲು ಪ್ರಾರಂಭಿಸಿದನು.

 

ಈಗ ಸೆರ್ಜೀಗೆ ಒಂದು ದೊಡ್ಡ ಆಶ್ಚರ್ಯ ಕಾದಿತ್ತು. ಹಿಂದಿನ ವಾರ ಕಿರುಕುಳಕ್ಕೊಳಗಾಗಿದ್ದ ಆ ಕ್ರೈಸ್ತ ಸಭೆಯಿಂದ ನತಾಶಾ ಎಂಬ ಯುವತಿ ಗಾಯಗಳೊಂದಿಗೆ ಪುನಃ ಈ ಸಭೆಗೆ ಬಂದಿದ್ದಳು. ಅವನು ದ್ವೇಷದ ಅತಿರೇಕಕ್ಕೆ ಹೋಗಿ ತನ್ನ ಒರಟು ಕೈಗಳಿಂದ ಬೆನ್ನಿಗೆ ಬಲವಾಗಿ ಆಕೆಯನ್ನು ಗುದ್ದಿದನು. ನಂತರ ಒಂದು ದಿನ ಸೆರ್ಜೀ ನತಾಶಾಳನ್ನು ಮತ್ತೊಂದು ಸಭೆಯಲ್ಲಿ ಮತ್ತೆ ನೋಡಿದನು. ನತಾಶಾ ಅವರ ದೃಢವಾದ ಆರಾಧನೆ ಮತ್ತು ಪ್ರಾರ್ಥನೆಯು ಸೆರ್ಜೀಯ ಹೃದಯದಲ್ಲಿ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿತು. ಕೆಲವೇ ವಾರಗಳಲ್ಲಿ, ಸೆರ್ಜೀಯು ಕೂಡ ದೇವರ ಪ್ರೀತಿಯೊಳಗೆ ಬಂದುಬಿಟ್ಟನು.

 

ಒಂದು ಯೌವನಸ್ಥ ಹುಡುಗಿಯ ಅಚಲವಾದ ಕ್ರೈಸ್ತ ನಂಬಿಕೆಯು ಕಠಿಣವಾದ ವ್ಯಕ್ತಿಯನ್ನೂ ಸಹ ಕ್ರಿಸ್ತನ ಬಳಿಗೆ ಕರೆದೊಯ್ಯಿತು. ಕೆಲವು ಸಂದರ್ಭಗಳಲ್ಲಿ ಮಹಾ ಸಂಕಟಗಳು ದೇವರ ನಾಮಕ್ಕೆ ಮಹಿಮೆ ತರುತ್ತವೆ ಎಂಬುದನ್ನು ನಾವು ತಿಳಿದಿದ್ದೇವೆ. ರಿಚರ್ಡ್ ಉಂಬ್ರಾಂಡ್ ಈ ರೀತಿಯಾಗಿ ಹೇಳುತ್ತಾರೆ, “ಜೈಲಿನ ಅನುಭವಗಳು ನಮಗೆ ದುಃಖವನ್ನುಂಟು ಮಾಡಲಿಲ್ಲ; ಬದಲಾಗಿ, ಅನೇಕ ಖೈದಿಗಳು ಪಶ್ಚಾತ್ತಾಪಪಟ್ಟು ರಕ್ಷಣೆ ಹೊಂದುವುದಕ್ಕಾಗಿ ಕರ್ತನು ನಮ್ಮನ್ನು ಸೆರೆಮನೆಯೊಳಗೆ ಕರೆದೊಯ್ದರು” ಎಂದು ಬರೆದಿದ್ದಾರೆ. ಈ ಸಂದೇಶವನ್ನು ಓದುತ್ತಿರುವ ನಿಮ್ಮಲ್ಲಿ ಅನೇಕರು ಉಪದ್ರವವೆಂಬ ಗುಹೆಗಳೊಳಗೆ ಹೋಗುತ್ತಿರಬಹುದು. ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ. ಹಾಗಾಗಿ ಈಗಿನ ಸಂಕಟಗಳಿಂದ ಬೇಸರಗೊಳ್ಳದಿರಿ. ಖಂಡಿತವಾಗಿಯೂ ನಿಮಗೆ ಎದುರಾಗುವ ಉಪದ್ರವಗಳು ನಿಮಗೆ ಕೀರ್ತಿ ತರುತ್ತವೆ ಮತ್ತು ನಿಮ್ಮ ಸುತ್ತಲಿರುವವರಲ್ಲಿ ಬದಲಾವಣೆಗಳನ್ನು ತರುತ್ತದೆ! ಆದ್ದರಿಂದ ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಹೇಳುವ ವಾಕ್ಯವೇ ನಿಜ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಸರಪಳಿ ಪ್ರಾರ್ಥನೆಯಲ್ಲಿ ಸೇರಿರುವ ಪ್ರತಿಯೊಬ್ಬರನ್ನೂ ಪ್ರಾರ್ಥನಾ ಆತ್ಮದಿಂದಲೂ, ಆತ್ಮಭಾರದಿಂದಲೂ ದೇವರು ತುಂಬಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş