Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.07.2022
Share:

By Village Missionary Movement

Thursday, 07-Jul-2022

ಧೈನಂದಿನ ಧ್ಯಾನ(Kannada) – 08.07.2022

 

ಹಣೆಬರಹ ಬದಲಾಗೋಯ್ತು

 

 "…ನೀನು ಯಾವಾತನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳ ಬಂದಿಯೋ ಆ ಇಸ್ರಾಯೇಲ್‍ದೇವರಾದ ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ…" - ರೂತಳು 2:12

 

ಪ್ರಸಿದ್ಧ ಸೇವಕರೊಬ್ಬರು, ತನ್ನ ಆರಂಭಿಕ ದಿನಗಳಲ್ಲಿ ಸಾಲದ ಸಮಸ್ಯೆಯಿಂದ ವೇದನೆ ಪಡುತ್ತಾ, ತನ್ನ ತಂದೆ ಮಾಡಿದ ಸಾಲವನ್ನು ಹೇಗೆ ಮರುಪಾವತಿಸುವುದು ಎಂದು ತಿಳಿಯದೆ, ಯೇಸುಕ್ರಿಸ್ತನನ್ನು ತನ್ನ ರಕ್ಷಕನಾಗಿ ಸ್ವೀಕರಿಸಿದ್ದದರಿಂದ, ಮೋಸ ಮಾಡಲು ಮನಸ್ಸಿಲ್ಲದೇ, ಒಂದು ತುಂಡು ಕಾಗದವನ್ನು ತೆಗೆದುಕೊಂಡು, “ಸರ್, ನಾನು ನಾನು ನಿಮಗೆ ಕೊಡಬೇಕಾದ ಹಣವನ್ನು ತಕ್ಷಣವೇ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸ್ವಲ್ಪ ಸಹಿಸಿಕೊಳ್ಳಿ ಮತ್ತು ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ನಾನು ನಿಮ್ಮ ಹಣವನ್ನು ಶೀಘ್ರದಲ್ಲೇ ಹಿಂದಿರುಗಿಸುತ್ತೇನೆ” ಎಂದು ಬರೆದು ಸಾಲ ಕೊಟ್ಟಾತನಿಗೆ ಕೊಟ್ಟರು. ಆತನು ಅದನ್ನು ತೆಗೆದುಕೊಂಡು ಓದಿ ಹಿಸುಕಿ ಕೆಳಗೆ ಎಸೆದನು, "ತಮ್ಮಾ, ನಿನ್ನ ಕೈಬರಹ ಚೆನ್ನಾಗಿದೆ, ಆದರೆ ನಿನ್ನ ಕೈಬರಹ ಆ ಹಣೆಬರಹದಷ್ಟು ಚೆನ್ನಾಗಿಲ್ಲವೇ. ಮೊದಲು ಹಣ ಕೊಡಿ” ಎಂದು ಬಹಳ ಪರಿಹಾಸ್ಯವಾಗಿ ಹೇಳಿದರು. ಆ ಸೇವಕರು ಇದನ್ನು ಕೇಳಿ ಮುರಿದ ಮನಸ್ಸಿನೊಂದಿಗೆ ದೇವರ ಸನ್ನಿಧಾನಕ್ಕೆ ಹೋಗಿ, “ಯೇಸಪ್ಪಾ, ನಾನು ನಿಮ್ಮನ್ನು ಮಾತ್ರ ನಂಬುತ್ತೇನೆ. ನನ್ನ ಹಣೆ ಬರಹವನ್ನು ಬದಲಿಸಿ” ಎಂದು ಅಳಲು ತೋಡಿಕೊಂಡರು. ದೇವರ ದಯೆಯಿಂದ ಪರಿಹಾಸ್ಯ ನೋಟ, ಸಾಲ ಭಾರ ತೊಲಗಿ, ಅಂದು ಕೇವಲವಾಗಿ ಮಾತನಾಡಲ್ಪಟ್ಟ ಅದೇ ಕೈಬರಹದಿಂದ ಇಂದು ನೂರಾರು ಪುಸ್ತಕಗಳನ್ನು ಬರೆದು, ಬಹು ದೊಡ್ಡ ಸಭೆಯ ಸೇವಕರಾಗಿದ್ದುಕೊಂಡು, ಕರ್ತನಿಂದ ಶಕ್ತಿಯುತವಾಗಿ ಬಳಕೆಯಾಗುತ್ತಿರುವ ಪಾತ್ರೆಯಾಗಿ ಕಾಣಲ್ಪಡುತ್ತಿದ್ದಾರೆ.

 

ಸತ್ಯವೇದದಲ್ಲಿ, ಮೋವಾಬ್ಯಳಾದ ರೂತಳ ಜೀವನವೆಂಬ ಹಡಗು ಮುಳುಗಿತು. ಗಂಡನನ್ನು ಕಳೆದುಕೊಂಡ ಪರಿಸ್ಥಿತಿಯಲ್ಲಿ ತನ್ನ ಜನಾಂಗವನ್ನು, ದೇಶವನ್ನು, ತನ್ನ ದೇವರನ್ನು ಬಿಟ್ಟು ಬಿಟ್ಟು, ಅತ್ತೆಯನ್ನು ಹಿಂಬಾಲಿಸುವುದಲ್ಲದೆ, ಅವರ ದೇವರಾದ ಕರ್ತನನ್ನೇ ಅಂಟಿಕೊಂಡಳು. ಹೊಲದಲ್ಲಿ ಕೊಯ್ಯುವವರ ಹಿಂದಿನಿಂದ ಹಕ್ಕಲಾಯುತ್ತಿದ್ದ ಸ್ಥಳದಲ್ಲಿ ಬೋವಜನನ್ನು ನೋಡುವಂತೆ ಮಾಡಿದರು ಮತ್ತು ಆತನ ಕಣ್ಣುಗಳಲ್ಲಿ ರೂತಳಿಗೆ ದಯೆ ದೊರೆಯುವಂತೆ ಕರ್ತನು ಸಹಾಯ ಮಾಡಿದರು. ಎಲ್ಲವನ್ನೂ ಕಳೆದುಕೊಂಡ ಸ್ಥಿತಿಯಲ್ಲಿ ಬಂದ ರೂತಳಿಗೆ, ಅವರಿಂದ ಸಾಂತ್ವನ, ಒಳ್ಳೆಯ ಸಲಹೆ, ಅಂಗೀಕಾರ, ಆಶೀರ್ವಾದ ಮತ್ತು ಹೆಂಡತಿಯಾಗುವ ಹಕ್ಕು ಲಭಿಸಿತು. ಸಿವುಡುಗಳ ಮಧ್ಯದಲ್ಲಿ ಹಕ್ಕಲಾಯಲು ಬಂದವಳು, ಹೊಲಕ್ಕೆ ಯಜಮಾನಿಯಾದಳು.

 

ಲೋಕದ ಬೋವಜನ ಬಳಿಗೆ ಆಶ್ರಯವಾಗಿ ಬಂದ ರೂತಳ ಹಣೆಬರಹವೇ ಈ ಮಟ್ಟಿಗೆ ಬದಲಾಯಿತೆಂದರೆ ನಮ್ಮನ್ನು ಹುಡುಕಿ ಬಂದ ಪರಮ ಬೋವಜನಾದ ಯೇಸುವಿನ ಬಳಿ ನಾವು ಆಶ್ರಯವಾಗಿ ಬರುವಾಗ, ಅವರ ವಾಕ್ಯದಿಂದ ನಮ್ಮನ್ನು ಸಂತೈಸಿ, ನಮ್ಮನ್ನು ರಕ್ಷಿಸಿ ಮಕ್ಕಳನ್ನಾಗಿ ಮಾರ್ಪಡಿಸಿ, ನಡೆಯಬೇಕಾದ ಮಾರ್ಗವನ್ನು ಕಲಿಸಿಕೊಟ್ಟು ಎಲ್ಲಾ ರೀತಿಯ ಆಶೀರ್ವಾದಗಳಿಂದ ನಮ್ಮನ್ನು ತುಂಬಿಸಿ, ಆತನೊಂದಿಗೆ ಇರಲು ಮತ್ತು ಆತನೊಂದಿಗೆ ಆಳ್ವಿಕೆ ಮಾಡಲು ಸರಿಯಾದ ಅಧಿಕಾರವನ್ನೂ ಕೊಡುತ್ತಾರೆ. ಅದಕ್ಕೆ ನಾವೇನು ಮಾಡಬೇಕು? ದೂರದಲ್ಲಿದ್ದ ನಾವು ಹತ್ತಿರ ಬಂದು ದೇವರ ವಾಕ್ಯವನ್ನು (ಸಿವುಡುಗಳನ್ನು) ಸ್ವೀಕರಿಸುವವರಾಗಿ ಕಾಣಲ್ಪಟ್ಟು, ಅವರ ಪಾದಗಳೇ ನಮ್ಮ ಆಶ್ರಯವೆಂದಿರುವುದಾದರೆ ತಲೆಯಾದ ಕ್ರಿಸ್ತನಿಂದ ನಮ್ಮ ಹಣೆಬರಹ ಬದಲಾಗಿ ತಲೆಯೆತ್ತಿ ನಡೆಯುವವರಾಗಿ ಕಾಣಲ್ಪಡುತ್ತೇವೆ.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:

ಗೆತ್ಸೆಮನೆ ಕ್ಯಾಂಪಸ್‌ನಲ್ಲಿ ಪ್ರತಿ ಕೊಠಡಿಗೆ 2 ವ್ಯಕ್ತಿಗಳು ಇದ್ದು ತರಬೇತಿ ಪಡೆಯುವಂತೆ 60 ಮಿಷನರಿ ತರಬೇತಿ ಕೊಠಡಿಗಳನ್ನು ನಿರ್ಮಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş