Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.07.2022
Share:

By Village Missionary Movement

Saturday, 09-Jul-2022

ಧೈನಂದಿನ ಧ್ಯಾನ(Kannada) – 09.07.2022

 

ನನ್ನನ್ನು ಕರಗಿಸಿದರೆ...

 

“ನೀವು ಲೋಕಕ್ಕೆ ಬೆಳಕಾಗಿದ್ದೀರಿ" - ಮತ್ತಾಯ 5:14

 

ಒಬ್ಬ ಯಜಮಾನನ ಮನೆಯಲ್ಲಿ ಅನೇಕ ಮೇಣದಬತ್ತಿಗಳನ್ನು ಇಡಲಾಗಿತ್ತು. ಅವುಗಳಲ್ಲಿ ಪ್ರತಿಯೊಂದೂ ಸುಂದರವಾದ ಬಣ್ಣಗಳಲ್ಲಿ, ವಿಭಿನ್ನ ಆಕಾರಗಳಲ್ಲಿ ಮತ್ತು ವಿಭಿನ್ನ ಗಾತ್ರಗಳಲ್ಲಿದ್ದವು. ಇವುಗಳಲ್ಲಿ ಒಂದೇ ಒಂದು ಮೇಣದಬತ್ತಿಯು ಮಾತ್ರ ತುಂಬಾ ಚಿಕ್ಕದಾಗಿಯೂ, ಅಲಂಕಾರವಿಲ್ಲದೇ, ಬಣ್ಣರಹಿತವಾಗಿಯೂ ಸಾಧಾರಣವಾಗಿಯೂ ಇತ್ತು. ಇದು ಇತರ ಮೇಣದಬತ್ತಿಗಳನ್ನು ನೋಡಿ, “ನಾನು ಅವುಗಳ ಹಾಗೆ ಸುಂದರವಾಗಿಯೋ ಅಥವಾ ದೊಡ್ಡ ಮಟ್ಟದಲ್ಲೋ ಇಲ್ಲ, ಆದರೆ ಅಂದವಿಲ್ಲದ ರೂಪದಲ್ಲಿದ್ದೇನೆ. ನನ್ನನ್ನು ಮಾತ್ರ ಯಾಕೆ ಹೀಗೆ ಉಂಟು ಮಾಡಿದರು? "ಯಾರು ನನ್ನನ್ನು ಇಷ್ಟಪಡುತ್ತಾರೆ?" ಎಂದು ಯೋಚಿಸುತ್ತಾ, ಚಿಂತಿಸುತ್ತಾ ದುಃಖದಲ್ಲಿತ್ತು.

 

ಒಂದು ರಾತ್ರಿ ಇದ್ದಕ್ಕಿದ್ದಂತೆ ಎಲ್ಲಾ ದೀಪಗಳು ಆರಿಹೋದಾಗ, ಮನೆಯ ಯಜಮಾನನು ಕೈಯಲ್ಲಿ ಬೆಂಕಿಕಡ್ಡಿಯೊಂದಿಗೆ ಮೇಣದಬತ್ತಿಯ ಕೋಣೆಗೆ ಬಂದನು. ಕೋಣೆಯಲ್ಲಿನ ಎಲ್ಲಾ ಮೇಣದಬತ್ತಿಗಳು "ಇಂದು ಯಜಮಾನನು ಯಾರನ್ನು ಉಪಯೋಗಿಸಲಿದ್ದಾರೆ" ಎಂದು ಕಾಯುತ್ತಿದ್ದರು. ಯಜಮಾನನು ತುಂಬಾ ಸಾಮಾನ್ಯವಾದ ಮೇಣದಬತ್ತಿಯನ್ನು ತೆಗೆದುಕೊಂಡು ಅದನ್ನು ಬೆಳಗಿಸಿ ಕೋಣೆಯ ಮಧ್ಯದಲ್ಲಿ ಇಟ್ಟರು. ಕತ್ತಲು ತುಂಬಿದ ಆ ಕೋಣೆ, ತನ್ನಿಂದ ತುಂಬಾ ಪ್ರಕಾಶಮಾನವಾಗಿರುವುದನ್ನು ನೋಡಿ ಮೇಣದಬತ್ತಿಗೆ ತುಂಬಾ ಸಂತೋಷವಾಯಿತು. ಆಗ ಆ ಮಾಮೂಲಿ ಮೇಣದ ಬತ್ತಿಯಲ್ಲಿ ಒಂದು ಸತ್ಯ ತಿಳಿಯಿತು. “ನಾನು ಉರಿಯುವ, ಕರಗುವ, ಬೆಳಕನ್ನು ನೀಡುವ ಮತ್ತು ಕತ್ತಲೆಯನ್ನು ಹೋಗಲಾಡಿಸುವ ಉದ್ದೇಶಕ್ಕಾಗಿ ರಚಿಸಲ್ಪಟ್ಟಿದ್ದೇನೆ. ಇದೆಲ್ಲದಕ್ಕೂ ಸುಂದರವಾದ ಬಣ್ಣ ಮತ್ತು ದೊಡ್ಡ ಆಕೃತಿ ಏಕೆ ಬೇಕು? ಇವೆಲ್ಲವೂ ಉರಿದು ಪ್ರಕಾಶಿಸುವಾಗ ಕರಗಿ ನಾಶವಾಗುವಂತದ್ದೇ ತಾನೇ. ನಾನು ಉರಿದು ಬೆಳಗುತ್ತೇನೆ ಮತ್ತು ಕತ್ತಲೆಯನ್ನು ಹೋಗಲಾಡಿಸುತ್ತೇನೆ ಎಂಬುದು ನನ್ನ ಒಡೆಯನ ನಿರೀಕ್ಷೆಯಾಗಿತ್ತು ಮತ್ತು ಇಂದು ನಾನು ಅವನ ಉದ್ದೇಶವನ್ನು ಪೂರೈಸಿದ್ದೇನೆ ಮತ್ತು ಕತ್ತಲೆಯನ್ನು ಹೋಗಲಾಡಿಸಲು ಉಪಯುಕ್ತನಾಗಿದ್ದೇನೆ. 

 

ಮತ್ತಾಯ 7:21 ನೇ ವಚನ ಹೇಳುತ್ತದೆ, "ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಹೊರತು, ಪರಲೋಕರಾಜ್ಯಕ್ಕೆ ಸೇರುವವನು ಯಾರು?" ಎಂದು.

 

ನಮ್ಮಲ್ಲಿ ಪ್ರತಿಯೊಬ್ಬರಿಗೂ ಪ್ರಾಪಂಚಿಕ ಐಶ್ವರ್ಯವಿದ್ದರೂ, ಸೌಂದರ್ಯವಿದ್ದರೂ, ಇಲ್ಲದಿದ್ದರೂ, ವಿದ್ಯಾವಂತರಿರಲಿ, ಇಲ್ಲದಿರಲಿ, ಈ ಎಲ್ಲ ವಿಷಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಎಲ್ಲಾ ಇದ್ದು ಬೆಳಗಲು ಸಾಧ್ಯವಾಗದ ಮೇಣದಬತ್ತಿಗಳಂತೆ ಇಲ್ಲದೇ ಸಾಮಾನ್ಯವಾಗಿದ್ದರೂ ಉರಿದು ಪ್ರಕಾಶಿಸುವ ಮೇಣದಬತ್ತಿಗಳಂತೆ, ನಮ್ಮನ್ನು ಸೃಷ್ಟಿಸಿದ ದೇವರ ಉದ್ದೇಶವನ್ನು ನೆರವೇರಿಸುವವರಾಗಿ ಬದುಕೋಣ!

- Mrs. ಜೆಬಕನಿ ಶೇಖರ್

 

ಪ್ರಾರ್ಥನಾ ಅಂಶ:

ಕೋವಿಲ್ ಪಟ್ಟಿಯಲ್ಲಿ ಇಂದು ನಡೆಯಲಿರುವ ಉಜ್ಜೀವನವನ್ನು ಬಯಸುವವರ ಕೂಟದಲ್ಲಿ ಉಜ್ಜೀವನವನ್ನು ಬಯಸುವವರು ಭಾಗವಹಿಸುವಂತೆ: ದೇವರ ನಾಮ ಮಹಿಮೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin