Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.07.2022
Share:

By Village Missionary Movement

Wednesday, 06-Jul-2022

ಧೈನಂದಿನ ಧ್ಯಾನ(Kannada) – 07.07.2022

 

ಸಮಾಧಾನ 

 

"ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು" - ಯೆಶಾಯ 32:18

 

ಬೋಧಕರು ಎಸ್.ಪಿ. ಮಕ್ಕಾರ್ಟ್ನಿ, ಹಡ್ಸನ್ ಟೇಲರ್ ಅನ್ನು ಚೀನಾದಲ್ಲಿ ಭೇಟಿಯಾದಾಗ, ಅವರು ಹಲವು ವಿಧವಾದ ಒತ್ತಡಗಳ ಮಧ್ಯೆಯೂ, ಮೌನವಾಗಿರುವುದನ್ನು ಕಂಡು ಆಶ್ಚರ್ಯಪಟ್ಟರು. “ನೀವು ಲಕ್ಷಾಂತರ ಜನರೊಂದಿಗೆ ಸಂವಹನ ಮಾಡುತ್ತಿದ್ದೀರಿ; ನಾನು ಕೆಲವರಿಗೆ ಮಾತ್ರ ಸೇವೆ ಮಾಡುತ್ತಿದ್ದೇನೆ, ನಿಮ್ಮ ಪತ್ರಗಳು ಬಹಳ ಮುಖ್ಯ, ನನ್ನದೋ ಅದರೊಂದಿಗೆ ಹೋಲಿಸುವ ಮಟ್ಟಿಗೆ ಸಾಮಾನ್ಯವಾದದ್ದೇ. ಆದರೆ ನಾನು ಚಿಂತಿಸುತ್ತಾ ತುಂಬಾ ಗೊಂದಲಕ್ಕೊಳಗಾಗಿದ್ದೇನೆ. ಆದರೆ ನೀವು ಹೇಗೆ ಮೌನವಾಗಿದ್ದೀರಿ? ” ಎಂದು ಕೇಳೇಬಿಟ್ಟರು. ಅದಕ್ಕೆ ಟೇಲರ್ ಪ್ರತ್ಯುತ್ತರವಾಗಿ, "ನನ್ನ ಮನಸ್ಸು ಮತ್ತು ಆಲೋಚನೆಗಳು ಬುದ್ಧಿಗೆಟುಕದ ಸಮಾಧಾನದಿಂದ ತುಂಬಿರದಿದ್ದರೆ ನಾನು ಈ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ." ಎಂದು ಹೇಳಿದರು. ಅವರು ಯಾವಾಗಲೂ ಕರ್ತನೊಂದಿಗೆ ಇದ್ದರು. ಇದನ್ನೇ ಯೋಹಾನ 15ನೇ ಅಧ್ಯಾಯದಲ್ಲಿ ಹೇಳಲ್ಪಟ್ಟಿರುವ ನಿಜವಾದ ಸಮರ್ಥನೆಯಾಗಿದೆ ಎಂದು ಮಕ್ಕಾರ್ಟ್ನಿ ಬರೆದಿದ್ದಾರೆ.

 

ಕ್ರಿಸ್ತನಲ್ಲಿ ಪ್ರಿಯರೇ, ನಾವು ಯೆಶಾಯನ ಪ್ರವಾದಿಯ ಮೂಲಕ, "ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು" ಎಂದು ಹೇಳಲ್ಪಟ್ಟಿರುವುದನ್ನು ಓದುತ್ತೇವೆ. ಅದು ಮಾತ್ರವಲ್ಲದೇ ಯೆಶಾಯ 26:3 - ರಲ್ಲಿ ಓದುವಾಗ, "ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ"ಎಂದು ಓದುತ್ತೇವೆ. ದೇವ ಜನರಿಗೆ ಸಮಾಧಾನ ಎಂಬುದು ನಾವು ಒರಗಿಕೊಂಡಿರುವ ಸ್ಥಳದ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ, ಒಬ್ಬರಿಗೆ ಕ್ರಿಸ್ತನೊಂದಿಗಿರುವ ಸಂಬಂಧವನ್ನೇ ಅವಲಂಬಿಸಿರುತ್ತದೆ. ಪವಿತ್ರಾತ್ಮನು ಸತ್ಯವೇದದಲ್ಲಿ ಅನೇಕ ವಾಕ್ಯಗಳಲ್ಲಿ ಸಮಾಧಾನದ ಬಗ್ಗೆ ಮಾತನಾಡಿದ್ದಾರೆ. ನಾವು ಕರ್ತನಲ್ಲಿದ್ದೇವೆ ಎಂಬುದನ್ನು ಯಾವುದರಿಂದ ನಿರ್ಣಯಿಸಬಹುದು. ನೀವು ಚಿಂತೆಗೊಳಗಾಗುವ ಪರಿಸ್ಥಿತಿ ಉಂಟಾಗುವಾಗ ಕೃತಜ್ಞತಾ ಸ್ತುತಿಯೊಂದಿಗೆ ಕೂಡಿದ ಪ್ರಾರ್ಥನೆಯೊಂದಿಗೆ ದೇವರನ್ನು ಹುಡುಕುವಾಗ, ಎಲ್ಲಾ ಗ್ರಹಿಕೆಯನ್ನೂ ವಿಾರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ ಮನಸ್ಸು ಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ಕಾಯುವದು. ಕೀರ್ತನೆಯಲ್ಲಿ ದಾವೀದನು ಹೇಳುವಾಗ, "ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುತ್ತದೆ; ಅಂಥವರಿಗೆ ವಿಘ್ನಕರವಾದದ್ದೇನೂ ಇರುವದಿಲ್ಲ" ಎಂದು ಹೇಳುತ್ತಾರೆ. ಸಮಾಧಾನವಾಗಿ ಬದುಕಲು ಬಯಸುವವರು ಸಮಾಧಾನವನ್ನು ಹುಡುಕಿಕೊಂಡು ಬೇರೆಲ್ಲಿಯೂ ಓಡಬೇಕಾಗಿಲ್ಲ. ಅದು ಕ್ರಿಸ್ತನಲ್ಲಿದೆ. ನೀವು ಸಮಾಧಾನವಾಗಿ ಬದುಕಲು ಯೇಸುವನ್ನು ಹುಡುಕುತ್ತಾ ಬನ್ನಿ. ಈ ಲೋಕವು ನೀಡಲಾಗದ ನಿಜವಾದ ಸಮಾಧಾನವನ್ನು ನೀವು ಪಡೆದುಕೊಳ್ಳಲು ಸಾಧ್ಯ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಪ್ರಪಂಚವನ್ನೇ ಕದಲಿಸುವಂತಹ 120 ಹೊಸ ಮಿಷನರಿಗಳನ್ನು ದೇವರು ನಮ್ಮೊಂದಿಗೆ ಸೇರಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al