Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.07.2022
Share:

By Village Missionary Movement

Wednesday, 06-Jul-2022

ಧೈನಂದಿನ ಧ್ಯಾನ(Kannada) – 06.07.2022

 

ಹಗುರವಾದ ಹೊರೆ

 

"ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ!..ನಾನು ನಿಮಗೆ ವಿಶ್ರಾಂತಿಕೊಡುವೆನು" - ಮತ್ತಾಯ 11:28

 

ಸಾಲದ ಸಮಸ್ಯೆ, ಆರ್ಥಿಕ ಮುಗ್ಗಟ್ಟು, ಪ್ರೇಮ ವೈಫಲ್ಯ, ವ್ಯಾಸಂಗದಲ್ಲಿ ಸೋಲು, ಮಾತಿನ ಅಸಹಿಷ್ಣುತೆ, ಸಂಬಂಧಗಳಲ್ಲಿನ ಕಹಿ ಹೀಗೆ ಹಲವು ಕಾರಣಗಳಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಸಣ್ಣ ವಿಷಯಕ್ಕೆಲ್ಲಾ ಆತ್ಮಹತ್ಯೆ ಎನ್ನುವಂತಹ ಪರಿಸ್ಥಿತಿಗೆ ನಮ್ಮ ದೇಶ ಹೋಗುತ್ತಿದೆ ಎಂಬ ಆತಂಕ ಎದುರಾಗಿದೆ. ಇನ್ನೂ ನೋವಿನ ಸಂಗತಿ ಎಂದರೆ ಸಂಸಾರವನ್ನು, ಯುವ ಪೀಳಿಗೆಯನ್ನು ಮುನ್ನಡೆಸಬೇಕಾದ ಅಪ್ಪ-ಅಮ್ಮನ ಸ್ಥಾನದಲ್ಲಿರುವವರೇ ಮಕ್ಕಳನ್ನು ಸಾಯಿಸುತ್ತಿದ್ದಾರೆ. ಬದುಕಿ ಬಾಳಬೇಕಾದವರು ಚಿಕ್ಕ ವಯಸ್ಸಿನಲ್ಲೇ ಸತ್ತುಹೋಗುತ್ತಿದ್ದಾರೆ. ಈ ರೀತಿಯ ಸುದ್ದಿಗಳನ್ನು ಕೇಳುವ ಮತ್ತು ನೋಡುವ ಇತರ ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಯೋಚಿಸಿ ನೋಡಿದರೇನೆ ತುಂಬಾ ದುಃಖವಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಹೆಚ್ಚಿನವರು "ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ?" ಎಂದು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. ಮಾನವ ಜೀವನದ ಅರ್ಥ ಮತ್ತು ಉದ್ದೇಶವನ್ನು ಮರೆತು ಜೀವನದ ಭಾರವನ್ನು ಹೊರಲಾರದೆ ಅನೇಕರು ಬದುಕುವ ವಯಸ್ಸಿನಲ್ಲಿ ತಮ್ಮ ಜೀವನವನ್ನು ಕಳೆದುಕೊಂಡರು.

 

ಪರಿಶುದ್ಧ ಗ್ರಂಥದಲ್ಲಿ, ಕರ್ತನಾದ ಯೇಸುಕ್ರಿಸ್ತನು ಬದುಕುವ ಮಾರ್ಗವನ್ನು ಬೋಧಿಸುತ್ತಿದ್ದಾರೆ. ಮತ್ತಾಯ. 11:28, 29, 30 ಈ ಮೂರು ವಚನಗಳಲ್ಲಿ ಹೊರೆ ಹೊತ್ತವರನ್ನು ತನ್ನ ಕಡೆಗೆ ಕರೆದು, "ನನ್ನ ಬಳಿಗೆ ಬನ್ನಿರಿ ನನ್ನ ಬಳಿ ಕಲಿತುಕೊಳ್ಳಿರಿ" ಎಂದು ಮಾತನಾಡುತ್ತಿದ್ದಾರೆ.  

 

ಪ್ರಿಯರೇ! ಆತನು ಮಾತ್ರವೇ ನಮ್ಮ ಜೀವನದ ಚಿಂತೆಗಳನ್ನು ಬದಲಾಯಿಸಲು ಸಾಧ್ಯ. ಅವರು ಮಾತ್ರವೇ ನನ್ನ ಹೊರೆ ಹಗುರವೆಂದು ಹೇಳುತ್ತಿದ್ದಾರೆ. ಯೇಸುಕ್ರಿಸ್ತನು ಜನರಿಗಾಗಿ ಹಿಂಸೆಯನ್ನು ಅನುಭವಿಸಿ, ಶಿಲುಬೆಯಲ್ಲಿ ತನ್ನ ರಕ್ತವನ್ನು ಸುರಿಸಿ ಮರಣಹೊಂದಿ, ಮೂರನೆಯ ದಿನ ಜೀವಂತವಾಗಿ ಎದ್ದರು; ಆತನ ಸಂಕಟಗಳನ್ನು ನೆನಪಿಸಿಕೊಂಡು ಆತನನ್ನು ನಂಬುವಂತೆ ಸತ್ಯವೇದವು ನಮ್ಮನ್ನು ಕರೆಯುತ್ತಿದೆ.

 

ಸ್ನೇಹಿತರೇ! ಬದುಕು ಬಾಳುವುದಕ್ಕಾಗಿಯೇ ಹೊರತು ಸಾಯುವುದಕ್ಕಾಗಿ ಅಲ್ಲ. ನಮ್ಮ ದಾರಿಯಲ್ಲಿ ಬರುವ ಸಮಸ್ಯೆಗಳಿಂದ ಬೇಸತ್ತು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಕರ್ತನಾದ ಯೇಸು ಕ್ರಿಸ್ತನ ಕಷ್ಟಗಳನ್ನು ನಾವು ನೆನಪಿಸಿಕೊಂಡರೆ, ಖಂಡಿತವಾಗಿಯೂ ನಮ್ಮ ಜೀವನದ ಹೊರೆ ಹಗುರವಾಗುತ್ತದೆ. ನೀವು ಯಾವುದನ್ನೆಲ್ಲಾ ಭಾರವೆಂದು ಭಾವಿಸುವಿರೋ ಅದನ್ನೆಲ್ಲಾ ಕರ್ತನ ಬಳಿ ಹೇಳಿ, ಆತನ ವೇದ ವಾಕ್ಯಗಳನ್ನು ಧ್ಯಾನಿಸುವುದರಲ್ಲಿ ಸ್ಥಿರಚಿತ್ತರಾಗಿರಿ. ಇದನ್ನು ಒಂದು ತುರ್ತು ಜಗತ್ತು ಎಂದು ಕರೆಯತ್ತಾರೆ. ಆದರೆ ಜೀವನವನ್ನು ಆತುರದಿಂದ ಅಲ್ಲ, ಶಾಂತವಾಗಿ ಬದುಕಬೇಕು. ನಿಮ್ಮ ಹೊರೆ ಹಗುರವಾಗಿದೆ ಎಂದು ತಿಳಿಯಿರಿ. ನೀವು ಅದರಿಂದ ಹೊರಬರಬಹುದು ಎಂದು ನಂಬಿರಿ. ನಿಮ್ಮ ಜೀವನ ಅದ್ಭುತವಾಗಿರುತ್ತದೆ! ಆಮೆನ್!

- T .ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಮಿಷಿನರಿಗಳ ಪ್ರಯಾಣಗಳಲ್ಲಿ ದೇವರು ಸುರಕ್ಷತೆಯನ್ನು ದಯಪಾಲಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş