Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.07.2022
Share:

By Village Missionary Movement

Monday, 11-Jul-2022

ಧೈನಂದಿನ ಧ್ಯಾನ(Kannada) – 11.07.2022

 

ಕಣ್ಮಣಿಯೇ ಕೇಳು

 

“ಪ್ರತಿಯೊಂದು ಉದ್ದೇಶವು ಆಲೋಚನೆಯಿಂದ ಸಫಲವಾಗುವದು; ಹಿತವಾದ ಸಲಹೆಯಿಂದ ಯುದ್ಧಮಾಡು” - ಜ್ಞಾನೋಕ್ತಿ 20:18

 

ಬಹುಮಹಡಿ ಕಟ್ಟಡದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಭೇಟಿ ಮಾಡಲು ವೃದ್ಧರೊಬ್ಬರು ಬಂದಿದ್ದರು. ಅಂದು ಅನಿರೀಕ್ಷಿತವಾಗಿ ಲಿಫ್ಟ್ ಕೆಲಸ ಮಾಡದ ಕಾರಣ, ಮನದಾಳದಲ್ಲಿ ಮಗನನ್ನು ನೋಡಬೇಕೆಂಬ ಭಾರೀ ಆಸೆಯಿಂದ ಕೈಯಲ್ಲಿ ಭಾರ ಹೊತ್ತು ಮೆಟ್ಟಿಲು ಹತ್ತತೊಡಗಿದರು. 3ನೇ ಮಹಡಿ ತಲುಪಿದಾಗ ನಿಟ್ಟುಸಿರು ಬಿಡುತ್ತಾ ನಿಂತು ಬಿಟ್ಟರು. ಅದನ್ನು ನೋಡಿ ಅಲ್ಲಿಗೆ ಬಂದ ಯುವಕನೊಬ್ಬ ಅಯ್ಯೋ! ಈ ವಯಸ್ಸಾದವರು ಕೈಯಲ್ಲಿ ಬ್ಯಾಗನ್ನು ಹಿಡಿದುಕೊಂಡು ಹೇಗೆ ಕೆಳಗಿಳಿಯಲು ಸಾಧ್ಯ ಎಂದು ಯೋಚಿಸಿ ಬೇಗನೇ ಬ್ಯಾಗನ್ನು ತೆಗೆದುಕೊಂಡು ವೇಗವಾಗಿ ಕೆಳಗಿಳಿದು ಹೋದನು. ಆ ಅಜ್ಜ ಎಷ್ಟೇ ಕರೆದರೂ ನಿಲ್ಲದೇ ಕೆಳಗೆ ತೆಗೆದುಕೊಂಡು ಹೋಗಿ ಬ್ಯಾಗನ್ನು ಇಟ್ಟು ಬಿಟ್ಟು, ನನ್ನ ಕೈಲಾದಷ್ಟು ಸಹಾಯ ಈ ಅಜ್ಜನಿಗೆ ಮಾಡಿದ್ದೇನೆ ಎಂದು ತನ್ನನ್ನು ತಾನೇ ಮೆಚ್ಚಿಕೊಂಡು ಹೊರಟು ಹೋದನು. ಕೆಳಗಿಳಿದ ಅಜ್ಜನೋ ತುಂಬಾ ನೊಂದುಕೊಂಡು ಮತ್ತೆ ಬ್ಯಾಗನ್ನು ಎತ್ತಿಕೊಂಡು ಹತ್ತಲು ಶುರು ಮಾಡಿದರು. ನಿಟ್ಟುಸಿರು ಬಿಡುತ್ತಾ 2ನೇ ಮಹಡಿಗೆ ಬಂದವರು ಸ್ವಲ್ಪ ಹೊತ್ತು ನಿಂತಿದ್ದಾಗ, ಅಲ್ಲಿಗೆ ಬಂದ ಯೌವ್ವನಸ್ಥ ಹುಡುಗಿಯೊಬ್ಬಳು ‘‘ಅಯ್ಯಾ! ನನ್ನ ಕೈಲಾದ ಸಹಾಯ ಮಾಡುತ್ತೇನೆ” ಎಂದು ಹೇಳಿ ಬ್ಯಾಗ್ ತೆಗೆದುಕೊಂಡು ಕೆಳಗಿಳಿಯತೊಡಗಿದಳು. ಹಿರಿಯರು ತನ್ನ ಪರಿಸ್ಥಿತಿಯನ್ನು ವಿವರಿಸಿದಾಗಲೂ ಅವಳು ಅರ್ಥಮಾಡಿಕೊಳ್ಳದೇ ಬ್ಯಾಗನ್ನು ಕೆಳಗೆ ತೆಗೆದುಕೊಂಡು ಹೋಗಿ ಇಟ್ಟುಬಿಟ್ಟು ಹೊರಟುಹೋದಳು. ಪಕ್ವತೆ ಇಲ್ಲದವರ ಕಾರ್ಯಗಳನ್ನು ಆಲೋಚಿಸುತ್ತಾ, ಏನು ಮಾಡುವುದೆಂದು ತಿಳಿಯದೇ ತವಕಿಸುತ್ತಾ ಮುಂದೆ ಹೋಗಬೇಕೆಂಬ ಬಯಕೆಯಿಲ್ಲದೆ ಆ ಅಜ್ಜ ನಿಂತುಬಿಟ್ಟರು. ಇದಕ್ಕೆ ಕಾರಣವೇನು? ಒಂದು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಪರಿಣಾಮವೇ ಇದು.

 

1 ಅರಸುಗಳು 12 ರಲ್ಲಿ, ಅದುವರೆಗೂ ದಾವೀದನು ಮತ್ತು ಸೊಲೊಮೋನನು ಆಳಿದ ಇಸ್ರಾಯೇಲ್ ರಾಜ್ಯವು ಎರಡು ಭಾಗಗಳಾಗಿ ವಿಂಗಡವಾದ ಸಂಭವವು ಬರೆಯಲ್ಪಟ್ಟಿದೆ. ಕಾರಣವೇನು? ಅನುಭವಸ್ಥರ ಆಲೋಚನೆಯನ್ನು ತಳ್ಳಿ ಬಿಟ್ಟು ತನ್ನಂತಹ ಯೌವನಸ್ಥರ ಸಲಹೆಯನ್ನು ಕೇಳಿ ಬೆಳವಣಿಗೆಯಿಲ್ಲದವರು ಹೇಳಿದ ಹಾಗೆಯೇ “ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗಿಸಿದರು. ನಾನು ನಿಮ್ಮ ನೊಗವನ್ನು ಇನ್ನೂ ಹೆಚ್ಚು ಭಾರವಾಗಿಸುತ್ತೇನೆ. ನನ್ನ ತಂದೆ ನಿಮ್ಮನ್ನು ಚಾವಟಿಯಿಂದ ಶಿಕ್ಷಿಸಿದರು. ನಾನು ನಿಮ್ಮನ್ನು ಚೇಳುಗಳಿಂದ ದಂಡಿಸುವೆನು” ಎಂದು ಜನರಿಗೆ ಕಟ್ಟುನಿಟ್ಟಿನ ಆಜ್ಞೆಯನ್ನು ಕೊಟ್ಟನು. ಇದರ ಪರಿಣಾಮವಾಗಿ, ಒಂದು ಬಣವು ಯಾರೊಬ್ಬಾಮನನ್ನು ತಮ್ಮ ರಾಜನನ್ನಾಗಿ ಆರಿಸಿಕೊಂಡದ್ದರಿಂದ ಇಸ್ರಾಯೇಲ್ ದೇಶವು ಯೂದಾ, ಇಸ್ರಾಯೇಲ್ ಎಂದು ಎರಡು ಭಾಗಗಳಾಗಿ ವಿಭಜನೆಯಾಯಿತು.

 

ಪ್ರೀತಿಯ ಯೌವ್ವನಸ್ಥರೇ, ನಿಮ್ಮ ಜೀವನದಲ್ಲಿ ನೀವು ಹಾದು ಹೋಗುತ್ತಿರುವ ಪರಿಸ್ಥಿತಿಗಳಲ್ಲಿ, ಸಮಸ್ಯೆಗಳಲ್ಲಿ ನೀವು ಯಾರ ಸಲಹೆಯನ್ನು ಕೇಳಿ ನಡೆಯುತ್ತಿದ್ದೀರ? ಅನನುಭವವಿಲ್ಲದ ಮತ್ತು ಬೆಳವಣಿಗೆ ಇಲ್ಲದವರ ಸಲಹೆಯನ್ನು ಕೇಳಿದರೆ ಅವರು ತಮಗೆ ಸರಿ ಅನಿಸಿದ್ದನ್ನು ಹೇಳಿ ನಿಮ್ಮನ್ನು ತೊಂದರೆಗಳಿಗೆ ಸಿಲುಕಿಸಿ ಒದ್ದಾಡುವಂತೆ ಮಾಡಿಬಿಡುತ್ತಾರೆ. ಎಲ್ಲಿ ಸಲಹೆ ಇಲ್ಲವೋ ಅಲ್ಲಿ ಜನರು ದಾರಿ ತಪ್ಪುತ್ತಾರೆ ಎಂದು ಸತ್ಯವೇದವು ಹೇಳುತ್ತದೆ. ದಾವೀದನು ತನಗೆ ಸಲಹೆ ನೀಡಿದ ಕರ್ತನನ್ನು ಸ್ತುತಿಸುತ್ತೇನೆ ಎಂದು ಹೇಳುತ್ತಾರೆ. ಯಾವುದೇ ವಿಷಯದಲ್ಲಿ "ನಾನು ನಿನಗೆ ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು" ಎಂದು ಹೇಳಿದ ಕರ್ತನ ಬಳಿ ಮೊದಲ ಆಲೋಚನೆ ಕೇಳಬೇಕು. ನಂತರ ನಿಮಗೆ ಮಾರ್ಗದರ್ಶನ ನೀಡುವ ಆಧ್ಯಾತ್ಮಿಕ ಹಿರಿಯರಿಂದ ಸಲಹೆ ಪಡೆದು ಅದರಂತೆ ವರ್ತಿಸಲು ಪ್ರಯತ್ನಿಸಬೇಕು. ಹಾಗೆ ಮಾಡುವುದರಿಂದ ನಿನ್ನ ಜೀವನವು ಸ್ಥಿರವಾಗಿರುತ್ತದೆ ಮತ್ತು ನೀನು ಸಭೆಗೂ, ಸಮಾಜಕ್ಕೂ ಆಶೀರ್ವಾದವಾಗಿ ಕಾಣುತ್ತೀಯ.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:

ಒಂದು ಮಿಷನರಿ ಕೊಠಡಿ ನಿರ್ಮಿಸಲು ಅಗತ್ಯವಿರುವ 2 ಲಕ್ಷ ರೂಗಳು ಪೂರೈಸಲ್ಪಡುವಂತೆ. ಮಿಷನರಿಗಳನ್ನು ಬೆಂಬಲಿಸುವ ಮಿಷನರಿ ಪಾಲುದಾರರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş