By Village Missionary Movement
Sunday, 10-Jul-2022ಧೈನಂದಿನ ಧ್ಯಾನ(Kannada) – 10.07.2022 (Kids Special)
ಅವಿಧೇಯ Duckling
"...ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ" – ಕೀರ್ತನೆ 32:5
ಸುಂದರವಾದ ಬಾತುಕೋಳಿ ತನ್ನ ಮೂರು ಮರಿಗಳೊಂದಿಗೆ ಸಂತೋಷದಿಂದ ವಾಸಿಸುತ್ತಿತ್ತು. ಸಂಜೆಯ ಸಮಯದಲ್ಲಿ, ತಾಯಿ ಬಾತುಕೋಳಿ ತನ್ನ ಮರಿಗಳನ್ನು ತಿನ್ನಲು ಮತ್ತು ನೀರಿನಲ್ಲಿ ಆಟವಾಡಲು ಜಾಲಿಯಾಗಿ enjoy ಮಾಡಲು, ಕರೆದೊಯ್ಯುತ್ತಿತ್ತು. ನೀವೂ ಆಟವಾಡಲು park ಗೆ ಹೋಗುತ್ತೀರ ಅಲ್ವಾ. ಅಪ್ಪ-ಅಮ್ಮನ ಜೊತೆ ಅಂಗಡಿಗೆ ಹೋಗುತ್ತೀರ ಅಲ್ವಾ. ಹಾಗೆ ಹೋದಾಗ ಹೇಳಿದ ಮಾತು ಕೇಳಿ ಒಳ್ಳೆ ಮಗುವಾಗಿ ಇರಬೇಕು. Ok-ನಾ? ಆ ಮರಿಗಳಲ್ಲಿ ಒಂದು ತುಂಬಾ ಚೇಷ್ಟೆ ಮಾಡುತ್ತಿತ್ತು. ಸರಿ ಬನ್ನಿ, ಟೈಮ್ ಆಯ್ತು, ಮನೆಗೆ ಹೋಗೋಣ ಎಂದು ಅಮ್ಮ ಕರೆದರೆ, ಚೇಷ್ಟೆ ಮಾಡುವ ಬಾತುಕೋಳಿ ಮರಿ ಮಾತ್ರ, "ಇದೋ ಬರ್ತಾ ಇದೀನಿ ಅಮ್ಮಾ ಸ್ವಲ್ಪ ಹೊತ್ತು" ಎಂದು ಹೇಳುತ್ತಾ ಆಟವಾಡುತ್ತಲೇ ಇರುತ್ತಿತ್ತು. “ನೀನು ಒಬ್ಬನೇ ಇಲ್ಲಿ ಇದ್ದೇ ಅಂದ್ರೇ, ನರಿಗಳೆಲ್ಲಾ ಬಂದು ಕಚ್ಚಿಬಿಡುತ್ತವೆ, ಅಮ್ಮನ ಜೊತೆ ಇದ್ದರೇನೆ ನಿನಗೆ ಸಂರಕ್ಷಣೆ” ಎಂದು ಹೇಳೋದನ್ನೆಲ್ಲಾ ಕಿವಿಗೆ ಹಾಕಿಕೊಳ್ಳದೇ ಇತ್ತು.
ಆ ಚೇಷ್ಟೆಯ ಬಾತುಕೋಳಿ ಮರಿ ಕಮಲದ ಎಲೆಗಳಲ್ಲಿ ತನ್ನನ್ನು ತಾನು ಮರೆಮಾಡಿಕೊಂಡು, ಕಳೆದುಹೋದಂತೆ ನಟಿಸುತ್ತಿತ್ತು. ಒಂದು ದಿನ ರಾತ್ರಿಯಾದ ಕಾರಣ ತಾಯಿ ಬಾತುಕೋಳಿ ಮನೆಗೆ ಹೊರಟಾಗ ಉಳಿದ 2 ಬಾತುಕೋಳಿಗಳು ತಾಯಿ ಹಿಂದೆಯೇ ಹೋಗಿಬಿಟ್ಟವು. ಇದು ಮಾತ್ರ "ನಾವು ಸ್ವಲ್ಪ ಸಮಯದ ನಂತರ ಹೋಗೋಣ. ಬೇಗ ಹೋಗಿ ಅಮ್ಮನನ್ನು ಹಿಡಿಯೋಣ” ಎಂದು ಜಾಲಿಯಾಗಿ ಈಜುತ್ತಾ, ಚಿಕ್ಕ ಮೀನುಗಳನ್ನು ತಿನ್ನುತ್ತಾ ಸಂತೋಷವಾಗಿತ್ತು. ದಿಢೀರೆಂದು ನರಿ ಕೂಗುವ ಸದ್ದು ಕೇಳಿದ ಕೂಡಲೇ ಭಯವಾಯಿತು.
ಅಯ್ಯೋ! ಅಮ್ಮ ಹೇಳಿದ ಮಾತನ್ನು ಕೇಳದೆ ಸಿಕ್ಕಿಹಾಕಿಕೊಂಡೆನೇ! ಅಷ್ಟೇ. ನಾನು ಇವತ್ತು ಸತ್ತೇ ಎಂದು ನೆನೆಸುತ್ತಾ ಭಯದಲ್ಲಿದ್ದಾಗ ಒಂದು ಉಪಾಯ ಹೊಳೆಯಿತು. ಸರಿ, ನಮ್ಮ God ಹತ್ತಿರ ಪ್ರಾರ್ಥಿಸೋಣ ಎಂದು ಯೋಚಿಸಿ, "ನನ್ನನ್ನು ಕಾಪಾಡಿ, Jesus ನಾನು ಇನ್ನು ಮುಂದೆ ಒಳ್ಳೆಯ ಮಗುವಾಗಿರುತ್ತೇನೆ, ನನಗೆ ಸಹಾಯ ಮಾಡಿ" ಎಂದು ಪ್ರಾರ್ಥಿಸಿತು. ಸುಂದರವಾಗಿ ಅರಳಿದ್ದ ಕಮಲದ ಹೂವುಗಳೊಳಗೆ ಹೋಗಿ ಕುಳಿತಾಗ, ಆ ಹೂ ಹಾಗೇ ತನ್ನನ್ನು ಮುಚ್ಚಿಕೊಂಡಿತು. ಬೆಳಿಗ್ಗೆ, ಸೂರ್ಯನ ಕಿರಣಗಳು ಕಮಲದ ಹೂವಿನ ಮೇಲೆ ಬಿದ್ದಾಗ, Super - ಆಗಿ ಆ ಹೂವು ಅರಳಿತು. ಬಾತುಕೋಳಿ ಮರಿ ತನ್ನ ಕಣ್ಣುಗಳನ್ನು ತೆರೆದು ನೋಡಿ, ತನ್ನನ್ನು ಭದ್ರವಾಗಿ ಕಾಪಾಡಿದ್ದಕ್ಕಾಗಿ Jesus - ಗೆ ಕೃತಜ್ಞತೆಯನ್ನು ಸಲ್ಲಿಸುತ್ತಲೇ ತನ್ನ ಮನೆಗೆ ಹೋಗಿ, ತನ್ನ ತಾಯಿ ಹೇಳುವ ಮಾತುಗಳಿಗೆ ವಿಧೇಯನಾಗಿ ಒಳ್ಳೆಯ ಮಗುವಾಗಿತ್ತು.
ಪ್ರೀತಿಯ ತಮ್ಮ - ತಂಗಿ, ಅವಿಧೇಯತೆ ಪಾಪವೇ ತಾನೇ! ಹೌದು ಇದೆಲ್ಲಾ ಒಂದು ಪಾಪವಾ? ಎಂದೆಲ್ಲಾ ಯೋಚಿಸಬಾರದು. ಪಾಪ ಭಯವನ್ನು ತರುತ್ತದೆ ಮತ್ತು ಭಯವು ನಮ್ಮ ಸಂತೋಷವನ್ನು ಕಸಿದುಕೊಳ್ಳುತ್ತದೆ. ಯೇಸುಪ್ಪನ ರಕ್ತವು ನಿನ್ನ ಪಾಪವನ್ನು delete ಮಾಡಿಬಿಡುತ್ತದೆ. ನೀನು ಯೇಸಪ್ಪನೊಂದಿಗೆ Chat ಮಾಡಲು ರೆಡೀನಾ?
- Mrs. ಜಾಸ್ಮಿನ್ ಸಮುವೇಲ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482